ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

PM Kisan Scheme : 'ಪಿಎಂ ಕಿಸಾನ್' ಹಣ ಹೆಚ್ಚಳ ವಿಚಾರ - ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್ !!

06:39 AM Feb 07, 2024 IST | ಹೊಸ ಕನ್ನಡ
UpdateAt: 06:51 AM Feb 07, 2024 IST
Advertisement

PM Kisan Scheme: ಪಿಎಂ ಕಿಸಾನ್ ಹಣದಲ್ಲಿ ಯಾವುದೇ ಹೆಚ್ಚಳ ಮಾಡುವುದಿಲ್ಲ, ಇದೀಗ ಕೊಡಮಾಡುವ 6000 ಹಣವನ್ನೇ ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಕೇಂದ್ರ ಸರ್ಕಾರವು(Central government)ಸ್ಪಷ್ಟೀಕರಣ ನೀಡಿದೆ.

Advertisement

ಹೌದು, ರೈತರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆ(PM Kisan Scheme)ಅಡಿ ಪ್ರತಿವರ್ಷವೂ ರೈತರಿಗೆ 6,000 ಹಣವನ್ನು ನೀಡುತ್ತಿದೆ. ಕೆಲವು ಸಮಯದಿಂದ ಈ ಹಣದಲ್ಲಿ 6 ಸಾವಿರ ರೂ.ನಿಂದ 8 ಸಾವಿರ ಅಥವಾ 12 ಸಾವಿರ ರೂ.ಗೆ ಏರಿಕೆ ಹೆಚ್ಚಳವಾಗುತ್ತದೆ, ಕೇಂದ್ರವು ಸಹಾಯ ಧನವನ್ನು ಹೆಚ್ಚಿಸುತ್ತದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಈ ಕುರಿತು ಕೇಂದ್ರ ಸರ್ಕಾರವು ಸ್ಪಷ್ಟೀಕರಣ ನೀಡಿದ್ದು ಪಿಎಂ ಕಿಸಾನ್ ಹಣದಲ್ಲಿ ಯಾವುದೇ ಕುರಿತು ಹೆಚ್ಚಳವನ್ನು ಮಾಡುವುದಿಲ್ಲ ಎಂದು ತಿಳಿಸಿದೆ.

ಅಂದಹಾಗೆ ಪಿಎಂ ಕಿಸಾನ್ ಯೋಜನೆಯಲ್ಲಿ ರೈತರಿಗೆ ನೀಡುವ ಸಹಾಯಧನವನ್ನು ವಾರ್ಷಿಕ 8,000ರೂ.ನಿಂದ 12,000ರೂ.ಗೆ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಕೃಷಿ ಸಚಿವ ಅರ್ಜುನ್ ಮುಂಡ(Arjun Munda) ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.

Advertisement

Advertisement
Advertisement