POK: ಮೋದಿ ಮತ್ತೆ ಪ್ರಧಾನಿ ಆದ್ರೆ 6 ತಿಂಗಳಲ್ಲಿ POK ಭಾರತದ ಭಾಗವಾಗುತ್ತೆ - ಸಿಎಂ ಯೋಗಿ ಹೇಳಿಕೆ !!
POK: ಕೆಲವು ದಿನಗಳಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ(POK) ಭಾರಿ ಹಿಂಸಾಚಾರ ಭುಗಿಲೆದ್ದಿದೆ. POKಯ ಸ್ಥಳೀಯರು ಪಾಕಿಸ್ತಾನ(Pakistan) ಸೇನೆ ಮೇಲೆ ದಾಳಿ ಮಾಡಿದ್ದಾರೆ. ಇದೇ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದೇ ಮೊದಲ ಭಾರಿಗೆ ಭಾರತದ ದ್ವಜ ಹಾರಾಡಿದೆ. ಈ ಬೆನ್ನಲ್ಲೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್(CM Yogi Adithyanath) ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರವನ್ನು ಸದ್ಯದಲ್ಲೇ ಭಾರತಕ್ಕೆ(Bharat) ಸೇರ್ಪಡೆ ಮಾಡುತ್ತೇವೆ, ಅದು ಎಂದಿಗೂ ಭಾರತದ ಅವಿಭಾಜ್ಯ ಅಂಗ ಎಂದು ರಕ್ಷಣಾ ಸಚಿವರು, ಕೇಂದ್ರ ಗೃಹ ಸಚಿವರು ಇತ್ತೀಚೆಗಷ್ಟೆ ಹೇಳಿದ್ದರು. ಈ ಬೆನ್ನಲ್ಲೇ ಸಿಎಂ ಯೋಗಿ ಕೂಡ ಇದರ ಮುಂದಿವರಿದ ಹೇಳಿಕೆ ಎಂಬಂತೆ 'ಮೋದಿ ಮತ್ತೆ ಪ್ರಧಾನಿ(PM Modi) ಆದರೆ, 3 ನೇ ಅವಧಿಗೂ ಅಧಿಕಾರ ಹಿಡಿದರೆ 6 ತಿಂಗಳೊಳಗೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುತ್ತಾರೆ' ಎಂದು ಮಹತ್ವದ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದ(Maharastra) ಪಾಲ್ಘರ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ "POKಯನ್ನು ಉಳಿಸಿಕೊಳ್ಳುವುದು ಪಾಕಿಸ್ತಾನಕ್ಕೆ ಕಷ್ಟಕರವಾಗಿದೆ. ಪ್ರಧಾನಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿ ಮತ್ತು ಆರು ತಿಂಗಳಲ್ಲಿ ಪಿಒಕೆ ಭಾರತದ ಭಾಗವಾಗಲಿದೆ. ಅಂತಹ ಕೆಲಸಕ್ಕೆ ಧೈರ್ಯ ಬೇಕು, ಅದನ್ನು ಮೋದಿ ಮಾಡಿಯೇ ತೀರುತ್ತಾರೆ" ಎಂದು ಸಿಎಂ ಯೋಗಿ ಹೇಳಿದ್ದಾರೆ. ಯೋಗಿ ಅವರ ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
POK ಜನ ಬುಗಿಲೆದ್ದಿರುವುದು ಏಕೆ?
ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ತುತ್ತು ಅನ್ನಕ್ಕೂ ಪರದಾಡ, ವಿದ್ಯುತ್ ಕಡಿತ ಸೇರಿದಂತೆ ಹಲವು ಸಮಸ್ಯೆಗಳಿಂದ ಹೈರಾಣಾಗಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಜನ, ಪಾಕಿಸ್ತಾನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಕಿಸ್ತಾನ ಸೇನೆ ಹಾಗೂ ಪಾಕಿಸ್ತಾನ ಪೊಲೀಸ್ ವಿರುದ್ಧ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಸ್ಥಳೀಯರು ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಇದೀಗ ಈ ವಿಡಿಯೋ ಹಾಗೂ ಫೋಟೋಗಳು ಭಾರಿ ವೈರಲ್ ಆಗಿದ್ದು, ಪಾಕಿಸ್ತಾನದ ಆತಂಕ ಹೆಚ್ಚಾಗಿದೆ. ಎಲ್ಲೆಡೆ ಕರ್ಫ್ಯೂ ಜಾರಿ ಮಾಡಲಾಗಿದೆ.