ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Fertility Increasing Fruit: ಪುರುಷ - ಮಹಿಳೆಯರ ಫಲವತ್ತತೆ ಹೆಚ್ಚಿಸುವಲ್ಲಿ ಈ ಹಣ್ಣು ಉಪಕಾರಿ!!

12:23 PM Jan 13, 2024 IST | ಅಶ್ವಿನಿ ಹೆಬ್ಬಾರ್
UpdateAt: 12:26 PM Jan 13, 2024 IST
Advertisement

Fertility Increasing Fruit: ಇಂದಿನ ಒತ್ತಡಯುತ ಜೀವನ ಶೈಲಿ,ಕಳಪೆ ಆಹಾರಪದ್ಧತಿ, ನಿದ್ರಾಹೀನತೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಪುರುಷರು ಮತ್ತು ಮಹಿಳೆಯರು ಫಲವತ್ತತೆಯ ಸಮಸ್ಯೆ ಎದುರಿಸುತ್ತಿದ್ದಾರೆ.ಇದಕ್ಕೆ ಮುಖ್ಯ ಕಾರಣವೆಂದರೆ ಪೋಷಕಾಂಶದ ಕೊರತೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಆದರೆ, ಈ ಒಂದು ಹಣ್ಣನ್ನು ಸೇವಿಸುವ(Best fruit for health) ಮೂಲಕ ಮಕ್ಕಳಾಗುವ ಸಂಭವನೀಯತೆಯನ್ನು (Fertility increasing fruit)ಹೆಚ್ಚಿಸಿಕೊಳ್ಳಬಹುದು.

Advertisement

ದಾಳಿಂಬೆ ಹಣ್ಣಿನಲ್ಲಿ(Pomegranate for health) ಪ್ರೋಟೀನ್, ವಿಟಮಿನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಂತಹ ಹಲವು ರೀತಿಯ ಪೋಷಕಾಂಶಗಳಿವೆ. ದಾಳಿಂಬೆ ಹಣ್ಣು ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಿನ್ನೆಲೆ ದಾಳಿಂಬೆ ಹಣ್ಣಿನ ಸೇವನೆ(Pomegranate for good health) ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅಷ್ಟೆ ಅಲ್ಲದೇ, ಪುರುಷರು ಮತ್ತು ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ದಾಳಿಂಬೆ ಹೆಚ್ಚು ಪ್ರಯೋಜನಕಾರಿ ಎಂದು ಆಹಾರ ತಜ್ಞರು ಹೇಳುತ್ತಾರೆ.

Advertisement

ದಾಳಿಂಬೆ ತಿನ್ನುವುದರಿಂದ ವೀರ್ಯದ ಸಂಖ್ಯೆ ಹೆಚ್ಚುತ್ತದೆ. ಇದು ವೀರ್ಯದ ಗುಣಮಟ್ಟವನ್ನೂ ಸುಧಾರಿಸುತ್ತದೆ. ಈ ಹಣ್ಣು ಕಾಮೋತ್ತೇಜಕ ಆಹಾರವಾಗಿದ್ದು, ದಾಳಿಂಬೆ ಸೇವನೆಯಿಂದ ಲೈಂಗಿಕ ಬಯಕೆ ಹೆಚ್ಚುತ್ತದೆ. ಫಲವತ್ತತೆಯ ಸಮಸ್ಯೆಯಿಂದ ಬಳಲುತ್ತಿರುವವರು (Pomegranates boost fertility)ದಾಳಿಂಬೆ ಹಣ್ಣನ್ನು ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ರಕ್ತಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ.

ದಾಳಿಂಬೆ ಹಣ್ಣು ಹಾರ್ಮೋನ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಕೂಡ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದನ್ನು ತಿನ್ನುವುದರಿಂದ ಪಿಸಿಓಎಸ್, ಸಂತಾನಶಕ್ತಿ, ಕೂದಲು ಉದುರುವಿಕೆ, ಮೊಡವೆ ಮೊದಲಾದ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ದಾಳಿಂಬೆ ಹಣ್ಣು ಹೃದಯ, ಚರ್ಮ, ಹೊಟ್ಟೆ, ಮೆದುಳು ಮತ್ತು ಕೂದಲನ್ನು ಆರೋಗ್ಯಕರವಾಗಿಡಲು ಉಪಯುಕ್ತವಾಗಿದೆ.ಎಲ್ಲಕ್ಕಿಂತ ಮುಖ್ಯವಾಗಿ ಈ ಹಣ್ಣನ್ನು ತಿನ್ನುವುದರಿಂದ ಪುರುಷರು ಮತ್ತು ಮಹಿಳೆಯರಲ್ಲಿ ಫಲವತ್ತತೆ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡ ರೋಗಿಗಳಿಗೂ ದಾಳಿಂಬೆ ಹಣ್ಣು ಉಪಕಾರಿ. ಈ ಹಣ್ಣನ್ನು ತಿನ್ನುವುದರಿಂದ ಹೃದಯವು ಆರೋಗ್ಯಕರವಾಗಿರುತ್ತದೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಸಹ ಕಡಿಮೆ ಮಾಡುತ್ತದೆ

ಇದನ್ನೂ ಓದಿ: Passport Index: ವಿದೇಶಕ್ಕೆ ಹಾರಲು ವೀಸಾ ಇಲ್ಲ ಎಂದು ಚಿಂತಿಸುತ್ತಿದ್ದೀರಾ?? ವೀಸಾ ಇಲ್ಲದೆ ನೀವು ಈ 62 ದೇಶಗಳಿಗೆ ಪ್ರಯಾಣಿಸಹುದು!! ಯಾವುದೆಲ್ಲ?? ಇಲ್ಲಿದೆ ನೋಡಿ ಡೀಟೈಲ್ಸ್!!

Related News

Advertisement
Advertisement