ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

B S Yadiyurappa: ವಿಜಯೇಂದ್ರಗೆ ದಯವಿಟ್ಟು ಇನ್ನು ಮನೆಗೆ ಬರಬೇಡ ಎಂದು ತಾಕೀತು ಮಾಡಿದ ಯಡಿಯೂರಪ್ಪ !!

03:31 PM Dec 01, 2023 IST | ಹೊಸ ಕನ್ನಡ
UpdateAt: 04:15 PM Dec 01, 2023 IST
Advertisement

B S Yadiyurappa: 'ಏ ವಿಜಯೇಂದ್ರ ನೀನು ದಯವಿಟ್ಟು ಇಲ್ಲೀವರೆಗೂ ಮನೆಗೆ ಬರಬೇಡ ಆಯ್ತೆನೋ' ಎಂದು ಮಾಜಿ ಸಿಎಂ ಯಡಿಯೂರಪ್ಪರು(B S Yadiyurappa) ತಮ್ಮ ಮಗ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ(B Y Vijayendra) ಅವರಿಗೆ ಆಜ್ಞೆ ಮಾಡಿದ್ದಾರೆ. ಅರೆ.. ಇದೇನಪ್ಪಾ, ಏನಯ್ತು ರಾಜಾಹುಲಿಗೆ? ಚೆನ್ನಾಗೆ ಇದ್ರಲ್ಲಾ ಅಪ್ಪ-ಮಗ ? ಇದ್ದಕ್ಕಿದ್ದಂತೆ ಏನಾಯ್ತು ಎಂದು ಯೋಚಿಸ್ತಿದ್ದೀರಾ ?! ಅಂತದ್ದೇನು ಆಗಿಲ್ಲ ಕಂಡ್ರಿ. ಯಡಿಯೂರಪ್ಪರು ತಮ್ಮ ಪ್ರೀತಿಯ ಮಗನಿಗೆ ಹೀಗೆ ಹೇಳಲು ಬಲವಾದ ಕಾರಣವೊಂದಿದೆ ನೋಡಿ.

Advertisement

ರಾಜ್ಯದಲ್ಲಿ ಅತಂತ್ರವಾಗಿದ್ದ ಬಿಜೆಪಿ(BJP)ಗೆ ಕೊನೆಗೂ ನೂತನ ಸಾರಥಿ ಸಿಕ್ಕಂತಾಗಿದೆ. ಅದರಲ್ಲಿಯೂ ಕೂಡ ಯಡಿಯೂರಪ್ಪನವರ ಪುತ್ರ ಹಾಗೂ ರಾಜ್ಯದ ಯುವ ನಾಯಕ ಬಿ ವೈ ವಿಜಯೇಂದ್ರ ಅವರು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿರುವುದು ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೂ, ಯುವ ಕಾರ್ಯಕರ್ತರಿಗೂ ತುಂಬ ಸಂತೋಷವನ್ನು ತಂದಿದೆ. ಅದೇ ಹುರುಪಿನಲ್ಲಿ ವಿಜಯೇಂದ್ರ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ಅವರ ತಂದೆ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರಿಗೆ ತಮ್ಮ ಮಗ ರಾಜ್ಯದ ಬಿಜೆಪಿ ಅಧ್ಯಕ್ಷರಾಗಿರುವುದು ತುಂಬಾ ಸಂತಸ ತಂದಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಸ್ಥಾನಗಳನ್ನು ಗೆಲ್ಲಿಸುವ ಹೊಸ ತಂತ್ರವನ್ನು ರೂಪಿಸುತ್ತಿದ್ದು, ಈ ಮೂಲಕ ಮಗನ ಪರಾಕ್ರಮ ಎಂತಾದ್ದು ಎಂದು ಎಲ್ಲರಿಗೂ ತೋರಿಸುವ ತವಕೋಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಯಡಿಯೂರಪ್ಪರು ಮಗನಿಗೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28ಕ್ಷೇತ್ರಗಳನ್ನೂ ಗೆಲ್ಲಿಸುವ ತನಕ ಮನೆಗೆ ಬರಬೇಡ ಎಂದು ಹೇಳಿದ್ದಾರೆ.

ಹೌದು, ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರ ಶಿಕಾರಿಪುರಕ್ಕೆ(Shikaripura) ಗುರುವಾರ ಆಗಮಿಸಿದ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ವತಿಯಿಂದ ಹಳೆ ಸಂತೆ ಮೈದಾನದ ಮಾರಿಕಾಂಬಾ ರಂಗಮಂದಿರದಲ್ಲಿ ವಿಜಯೇಂದ್ರ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಯಡಿಯೂರಪ್ಪರೂ ಭಾಗವಹಿಸಿದ್ದರು. ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡು, ಎಲ್ಲ 28 ಕ್ಷೇತ್ರ ಗೆಲ್ಲುವವರೆಗೆ ಮನೆಗೆ ತೆರಳಬೇಡ. ಗೆದ್ದು ಬೀಗಿದ ಬಳಿಕ ಮನೆಗೆ ಬಾ ಎಂದು ಬಿ.ಎಸ್‌.ಯಡಿಯೂರಪ್ಪನವರು ವಿಜಯೇಂದ್ರ ಅವರಿಗೆ ಸೂಚಿಸಿದ್ದಾರೆ.

Advertisement

ಇದನ್ನು ಓದಿ: Karnataka SSLC and Second Puc Exam: SSLC, 2nd PUC ಪರೀಕ್ಷೆಯ ವೇಳಾಪಟ್ಟಿ ಪ್ರಕಟ - ಇಲ್ಲಿದೆ ನೋಡಿ ಟೈಮ್ ಟೇಬಲ್

Advertisement
Advertisement