For the best experience, open
https://m.hosakannada.com
on your mobile browser.
Advertisement

Kim Jong Un: ದೇಶದ ಜನರಲ್ಲಿ ವಿಚಿತ್ರ ಮನವಿ ಮಾಡಿ ಜೋರಾಗಿ ಕಣ್ಣೀರಿಟ್ಟ ಉತ್ತರ ಕೊರಿಯಾ ಅಧ್ಯಕ್ಷ !! ಅರೆ ಏನಿದು ಅಚ್ಚರಿ ಸುದ್ದಿ.. ಯಾಕಾಗಿ ?!

06:04 PM Dec 06, 2023 IST | ಹೊಸ ಕನ್ನಡ
UpdateAt: 06:04 PM Dec 06, 2023 IST
kim jong un  ದೇಶದ ಜನರಲ್ಲಿ ವಿಚಿತ್ರ ಮನವಿ ಮಾಡಿ ಜೋರಾಗಿ ಕಣ್ಣೀರಿಟ್ಟ ಉತ್ತರ ಕೊರಿಯಾ ಅಧ್ಯಕ್ಷ    ಅರೆ ಏನಿದು ಅಚ್ಚರಿ ಸುದ್ದಿ   ಯಾಕಾಗಿ
Advertisement

Kim Jong Un: ಉತ್ತರ ಕೊರಿಯಾದ ಕಠಿಣ ಪರಿಸ್ಥಿತಿಗಳ ಬಗ್ಗೆ ನಿಮಗೆಲ್ಲಾ ಚೆನ್ನಾಗಿ ತಿಳಿದಿದೆ. ಅಲ್ಲಿನ ಅಧ್ಯಕ್ಷ ಕಿಮ್ ಜೊಂಗ್ ಉನ್((Kim Jong Un) ವಿಚಿತ್ರ ಕಾನೂನುಗಳನ್ನು ಜಾರಿಗೆ ತಂದು, ಅವುಗಳನ್ನು ತನ್ನ ಪ್ರಜೆಗಳ ಮೇಲೆ ಹೇಳಿ ನಾನಾ ರೀತಿಯ ಸಮಸ್ಯೆ ತಂದೊಡ್ಡುತ್ತಾನೆ. ಒಟ್ಟಿನಲ್ಲಿ ಸರ್ವಾಧಿಕಾರಿ ಆಡಳಿತವನ್ನು ನಡೆಸುತ್ತಾನೆ. ಆದರೆ ವಿಚಿತ್ರ ಎಂಬಂತೆ ಅಥವಾ ಬಹುಶಃ ಇದೇ ಮೊದಲ ಬಾರಿ ಎಂಬಂತೆ ಈ ಕಿಮ್ ಜೊಂಗ್ ತನ್ನ ಪ್ರಜೆಗಳಲ್ಲಿ ವಿಚಿತ್ರವಾದ ಮನವಿಯೊಂದನ್ನು ಮಾಡಿ ಕಣ್ಣೀರಿಟ್ಟಿದ್ದಾನೆ !!

Advertisement

ಹೌದು, ಇದೇನಪ್ಪಾ ಇದು ಆಶ್ಚರ್ಯ ಅನ್ನಬೇಡಿ. ಅಥವಾ ಸುಳ್ಳು ಸುದ್ದಿ ಎಂದೂ ಭಾವಿಸಬೇಡಿ. ಇದು ನಿಜವಾದ ಘಟನೆ. ಉತ್ತರ ಕೊರಿಯಾದ(North korea)ಈ ಅಧ್ಯಕ್ಷ ಮಹಾಶಯ ತನ್ನ ದೇಶದ ಮಹಿಳೆಯರು ಹೆಚ್ಚಿನ ಮಕ್ಕಳನ್ನು ಹೊಂದಬೇಕು ಎಂದು ಮನವಿ ಮಾಡಿ ಜೋರಾಗಿ ಕಣ್ಣೀರಿಟ್ಟಿದ್ದಾರೆ.

