ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

PM Modi: ED ದಾಳಿಯಲ್ಲಿ ಸಿಕ್ಕ ಹಣ ಬಡವರಿಗೆ ವಿತರಣೆ - ಪ್ರಧಾನಿ ಮೋದಿ !!

PM Modi: ಮೋದಿ ಅಧಿಕಾರವಧಿಯಲ್ಲಿ ಅನೇಕ ಭ್ರಷ್ಟರ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತಿದೆ. ED ದಾಳಿ ಮೂಲಕ ಅನೇಕ ಮೋಸಗಾರರನ್ನು ಪತ್ತೆ ಹಚ್ಚಿ ಸೆದೆಬಡಿಯಲಾಗುತ್ತಿದೆ
02:31 PM May 07, 2024 IST | ಸುದರ್ಶನ್
UpdateAt: 02:52 PM May 07, 2024 IST

PM Modi: ಮೋದಿ ಅಧಿಕಾರವಧಿಯಲ್ಲಿ ಅನೇಕ ಭ್ರಷ್ಟರ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತಿದೆ. ED ದಾಳಿ ಮೂಲಕ ಅನೇಕ ಮೋಸಗಾರರನ್ನು ಪತ್ತೆ ಹಚ್ಚಿ ಸೆದೆಬಡಿಯಲಾಗುತ್ತಿದೆ. ಕೋಟಿ ಕೋಟಿ ಹಣವನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಆದರೆ ಹೀಗೆ ED ವಶಪಡಿಸಿಕೊಂಡ ಹಣ ಎಲ್ಲಿಗೆ ಹೋಗುತ್ತದೆ ಎಂಬುದು ಹಲವರ ಪ್ರಶ್ನೆಯಾಗಿತ್ತು. ಇದೀಗ ಈ ಪ್ರಶ್ನೆಗೆ ಸ್ವತಃ ಮೋದಿಯವರೇ(PM Modi) ಉತ್ತರ ನೀಡಿದ್ದಾರೆ.

Advertisement

ಇದನ್ನೂ ಓದಿ: Sun Stroke: ನಿಮಗೆ ಸನ್ ಬರ್ನ್ ಸಮಸ್ಯೆ ಕಾಡುತ್ತಿದೆಯೇ? : ಇದನ್ನು ತಡೆಗಟ್ಟಲು ಇಲ್ಲಿದೆ ಸೂಕ್ತ ಪರಿಹಾರ

ಹೌದು, ಆಂಧ್ರಪ್ರದೇಶದಲ್ಲಿ(Andrapradesh) ಲೋಕಸಭಾ ಚುನಾವಣೆ(Parliament Election) ಪ್ರಯುಕ್ತ ಬಿಜೆಪಿ (BJP)ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು 'ಬಡವರಿಂದ ಭ್ರಷ್ಟಾಚಾರದ ರೂಪದಲ್ಲಿ ಲೂಟಿ ಮಾಡಿ ಸಂಗ್ರಹಿಸಿದ ಹಣವನ್ನು ಮರಳಿ ಬಡವರಿಗೆ ನೀಡಲಾಗುವುದು. ಈ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಇದನ್ನೂ ಓದಿ: T20 World Cup Pakistan New Jersey: T20 ವಿಶ್ವಕಪ್ ಜರ್ಸಿ ಬಹಿರಂಗ ಪಡಿಸಿದ ಪಾಕಿಸ್ತಾನ : ಫೋಟೋಗಳು ಎಲ್ಲೆಡೆ ವೈರಲ್

ಮತ್ತೆ ಮಾತನಾಡಿದ ಅವರು 'ಇದುವರೆಗೆ ಜಾರಿ ನಿರ್ದೇಶನಾಲಯವೊಂದೇ 1.25 ಲಕ್ಷ ಕೋಟಿ ರು. ಭ್ರಷ್ಟರ ಹಣವನ್ನು ಜಪ್ತಿ ಮಾಡಿದೆ. ಇದಕ್ಕೆ ಇತರೆ ಕೇಂದ್ರಿಯ ತನಿಖಾ ಸಂಸ್ಥೆಗಳೂ ಜಪ್ತಿ ಮಾಡಿದ ಹಣ ಸೇರಿಸಿದರೆ ಪ್ರಮಾಣ ಇನ್ನೂ ಹೆಚ್ಚುತ್ತದೆ. ಹೀಗಾಗಿ ಯಾರಿಂದ ಈ ಹಣವನ್ನು ಲೂಟಿ ಮಾಡಲಾಗಿತ್ತೋ ಆ ಹಣವನ್ನು ಮರಳಿ ಅವರಿಗೆ ತಲುಪಿಸುವುದು. ಬಡವರ ಹಕ್ಕಿಗೆ ಎಂದೂ ಧಕ್ಕೆ ಆಗಲು ಬಿಡಲ್ಲ' ಎಂದು ಹೇಳಿದ್ದಾರೆ.

Advertisement
Advertisement
Next Article