For the best experience, open
https://m.hosakannada.com
on your mobile browser.
Advertisement

Amith Sha: ಲೋಕಸಭೆಯಲ್ಲಿ ಭದ್ರತಾ ಲೋಪ ಕುರಿತು ಅಮಿತ್ ಶಾ ಮಹತ್ವದ ಹೇಳಿಕೆ !!

06:32 PM Dec 16, 2023 IST | ಹೊಸ ಕನ್ನಡ
UpdateAt: 06:32 PM Dec 16, 2023 IST
amith sha  ಲೋಕಸಭೆಯಲ್ಲಿ ಭದ್ರತಾ ಲೋಪ ಕುರಿತು ಅಮಿತ್ ಶಾ ಮಹತ್ವದ ಹೇಳಿಕೆ
Advertisement

Amith Sha: ಕಳೆದ ಬುಧವಾರ (ಡಿ.13) ಸಂಸತ್ತಿನಲ್ಲಿ ನಡೆದ ಭಾರಿ ಭದ್ರತಾ ಲೋಪ ಇಡೀ ದೇಶವನ್ನೇ ಒಂದು ಸಲಕ್ಕೆ ಬೆಚ್ಚಿ ಬೀಳಿಸಿತ್ತು. ಇಷ್ಟೊಂದು ಭದ್ರತೆಯ ಸಂಸತ್ತಿಗೆ ಹೇಗಪ್ಪಾ ಆಗಂತುಕರು ನುಗ್ಗಿದರು ಎಂದು ಜನ ನಿಬ್ಬೆರಗಾಗಿದ್ರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್​ ಷಾ(Amith Sha) ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಹೌದು, ಇದೊಂದು ಗಂಭೀರ ಘಟನೆ. ದೇಶದ ಭದ್ರತೆಯ ವಿಚಾ, ಕಳವಳಕಾರಿಯೂ ಕೂಡ ಹೌದು. ಆದರೆ, ಪ್ರತಿಪಕ್ಷಗಳು ಇದರಲ್ಲೂ ರಾಜಕೀಯ ಮಾಡುತ್ತಿದೆ. ಸಹಜವಾಗಿಯೇ ಲೋಪ ಉಂಟಾಗಿದೆ ನಿಜ. ಆದರೆ, ಸಂಸತ್ತಿನ ಭದ್ರತೆಯು ಸ್ಪೀಕರ್ ಅಡಿಯಲ್ಲಿದೆ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಸ್ಪೀಕರ್ ಅವರು ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ನಾವು ತನಿಖಾ ಸಮಿತಿಯನ್ನು ರಚನೆ ಮಾಡಿದ್ದು, ಆದಷ್ಟು ಬೇಗ ಸ್ಪೀಕರ್​ಗೆ ವರದಿಯನ್ನು ಕಳುಹಿಸಿಕೊಡತ್ತೇವೆ ಎಂದು ಹೇಳಿದರು.

ಅಲ್ಲದೆ ದೇಶದ ಹಿರಿಯ ಡಿಜಿಪಿ(DGP) ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದೇವೆ. ಇತರ ಏಜೆನ್ಸಿಗಳ ಪ್ರತಿನಿಧಿಗಳು ಸಹ ಸಮಿತಿಯ ಭಾಗವಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸ್ಪೀಕರ್‌ಗೆ ವರದಿ ಬರಲಿದೆ. ಸ್ಪೀಕರ್ ವರದಿಯನ್ನು ಬಿಡುಗಡೆ ಮಾಡಿದರೆ ಅದು ಸೂಕ್ತ ಎಂದು ನಾನು ಭಾವಿಸುತ್ತೇನೆ ಎಂದು ಅಮಿತ್ ಶಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು.

Advertisement

Advertisement
Advertisement
Advertisement