ಇದನ್ನು ಓದಿ:Central government: ದೇಶಾದ್ಯಂತ ಎಲ್ಲಾ ರೈತರಿಗೂ ಬಿಗ್ ಶಾಕ್ ಕೊಟ್ಟ ಮೋದಿ ಸರ್ಕಾರ- ಚುನಾವಣೆ ಹೊತ್ತಲ್ಲಿ ಏನಿದು ಸರ್ಕಾರದ ಹೊಸ ನಡೆ ?!

Advertisement

ಅಂದಹಾಗೆ ಕಾರ್ಯಕ್ರಮವೊಂದರಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುವಾಗ ಕಿಮ್‌ ಜಾಂಗ್‌ ಉನ್‌ 'ಉತ್ತರ ಕೊರಿಯಾದಲ್ಲಿ (North Korea) ಜನನ ಪ್ರಮಾಣ ಕ್ಷೀಣಿಸುತ್ತಿದೆ. ರಾಷ್ಟ್ರೀಯ ಶಕ್ತಿಯನ್ನು ಬಲಪಡಿಸಲು ದೇಶದ ಮಹಿಳೆಯರು ಹೆಚ್ಚಿನ ಮಕ್ಕಳನ್ನು ಹೊಂದಬೇಕು ಮನವಿ ಮಾಡಿದ್ದಾರೆ. ಸದ್ಯ ಕಿಮ್ ಜಾಂಗ್ ಉನ್ ತನ್ನ ಕಣ್ಣುಗಳನ್ನು ಕರವಸ್ತ್ರದಿಂದ ಒರೆಸುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಅಲ್ಲದೆ ಉತ್ತರ ಕೊರಿಯಾದಲ್ಲಿ ಕೆಲ ದಿನಗಳಿಂದ ಜನನ ಪ್ರಮಾಣ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ರಾಜಧಾನಿ ಪಯೋಂಗ್‌ಯಾಂಗ್‌ನಲ್ಲಿ ತಾಯಂದಿರಿಗಾಗಿ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಿದೆ. ಇದರಲ್ಲಿ ಭಾಗವಹಿಸಿದ ಅಧ್ಯಕ್ಷ ಕಿಮ್ ಜನನ ಪ್ರಮಾಣ ಕುಸಿತವಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ಉತ್ತಮ ಆರೈಕೆ ಮತ್ತು ಅವರಿಗೆ ಶಿಕ್ಷಣ ಒದಗಿಸುವುದು ನಮ್ಮ ಕುಟುಂಬದ ಆದ್ಯ ಕರ್ತವ್ಯ. ನಾವು ನಮ್ಮ ತಾಯಂದಿರೊಂದಿಗೆ ಒಟ್ಟಾಗಿ ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನು ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸುವ ಕಿಮ್ ಪ್ರಥಮ ಬಾರಿಗೆ ಕಣ್ಣೀರು ಹಾಕಿರುವುದು ಜಗತ್ತನ್ನೇ ಬೆಚ್ಚಿ ಬೀಳಿಸುವಂತಿದೆ. ಒಟ್ಟಿನಲ್ಲಿ ಸರ್ವಾಧಿಕಾರಿಯೂ ಭಾವುಕರಾಗಬಹುದು, ಅಳಬಹುದು ಎಂಬುದನ್ನು ಕಿಮ್ ಕಣ್ಣೀರು ತೋರಿಸುತ್ತದೆ.

ಅಂದಹಾಗೆ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯು ಉತ್ತರ ಕೊರಿಯಾದ ಫಲವತ್ತತೆಯ ಪ್ರಮಾಣವನ್ನು ದಶಕದಲ್ಲಿ 1.8 ಎಂದು ಅಂದಾಜಿಸಿದೆ. ಇದು ಉತ್ತರ ಕೊರಿಯಾದ ಕೆಲವು ಗಡಿ ದೇಶಗಳಿಗಿಂತ ಹೆಚ್ಚಾಗಿದೆ.ದಕ್ಷಿಣ ಕೊರಿಯಾದ ಫಲವಂತಿಕೆ ದರವು ಜಗತ್ತಿನಲ್ಲಿ ಅತ್ಯಂತ ಕಡಿಮೆಯಾಗಿದೆ.

https://x.com/OliLondonTV/status/1732130034863800647?t=6ZvnGAZ_HgiOnRlzEzphBw&s=08

Advertisement
Advertisement
Advertisement