For the best experience, open
https://m.hosakannada.com
on your mobile browser.
Advertisement

Bengaluru: ಬೆಂಗಳೂರಲ್ಲಿ ರಾಮನ ಕಟೌಟ್ ನಿಲ್ಲಿಸಿದ ಕಾಂಗ್ರೆಸ್ ಶಾಸಕರು- 'ಕೈ' ಪಾಳಯದಲ್ಲಿ ಭಾರೀ ಸಂಚಲನ !!

08:29 AM Jan 17, 2024 IST | ಹೊಸ ಕನ್ನಡ
UpdateAt: 08:53 AM Jan 17, 2024 IST
bengaluru   ಬೆಂಗಳೂರಲ್ಲಿ ರಾಮನ ಕಟೌಟ್ ನಿಲ್ಲಿಸಿದ ಕಾಂಗ್ರೆಸ್ ಶಾಸಕರು   ಕೈ  ಪಾಳಯದಲ್ಲಿ ಭಾರೀ ಸಂಚಲನ
Advertisement

Bengaluru: ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲನ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ದೇಶದ ಜನ ಈ ಪುಣ್ಯ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಕಾದು ಕೂತಿದ್ದಾರೆ. ಆದರೆ ಆಹ್ವಾನ ಸಿಕ್ಕರೂ ಕಾಂಗ್ರೆಸ್ ಉದ್ಘಾಟನೆಗೆ ಬರುವುದಿಲ್ಲ, ಇದು ರಾಜಕೀಯ ಕಾರ್ಯಕ್ರಮ ಎಂದು ಸಮಾರಂಭವನ್ನು ಭಹಿಷ್ಕರಿಸಿದೆ. ಆದರೆ ಈ ನಡುವೆ ರಾಜ್ಯ ರಾಜಧಾನಿಯಲ್ಲಿ ಬೆಂಗಳೂರಲ್ಲಿ(Bengaluru) ವಿರೋಧದ ನಡುವೆಯೇ ಕಾಂಗ್ರೆಸ್ ಶಾಸಕರು ರಾಮನ ಕಟೌಟ್ ನಿಲ್ಲಿಸಿದ್ದಾರೆ.

Advertisement

ಹೌದು, ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ದ್ವಂದ್ವ ನಿಲುವು ಕಂಡುಬರುತ್ತಿದೆ. ಕಾಂಗ್ರೆಸ್ ಹೈಕಮಾಂಡ್(Congress highcomand) ರಾಮ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ, ಅದು ಬಿಜೆಪಿ ಹಾಗೂ ಆರ್ ಎಸ್ ಎಸ್ ಕಾರ್ಯಕ್ರಮ ಎಂದು ದೂರ ಉಳಿದರೆ ಕಾಂಗ್ರೆಸ್ ಶಾಸಕರಾದ ಎಂ. ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಅವರು ಕಚೇರಿಯಲ್ಲಿ ಮಂದಿರ ಲೋಕಾರ್ಪಣೆಗೆ ಶುಭಕೋರಿ ಬೃಹತ್ ಕಟೌಟ್ಗಳನ್ನು ಹಾಕಿ ಅಚ್ಚರಿ ಮೂಡಿಸಿದ್ದಾರೆ. ಇನ್ನೊಂದೆಡೆ, ಕಟೌಟ್ ಹಾಕಬೇಕಾ ಎಂದ ವ್ಯಕ್ತಿಗೆ ಏನೂ ಹೇಳದೆ ಡಿಕೆ ಶಿವಕುಮಾರ್ ತೆರಳಿದ್ದಾರೆ. ಒಟ್ಟಿನಲ್ಲಿ ಹೈಕಮಾಂಡ್ ನಿರ್ಧಾರವನ್ನೂ ಲೆಕ್ಕಿಸದೆ ಕೈ ನಾಯಕರು ದ್ವಂದ್ವ ನಿಲುವನ್ನು ತಾಳುತ್ತಿದ್ದಾರೆ.

ಇದನ್ನೂ ಓದಿ: Weight Loss: ತೂಕ ಹೇಳಿಸಲು ಹರಸಾಹಸ ಪಡಬೇಡಿ, ಇದರ ಟೀ ಕುಡಿಯಿರಿ ಸಾಕು!

Advertisement

ಇನ್ನು ಡಿಕೆ ಶಿವಕುಮಾರ್ ಅವರಲ್ಲಿ ವ್ಯಕ್ತಿಯೊಬ್ಬರು ರಾಮ ಮಂದಿರದ ಕಟೌಟ್ ಹಾಕಲು ಅನುಮತಿ ಕೇಳಿದ್ದಾರೆ. ಕಟೌಟ್ನ ಫೋಟೋ ನೀಡಿ 40 ಅಡಿ ಎತ್ತರದ ಕಟೌಟ್ನಲ್ಲಿ ನಿಮ್ಮ ಹೆಸರು ಹಾಕುತ್ತೇವೆ, ಶಾಸಕರ ಹೆಸರು ಹಾಕುತ್ತೇವೆ ಎಂದು ಹೇಳಿದ್ದಾರೆ. ಈ ವೇಳೆ ಫೋಟೋ ನೋಡಿದ ಡಿಕೆ ಶಿವಕುಮಾರ್, ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.

ಅಂದಹಾಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಶ್ರಿರಾಮ ಕಾರ್ಯಕ್ರಮದಿಂದ ದೂರ ಉಳಿಯುವ ಸಂದೇಶ ನೀಡಿದ್ದರು. ಆದರೆ ಈ ನಡುವೆಯೂ ರಾಜ್ಯದ ಕಾಂಗ್ರೆಸ್ ನಾಯಕರ ಅಚ್ಚರಿ ನಡೆ ಭಾರೀ ಕುತೂಹಲ ಕೆರಳಿಸಿದೆ.

Advertisement
Advertisement
Advertisement