For the best experience, open
https://m.hosakannada.com
on your mobile browser.
Advertisement

Paneer Fried Rice: ನೀವೂ ಸಹ ಸುಲಭ ಮತ್ತು ಅತೀ ಕಡಿಮೆ ಸಮಯದಲ್ಲಿ ಪನ್ನೀರ್ ಪ್ರೈಡ್ ರೈಸ್ ಮಾಡಿ!

Paneer Fried Rice: ಪನ್ನೀರ್ ಪ್ರೈಡ್ ರೈಸ್ ಅತೀ ಸುಲಭದಲ್ಲಿ ಕಡಿಮೆ ಸಮಯದಲ್ಲಿ ಮಾಡೋದು ಹೇಗೆ ಅಂತ ತಿಳಿಯೋಣ. ಇಲ್ಲಿದೆ ಕಂಪ್ಲೀಟ್‌ ರೆಸಿಪಿ ಡಿಟೈಲ್ಸ್‌
03:11 PM Jun 23, 2024 IST | ಕಾವ್ಯ ವಾಣಿ
UpdateAt: 03:11 PM Jun 23, 2024 IST
paneer fried rice  ನೀವೂ ಸಹ ಸುಲಭ ಮತ್ತು ಅತೀ ಕಡಿಮೆ ಸಮಯದಲ್ಲಿ ಪನ್ನೀರ್ ಪ್ರೈಡ್ ರೈಸ್ ಮಾಡಿ

Paneer Fried Rice: ಪ್ರೈಡ್ ರೈಸ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಯಾವಾಗ ಬೇಕಾದ್ರು ಪ್ರೈಡ್ ರೈಸ್ ತಿನ್ನಬಹುದು. ಹೌದು, ಇದಕ್ಕೆ ಯಾವ ಸಮಯ ಅಂತ ನೋಡಬೇಕಿಲ್ಲ ಬೇಕು ಅಂದಾಗ ತಿನ್ನಬಹುದು. ಅದರಲ್ಲೂ ಪನ್ನೀರ್ ಪ್ರೈಡ್ ರೈಸ್ (Paneer Fried Rice)  ಅಂದ್ರೆ ಇನ್ನೂ ಚೆನ್ನಾಗಿರುತ್ತೆ ಅಲ್ವಾ. ಬನ್ನಿ ಹಾಗಿದ್ರೆ ರುಚಿಕರವಾದ ಪ್ರೈಡ್ ರೈಸ್ ನ್ನು ಅತೀ ಸುಲಭದಲ್ಲಿ ಕಡಿಮೆ ಸಮಯದಲ್ಲಿ ಮಾಡೋದು ಹೇಗೆ ಅಂತ ತಿಳಿಯೋಣ.

Advertisement

Canara Bank: ಕೆನರಾ ಬ್ಯಾಂಕ್‌ ಗ್ರಾಹಕರಿಗೆ ಗುಡ್ ನ್ಯೂಸ್! ಸಿಗಲಿದೆ ಐದು ಲಕ್ಷ ಸಾಲ ಸೌಲಭ್ಯ!

ಬೇಕಾಗುವ ಸಾಮಗ್ರಿಗಳು:

Advertisement

ಪನ್ನೀರ್, ಈರುಳ್ಳಿ, ತುಪ್ಪ ಅಥವಾ ಎಣ್ಣೆ, ಕ್ಯಾರೆಟ್, ದಪ್ಪ ಮೆಣಸಿನಕಾಯಿ, ಕರಿಮೆಣಸಿನ ಪುಡಿ, ಖಾರದ ಪುಡಿ, ಬೇಯಿಸಿದ ಅನ್ನ. ರುಚಿಗೆ ತಕ್ಕಷ್ಟು ಉಪ್ಪು. ಕೊತ್ತಂಬರಿ ಸೊಪ್ಪು.

