For the best experience, open
https://m.hosakannada.com
on your mobile browser.
Advertisement

Election commission : ಶರದ್ ಪಾವರ್ ಪಕ್ಷಕ್ಕೆ ಚುನಾವಣಾ ಆಯೋಗದಿಂದ ಹೊಸ ಹೆಸರು ಘೋಷಣೆ!!

07:06 AM Feb 08, 2024 IST | ಹೊಸ ಕನ್ನಡ
UpdateAt: 07:08 AM Feb 08, 2024 IST
election commission   ಶರದ್ ಪಾವರ್ ಪಕ್ಷಕ್ಕೆ ಚುನಾವಣಾ ಆಯೋಗದಿಂದ ಹೊಸ ಹೆಸರು ಘೋಷಣೆ

Election Commission: ಅಜಿತ್‌ ಪವಾರ್‌ ಬಣವನ್ನು ಕೇಂದ್ರ ಚುನಾವಣಾ ಆಯೋಗವು(Election Commission)ನಿಜವಾದ ಎನ್‌ಸಿಪಿ ಎಂದು ಘೋಷಣೆ ಮಾಡಿತ್ತು. ಬಳಿಕ ಅತಂತ್ರವಾಗಿದ್ದ ಶರದ್‌ ಪವಾರ್‌(Sharad pawar) ನೇತೃತ್ವದ ಬಣಕ್ಕೆ ಚುನಾವಣಾ ಆಯೋಗವು ಬುಧವಾರ ಹೊಸ ಹೆಸರನ್ನು ನೀಡಿದೆ.

Advertisement

ಇದನ್ನೂ ಓದಿ: Yogi adithyanath: ಅಯೋಧ್ಯೆ ಆಯಿತು, ಮುಂದಿನ ಟಾರ್ಗೆಟ್ ಈ ಮಸೀದಿಗಳು - ಹೊಸ ಘೋಷಣೆ ಹೊರಡಿಸಿದ ಸಿಎಂ ಯೋಗಿ ಆದಿತ್ಯನಾಥ್ !!

ಹೌದು, ಮಹಾರಾಷ್ಟ್ರೋ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಆಗಿದ್ದು, ಶಿವಸೇನೆಗೆ ಬಂದ ಸ್ಥಿತಿಯೇ ಶರದ್ ಪಾವರ್ ನೇತೃತ್ವದ NCP ಪಾರ್ಟಿಗೆ ಬಂದೊದಗಿದೆ. ಕೆಲ ಸಮಯದ ಹಿಂದೆ ಅಜಿತ್‌ ಪವಾರ್‌ ಬಣವನ್ನು ಕೇಂದ್ರ ಚುನಾವಣಾ ಆಯೋಗವು ನಿಜವಾದ ಎನ್‌ಸಿಪಿ ಎಂದು ಘೋಷಣೆ ಮಾಡಿತ್ತು. ಬಳಿಕ ಎನ್‌ ಸಿಪಿ ಹೆಸರು ಮತ್ತು ಚಿಹ್ನೆಯನ್ನು ಕಳೆದುಕೊಂಡ ಶರದ್ ಪವಾರ್ ಬಣವನ್ನು 'ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ- ಶರದ್ ಚಂದ್ರ ಪವಾರ್' ಎಂದು ಚುನಾವಣಾ ಆಯೋಗವು ಘೋಷಣೆ ಮಾಡಿದೆ.

Advertisement

ಅಂದಹಾಗೆ ಶರದ್ ಪವಾರ್ ಅವರು ಚುನಾವಣಾ ಆಯೋಗದ ಮುಂದೆ ಪಕ್ಷದ ಮೂರು ಹೊಸ ಹೆಸರುಗಳು ಮತ್ತು ಚಿಹ್ನೆಗಳನ್ನು ಪ್ರಸ್ತಾಪಿಸಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಆಯೋಗ ತನ್ನ ನಿರ್ಧಾರವನ್ನು ತಿಳಿಸಿದೆ. ಇನ್ನು ಶರದ್ ಪವಾರ್ ಕಾಂಗ್ರೆಸ್, ಮಿ ರಾಷ್ಟ್ರವಾದಿ, ಶರದ್ ಸ್ವಾಭಿಮಾನಿ ಎನ್ನುವ ಹೆಸರನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಅದರೊಂದಿಗೆ 'ಟೀ ಕಪ್', 'ಸೂರ್ಯಕಾಂತಿ' ಮತ್ತು 'ಉದಯವಾಗುತ್ತಿರುವ ಸೂರ್ಯ'ನ ಚಿನ್ಹೆಯನ್ನು ಬಣ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಚುನಾವಣಾ ಆಯೋಗದ ನಿರ್ಧಾರದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಶರದ್ ಬಣ ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದಿದೆ. ಅಲ್ಲದೆ ಚುನಾವಣಾ ಆಯೋಗದ ನಿರ್ಧಾರದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದೆ.

Advertisement
Advertisement