For the best experience, open
https://m.hosakannada.com
on your mobile browser.
Advertisement

Pregnant Tips: ಬುದ್ಧಿವಂತ ಮಗು ಪಡೆಯಲು ಗರ್ಭಿಣಿಯರಿಗೆ ಸೂಕ್ತ ಸಲಹೆ ನೀಡಿದ ರವಿಶಂಕರ್ ಗುರೂಜಿ !

Pregnant Tips: ಗರ್ಭಾವಸ್ಥೆಯಲ್ಲಿ ಮಗು ಬುದ್ಧಿವಂತನಾಗ್ಬೇಕು, ಗುಣವಂತನಾಗ್ಬೇಕು ಎಂದಾಗ ಗರ್ಭಿಣಿಯಾಗಿದ್ದಾಗ್ಲೇ ಕೆಲ ಕೆಲಸವನ್ನು ಅವಶ್ಯಕವಾಗಿ ಮಾಡ್ಬೇಕು. 
02:50 PM May 29, 2024 IST | ಕಾವ್ಯ ವಾಣಿ
UpdateAt: 02:51 PM May 29, 2024 IST
pregnant tips  ಬುದ್ಧಿವಂತ ಮಗು ಪಡೆಯಲು ಗರ್ಭಿಣಿಯರಿಗೆ ಸೂಕ್ತ ಸಲಹೆ ನೀಡಿದ ರವಿಶಂಕರ್ ಗುರೂಜಿ
Advertisement

Pregnant Tips: ಒಬ್ಬ ಹೆಣ್ಣು ಗರ್ಭ ಧರಿಸಲು ಕೆಲವೊಮ್ಮೆ ಸಾವಿರಾರು ಸವಾಲುಗಳು ಎದುರಿಸಬೇಕು. ಆದರೆ ಗರ್ಭಾವಸ್ಥೆಯಲ್ಲಿ ಏನು ಮಾಡ್ಬೇಕು, ಏನು ಮಾಡ್ಬಾರದು ಎಂಬುದನ್ನು ಮಹಿಳೆ ತಿಳಿದಿರಬೇಕು. ಈ ಸಮಯದಲ್ಲಿ ಮಹಿಳೆ ಮಾಡುವ ಕೆಲವೊಂದು ತಪ್ಪು ಗರ್ಭಿಣಿ ಹಾಗೂ ಆಕೆ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ತಾಯಿ ಮಾಡುವ ಕೆಲಸಗಳು ಹೊಟ್ಟೆಯಲ್ಲಿರುವ ಮಗುವಿನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹದಗೆಡಿಸುವ ಸಾಧ್ಯತೆ ಇರುತ್ತದೆ. ಗರ್ಭಾವಸ್ಥೆಯಲ್ಲಿ ಮಗು ಬುದ್ಧಿವಂತನಾಗ್ಬೇಕು, ಗುಣವಂತನಾಗ್ಬೇಕು ಎಂದಾಗ ಗರ್ಭಿಣಿಯಾಗಿದ್ದಾಗ್ಲೇ ಕೆಲ ಕೆಲಸವನ್ನು ಅವಶ್ಯಕವಾಗಿ ಮಾಡ್ಬೇಕು.

Advertisement

ಇದನ್ನೂ ಓದಿ: Sullia: ಎಟಿಎಂ ಸಾಗಾಟದ ಪಿಕಪ್‌ ಮತ್ತು ಕಾರು ನಡುವೆ ಭೀಕರ ಅಪಘಾತ

ಶ್ರೀ ಶ್ರೀ ರವಿಶಂಕರ್ ಜಿ, ಅವರು ಗರ್ಭಿಣಿಯರು ಏನು ಮಾಡಬೇಕು ಅಥವಾ ಅವರು ಯಾವ ವಿಷಯಗಳನ್ನು (Pregnant Tips) ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬ ಬಗ್ಗೆ ಸಲಹೆ ನೀಡಿದ್ದಾರೆ.

Advertisement

ಇದನ್ನೂ ಓದಿ: Aadhaar Card Link: ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದವರು ಈ ಕೆಲಸ ಮಾಡಿ! ಕೇಂದ್ರದಿಂದ ಪ್ಯಾನ್ ಕಾರ್ಡ್ ರದ್ದು ಮಾಡಲು ಆದೇಶ!

