ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Minister S.Jayashankar: ಸಿ ಎ ಎ ವಿರುದ್ಧ ಅಪಸ್ವರ ಎತ್ತಿದ ಅಮೆರಿಕಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ ಸಚಿವ ಎಸ್ ಜಯಶಂಕರ್

10:30 AM Mar 18, 2024 IST | ಹೊಸ ಕನ್ನಡ
UpdateAt: 10:54 AM Mar 18, 2024 IST

ಇತ್ತೀಚಿಗೆ ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತಾಗಿ ಅಪಸ್ವರವೆತ್ತಿ, ಭಾರತದ ವಿರುದ್ಧ ಅನೇಕ ಟೀಕೆಗಳನ್ನು ಮಾಡಿದ್ದ ಅಮೇರಿಕಾಗೆ ಭಾರತದ ವಿದೇಶಾಂಗ ಸಚಿವ ಎಸ್ ಜಯಶಂಕರ್ ಅವರು ಸರಿಯಾದ ತಿರುಗೇಟು ನೀಡಿದ್ದಾರೆ.

Advertisement

ಇದನ್ನೂ ಓದಿ: Charmady: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ 16 ಚಕ್ರದ ಲಾರಿ; ಟ್ರಾಫಿಕ್‌ ಜಾಮ್‌

ನೀವು ಭಾರತದ ಇತಿಹಾಸವನ್ನು ಅರಿತಿಲ್ಲ ಎಂಬುದು ನಿಮ್ಮ ನಿಲುವುಗಳಿಂದ ಖಚಿತವಾಗಿದೆ ಎಂದು ಅಮೆರಿಕಕ್ಕೆ ಮಾತಿನ ಮೂಲಕ ಕಪಾಳ ಮೋಕ್ಷ ಮಾಡಿದ್ದಾರೆ.

Advertisement

ಇದನ್ನೂ ಓದಿ: Brijesh Chowta: ಕಾಂಗ್ರೆಸ್‌ನ ಗೂಂಡಾಗಿರಿ, ಗೊಡ್ಡು ಬೆದರಿಕೆಗೆ ಬಗ್ಗಲ್ಲ-ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಐತಿಹಾಸಿಕ ಘಟನೆಗಳನ್ನು ಅರ್ಥಮಾಡಿಕೊಳ್ಳದೆ ವಿದೇಶಗಳು ಸಿಎ ವಿಚಾರದಲ್ಲಿ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿವೆ. ಭಾರತ ವಿಭಜನೆಯಾಗಿಲ್ಲವೇನು ಎಂಬಂತೆ ವರ್ತಿಸುತ್ತಿವೆ.

ದೇಶ ವಿಭಜನೆಯಾದ ಉದ್ಭವಿಸಿದ ಎಲ್ಲಾ ಸಮಸ್ಯೆಗಳಿಗೂ ಸಿ ಎ ಎ ಪರಿಹಾರ ಒದಗಿಸುತ್ತದೆ ಎಂಬ ಅರಿವು ಅವರಿಗಿಲ್ಲ. ಅಮೇರಿಕಾ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ತತ್ವಗಳನ್ನು ಪ್ರಶ್ನಿಸುವುದಿಲ್ಲ, ಆದರೆ ಭಾರತೀಯ ಇತಿಹಾಸದ ಬಗ್ಗೆ ಅವರಿಗಿರುವ ತಿಳುವಳಿಕೆಯನ್ನ ಪ್ರಶ್ನಿಸುತ್ತೇನೆ.

ಅಮೆರಿಕಾದಲ್ಲಿ ಯಹೂದಿ ಕ್ರೈಸ್ತರಂತಹ ಜನಾಂಗೀಯ ಅಲ್ಪಸಂಖ್ಯಾತರಿಗೆ ಬೇಗನೆ ಪೌರತ್ವ ಕೊಡಲು ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾದ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಅಮೆರಿಕಾದ ಸಿಎಎ ವಿರುದ್ಧದ ಟೀಕೆಗಳಿಗೆ ಉತ್ತರಿಸಿದ್ದಾರೆ.

Advertisement
Advertisement
Next Article