ಪನ್ನೀರ್ ಪ್ರೈಡ್ ರೈಸ್ ಮಾಡಲು ಮೊದಲಿಗೆ ಒಂದು ಬಾಣಲೆಯಲ್ಲಿ ನಿಮಗೆ ಬೇಕಾದಷ್ಟು  ಪನ್ನೀರ್ ನ್ನು ಮೀಡಿಯಂ ಸೈಜ್ ತುಂಡು ಮಾಡಿ ತುಪ್ಪದಲ್ಲಿ ಚೆನ್ನಾಗಿ ಪ್ರೈ ಮಾಡಿ ತೆಗೆದಿಡಬೇಕು.

 ಮೊದಲಿಗೆ ತುಪ್ಪ ಹಾಕಿ ಬಿಸಿ ಮಾಡಿದ ನಂತರ ಉದ್ದವಾಗಿ ಕತ್ತರಿಸಿಟ್ಟ ಈರುಳ್ಳಿಯನ್ನು ಹಾಕಿ. ಈರುಳ್ಳಿ ಕಂದು ಬಣ್ಣ ಬರುವವರೆಗೂ ಪ್ರೈ ಮಾಡಬೇಕು.  ಆಮೇಲೆ ಒಂದು ಅಥವಾ ಎರಡು ಕ್ಯಾರೆಟ್‌ಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಈರುಳ್ಳಿ ಪ್ರೈ ಆದ ಬಳಿಕ ಅದಕ್ಕೆ ಕ್ಯಾರೆಟ್ ಹಾಕಬೇಕು. ನಂತರ ತುಪ್ಪದಲ್ಲಿ ಹುರಿದುಕೊಂಡ ಪನ್ನೀರ್ ಹಾಕಬೇಕು.

ಆಮೇಲೆ ಕ್ಯಾಪಿಕಂ ಅಥವಾ ದಪ್ಪಮೆಣಕಾಯಿಯನ್ನು ಉದ್ದವಾಗಿ ಕತ್ತರಿಸಿ ಕ್ಯಾರೆಟ್ ಸ್ವಲ್ಪ ಪ್ರೈ ಆದ ಬಳಿಕ ಹಾಕಿ. ಮಾಂಸ ಸೇವನೆ ಮಾಡುವವರು ದಪ್ಪಮೆಣಸಿನಕಾಯಿ ಹಾಕಿದ ಬಳಿಕ ಒಂದು ಮೊಟ್ಟೆಯನ್ನು ಹಾಕಬಹುದು. ಎಲ್ಲವೂ ಪ್ರೈ ಆದ ಬಳಿಕ ಅರ್ಧ ಚಮಚ ಕರಿಮೆಣಸಿನ ಪುಡಿ ಅಥವಾ ಖಾರದ ಪುಡಿ ಹಾಕಿಕೊಳ್ಳಿ. ರುಚಿಗೆ ತಕ್ಕಚ್ಚು ಉಪ್ಪು ಸೇರಿಸಿ.

ಕೊನೆಗೆ ನೀವು ಈಗಾಗಲೇ ರೆಡಿ ಇಟ್ಟುಕೊಂಡಿರುವ ಅನ್ನವನ್ನು ಈ ಮಸಾಲೆಗೆ ಹಾಕಿ ಒಂದು ಸುತ್ತು ಪ್ರೈ ಮಾಡಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿರಿ. ಈಗ ರುಚಿಯಾದ ರೆಸ್ಟೋರೆಂಟ್ ಶೈಲಿಯ ಪನ್ನೀ‌ರ್ ಪ್ರೈಡ್ ರೈಸ್ ರೆಡಿಯಾಗುತ್ತೆ.

Basavangouda Patil Yatnal: ದೇಶದಲ್ಲಿರೋ 12 ಲಕ್ಷ ಎಕರೆ ವಕ್ಫ್ ಜಮೀನು ಬಡವರಿಗೆ ಹಂಚಿಕೆ ?! ಹೊಸ ಬಾಂಬ್ ಸಿಡಿಸಿದ ಯತ್ನಾಳ್

Advertisement
Advertisement
Advertisement