ಗರ್ಭಿಣಿಯಾದವಳು ಮಧುರ ಸಂಗೀತವನ್ನು ಹೇಳಬೇಕು ಎಂದು ರವಿಶಂಕರ್ ಗುರೂಜಿ (Ravi Shankar Guruji) ಹೇಳುತ್ತಾರೆ. ರಾತ್ರಿ ಮಲಗುವ ಸಮಯದಲ್ಲಿ ನೀವು ಸುಮಧುರ ಸಂಗೀತವನ್ನು ಕೇಳಬಹುದು. ಆದರೆ ಯಾವುದೇ ಕಾರಣಕ್ಕೂ ಗರ್ಭಿಣಿಯರು ಕ್ರೂರ, ಭಯಹುಟ್ಟಿಸುವ ಕೇಳಬಾರದು, ದೃಶ್ಯವನ್ನು ನೋಡಬಾರದು. ನಿಮ್ಮನ್ನು ಹೆದರಿಸುವ ವಿಷ್ಯದಿಂದ ದೂರ ಇರಬೇಕು ಎಂದು ಗುರೂಜಿ ಹೇಳಿದ್ದಾರೆ. ನೀವು ಸಂತೋಷವಾಗಿದ್ರೆ ಮಗು ಕೂಡ ಸಂತೋಷವನ್ನು ಅನುಭವಿಸುತ್ತದೆ ಎಂದಿದ್ದಾರೆ.

ಇನ್ನು ಸಾಂಪ್ರದಾಯಿಕ ದೇಶವಾದ ಭಾರತದಲ್ಲಿ ಗರ್ಭಿಣಿಯರು ಸದಾ ತಮ್ಮ ಬಳಿ ಹಸಿರು ಬಣ್ಣವನ್ನು ಇಟ್ಟುಕೊಳ್ಳಬೇಕು ಎನ್ನುತ್ತಾರೆ ರವಿಶಂಕರ್ ಗುರೂಜಿ. ಹಸಿರು ಬಣ್ಣವನ್ನು ನೋಡ್ತಿರಬೇಕು. ಅದೇ ಬಣ್ಣದ ಬಟ್ಟೆಯನ್ನು ಗರ್ಭಿಣಿಯರು ಧರಿಸಬೇಕು. ಒಂದಲ್ಲ ಒಂದು ರೂಪದಲ್ಲಿ ಹಸಿರು ಬಣ್ಣ ನಿಮ್ಮ ಕಣ್ಮುಂದೆ ಇರುವಂತೆ ನೋಡಿಕೊಳ್ಳಿ ಹಸಿರು ಬಣ್ಣ ನಿಮಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ ಎಂದು ಗುರೂಜಿ ಹೇಳಿದ್ದಾರೆ. ಹಸಿರು ಬಣ್ಣವು ಮಕ್ಕಳ ಜೊತೆ ಪ್ರೀತಿ ಸಂಬಂಧವನ್ನು ಹೊಂದಿದೆ. ಫಲವತ್ತತೆ, ಮಣ್ಣು, ಭೂಮಿಗೆ ಇದು ಸಂಬಂಧಿಸಿದೆ. ಅಲ್ಲದೆ ಹಸಿರು ಬಣ್ಣವು ಜನ್ಮದ ಸಂಕೇತ ಎನ್ನಲಾಗುತ್ತದೆ. ಹಸಿರು ಬಣ್ಣವು ಶಕ್ತಿ ಹಾಗೂ ಆರೋಗ್ಯದ ಜೊತೆ ನಂಟು ಹೊಂದಿದೆ. ಗರ್ಭಿಣಿ ಹಾಗೂ ಮಕ್ಕಳ ಮನಸ್ಸಿನಲ್ಲಿ ಧನಾತ್ಮಕತೆ ಬೆಳೆಯಬೇಕು, ಬುದ್ಧಿವಂತ ಮಗು ಜನಿಸಬೇಕು ಎನ್ನುವವರು ಹಸಿರು ಬಣ್ಣವನ್ನು ಹೆಚ್ಚಾಗಿ ಬಳಸಬೇಕು ಎಂದು ಹೇಳುತ್ತಾರೆ.

ಇನ್ನು ರವಿಶಂಕರ್ ಗುರೂಜಿ ಪ್ರಕಾರ, ಗರ್ಭಾವಸ್ಥೆಯಲ್ಲಿ ಕೆಂಪು ಮತ್ತು ಬೂದು ಬಣ್ಣದ ಬಟ್ಟೆಯನ್ನು ಧರಿಸಬಾರದು. ಅದನ್ನು ಮಹಿಳೆಯರು ತಮ್ಮ ಸುತ್ತ ಇಟ್ಟುಕೊಳ್ಳಬಾರದು. ಈ ಬಣ್ಣಗಳು ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತವೆ.

Advertisement
Advertisement
Advertisement