For the best experience, open
https://m.hosakannada.com
on your mobile browser.
Advertisement

Subramanyam swamy: 'ರಾಮ ಮಂದಿರ' ನಿರ್ಮಾಣಕ್ಕೆ ಪ್ರಧಾನಿ ಮೋದಿ ಏನೂ ಕೊಡುಗೆ ನೀಡಿಲ್ಲ - ಬಿಜೆಪಿಯ ಪ್ರಬಲ ನಾಯಕನಿಂದ ಶಾಕಿಂಗ್ ಸ್ಟೇಟ್ಮೆಂಟ್ !!

03:53 PM Jan 19, 2024 IST | ಹೊಸ ಕನ್ನಡ
UpdateAt: 03:53 PM Jan 19, 2024 IST
subramanyam swamy   ರಾಮ ಮಂದಿರ  ನಿರ್ಮಾಣಕ್ಕೆ ಪ್ರಧಾನಿ ಮೋದಿ ಏನೂ ಕೊಡುಗೆ ನೀಡಿಲ್ಲ   ಬಿಜೆಪಿಯ ಪ್ರಬಲ ನಾಯಕನಿಂದ ಶಾಕಿಂಗ್ ಸ್ಟೇಟ್ಮೆಂಟ್
Advertisement

Advertisement

Subramanyam swamy: ಅಯೋಧ್ಯೆಯಲ್ಲಿ ರಾಮ ಮಂದಿರದೊಳಗೆ ಶ್ರೀರಾಮನ ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರುವಾಗಿದ್ದು, ಇದೀಗ ಬಾಲ ರಾಮನ ಮೂರ್ತಿ ಕೂಡ ಮಂದಿರದ ಗರ್ಭಗುಡಿಯೊಳಗೆ ಪ್ರವೇಶಿಸಿಧೆ. ಜ.22ರಂದು ಪ್ರಧಾನಿ ಮೋದಿಯವರಿಂದ ರಾಮನ ಪ್ರತಿಷ್ಠಾಪನಾ ಕಾರ್ಯ ನೆರವೇರಲಿದ್ದು, ಇಡೀ ದೇಶ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಆದರೀಗ ಈ ಬೆನ್ನಲ್ಲೇ ಬಿಜೆಪಿ(BJP) ನಾಯಕ ಸುಬ್ರಹ್ಮಣ್ಯಂ ಸ್ವಾಮಿ(Subramanyam swamy)ಅವರು ಶಾಕಿಂಗ್ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಹೌದು, ರಾಮ ಮಂದಿರ(Rama mandir) ನಿರ್ಮಾಣ ಆಗಲು ಪ್ರಧಾನಿ ಮೋದಿಯೇ(PM Modi) ಕಾರಣ, ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಮಂದಿರ ನಿರ್ಮಾಣ ಮಾಡುತ್ತಿದ್ದಾರೆ, ಕೋಟ್ಯಾಂತರ ಹಿಂದೂಗಳ ನೂರಾರು ವರ್ಷಗಳ ಕನಸನ್ನು ನನಸು ಮಾಡುತ್ತಿದ್ದಾರೆಂದು ಇಡೀ ದೇಶವೇ ಕೊಂಡಾಡುತ್ತಿದೆ. ಆದರೆ ಈ ನಡುವೆ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಶಾಕಿಂಗ್ ಹೇಳಿಕೆ ನೀಡಿದ್ದು ರಾಮಮಂದಿರದ ವಿಚಾರದಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಸುಳ್ಳು ಹೇಳುತ್ತಿದ್ದಾರೆ, ರಾಮ ಮಂದಿರ' ನಿರ್ಮಾಣಕ್ಕೆ 'ಪ್ರಧಾನಿ ಮೋದಿ' ಏನೂ ಕೊಡುಗೆ ನೀಡಿಲ್ಲ ಎಂದು ಹೇಳಿದ್ದಾರೆ.

Advertisement

ಈ ಕುರಿತಂತೆ ಈ ಕುರಿತು ಟ್ವೀಟ್‌ ಮಾಡಿರುವ ಅವರು, ಅಯೋಧ್ಯೆಯ ರಾಮ ಮಂದಿರ ದೇವಾಲಯದ ಕತೃ ಮತ್ತು ನಿರ್ಮಾತೃ ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ. ಆದರೆ ಅವರ ಕೊಡುಗೆ ಏನೂ ಇಲ್ಲ. ಬರೀ ಶೂನ್ಯ. ಬದಲಿಗೆ ಮೋದಿ ಅವರು ಜ್ಞಾನವಾಪಿ ಜ್ಯೋತಿರ್ಲಿಂಗ, ಕಾಶಿ ದೇವಾಲಯವನ್ನು ಮರುನಿರ್ಮಾಣ ಮಾಡಬೇಕಾದ ತಮ್ಮ ವಾರಣಾಸಿ ಕ್ಷೇತ್ರದತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ಸದ್ಯ ಈ ವಿಚಾರ ಬಿಜೆಪಿಗೆ ಭಾರೀ ಮುಖಬಂಗ ಉಂಟುಮಾಡಿದೆ.

https://twitter.com/Swamy39/status/1748155455812284738?t=w5REGz3af5fVhsFYEjG9Eg&s=19

Advertisement
Advertisement
Advertisement