For the best experience, open
https://m.hosakannada.com
on your mobile browser.
Advertisement

Jyoti Rai: ಜ್ಯೋತಿ ರೈ ಖಾಸಗಿ ವಿಡಿಯೋ ವೈರಲ್ ಮಾಡಿದ್ಯಾರು, ಈ ಬಗ್ಗೆ ನಟಿ ಹೇಳಿದ್ದೇನು?

07:39 PM May 08, 2024 IST | ಸುದರ್ಶನ್ ಬೆಳಾಲು
UpdateAt: 08:26 PM May 08, 2024 IST
jyoti rai   ಜ್ಯೋತಿ ರೈ ಖಾಸಗಿ ವಿಡಿಯೋ ವೈರಲ್ ಮಾಡಿದ್ಯಾರು  ಈ ಬಗ್ಗೆ ನಟಿ ಹೇಳಿದ್ದೇನು
Advertisement

Advertisement

Jyoti Rai: ರಾಜ್ಯದ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಕನ್ನಡ ಕಿರುತರೆಯ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. ಇದನ್ನು ಯಾರು ವೈರಲ್ ಮಾಡಿದರು? ಇದು ನಿಜವಾಗಿಯೂ ಜ್ಯೋತಿ ರೈ ಅವರದ್ದೇ ವಿಡಿಯೋನಾ? ಈ ಬಗ್ಗೆ ಜ್ಯೋತಿ ರೈ(Jyothi Rai) ಏನು ಹೇಳಿದರು?

ಸುಮಾರು 40ರ ಆಸುಪಾಸಿನಲ್ಲೂ ಹರೆಯದ ಹುಡುಗಿಯಂತೆ, ಬಳ್ಳಿಯಂತೆ ಬಳುಕುತ್ತಿರುವ ನಟಿ ಜ್ಯೋತಿ ರೈ ಸಾಕಷ್ಟು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್ ಕ್ರಿಕೆಟ್ ಮಾಡಿದ್ದರು. ಹಾಟ್ ಫೋಟೋಗಳನ್ನು ಹರಿಬಿಟ್ಟು, ಮೈ ಮಾಟ ತೋರುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಆದರೀಗ ಈ ಬೆನ್ನಲ್ಲೇ ಅವರದ್ದೇ ಎನ್ನಲಾದ ಖಾಸಗೀ ಅಶ್ಲೀಲ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Advertisement

ವಿಡಿಯೋ ವೈರಲ್ ಮಾಡಿದ್ಯಾರು?
twitter.com/EDIT_BY_ABHI ಎನ್ನುವ ಟ್ವಿಟರ್‌ ಖಾತೆಯಲ್ಲಿ ‘Now jyothi rai videos are leaked #PrajwalRevanna #jyothirai’ (ಇದೀಗ ಜ್ಯೋತಿ ರೈ ವಿಡಿಯೊಗಳು ಲೀಕ್ ಆಗಿವೆ) ಎಂದು ಪೋಸ್ಟ್‌ ಮಾಡಲಾಗಿದೆ. ಇದೇ ಟ್ವಿಟರ್‌ ಖಾತೆಯಲ್ಲಿ ಜ್ಯೋತಿ ಅವರ ಖಾಸಗಿ ಫೋಟೋಗಳ ಪೈಕಿ ಒಂದನ್ನು ಅಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘ಬೇಗ ಸಬ್‌ಸ್ಕ್ರೈಬ್ ಮಾಡಿ, ನನ್ನ ಯುಟ್ಯೂಬ್ ಚಾನೆಲ್‌ಗೆ 1000 ಸಬ್‌ಸ್ಕ್ರೈಬರ್ಸ್ ಆದ ತಕ್ಷಣ ವಿಡಿಯೊ ಅಪ್‌ಲೋಡ್ ಮಾಡುತ್ತೇನೆ’ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ತನ್ನ ಬಳಿ ಎರಡು ಫುಲ್‌ ವಿಡಿಯೋಗಳಿದ್ದು, ತಲಾ 5 ನಿಮಿಷದ ವಿಡಿಯೋ ಅದಾಗಿದೆ ಎಂದು ಹೇಳಿದ್ದಾರೆ. ಇದನ್ನು ಪೋಸ್ಟ್‌ ಮಾಡಿರುವ ವ್ಯಕ್ತಿಯ ಉದ್ದೇಶ ಏನು ಎನ್ನುವುದು ಈವರೆಗೂ ಅರ್ಥವಾಗಿಲ್ಲ. ಆದರೆ ಈತನ ಉದ್ದೇಶ ಆತನ ಯೂಟ್ಯೂಬ್‌ ಪೇಜ್‌ಗೆ 1 ಸಾವಿರ ಸಬ್‌ಸ್ಕ್ರೈಬರ್ಸ್ ಪಡೆಯುವುದೋ ಅಥವಾ ಆತನಲ್ಲಿ ನಿಜವಾಗಿಯೂ ಜ್ಯೋತಿ ರೈ ಅವರ ವಿಡಿಯೋ ಇದೆಯೇ ಎನ್ನುವುದು ಪ್ರಶ್ನೆಯಾಗಿದೆ.

ಜ್ಯೋತಿ ರೈ ಪ್ರತಿಕ್ರಿಯೆ ಏನು?
ತಮ್ಮದೆನ್ನಲಾದ ಖಾಸಗಿ ವಿಡಿಯೋ ಬಗ್ಗೆ ಜ್ಯೋತಿ ರೈ ಸೋಶಿಯಲ್‌ ಮೀಡಿಯಾದಲ್ಲಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಸೈಬರ್‌ ಕ್ರೈಮ್‌ಗೆ ಮಾತ್ರ ಈ ವಿಚಾರವಾಗಿ ದೂರು ನೀಡಿದ್ದಾರೆ. ಕೆಲವು ಭಿನ್ನ ವ್ಯಕ್ತಿಗಳು ನನಗೆ ಕಿರುಕುಳ ನೀಡುವ, ಮಾನನಷ್ಟ ಮಾಡುವ ಉದ್ದೇಶದಲ್ಲಿ ಈ ರೀತಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಈ ವ್ಯಕ್ತಿ ಯಾರು, ಏನು ಎಂದು ಇದುವರೆಗೂ ತಿಳಿದಿಲ್ಲ.

ಅಲ್ಲದೆ ಕೆಲವು ವ್ಯಕ್ತಿಗಳು ತಮ್ಮ ನಕಲಿ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈಗಾಗಲೇ ದೂರು ಕೂಡ ನೀಡಿರುವುದಾಗಿ ತಿಳಿಸಿದ್ದಾರೆ. ಹರಿದಾಡುತ್ತಿರುವ ಫೋಟೋ ಮತ್ತು ವಿಡಿಯೋಗಳು ಫೇಕ್ ಎಂದು ಅವರು ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟ ಪಡಿಸಿದ್ದಾರೆ. ಕೆಲವರ ನಂಬರ್ ನಿಂದ ನನಗೆ ಕರೆಗಳು ಬಂದಿದ್ದವು. ಅವರೇ ಇಂದು ನನ್ನದು ಎನ್ನಲಾಗುತ್ತಿರುವ ವಿಡಿಯೋ ಮತ್ತು ಫೋಟೋ ಕಳುಹಿಸಿದ್ದಾರೆ ಎಂದು ಬರೆದಿದ್ದಾರೆ.

Advertisement
Advertisement
Advertisement