For the best experience, open
https://m.hosakannada.com
on your mobile browser.
Advertisement

Petrol-Desel price: ಲೋಕಸಭಾ ಚುನಾವಣೆಗೆ ಕೇಂದ್ರದಿಂದ ಗಿಫ್ಟ್- ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ !!

10:51 PM Mar 14, 2024 IST | ಹೊಸ ಕನ್ನಡ
UpdateAt: 10:51 PM Mar 14, 2024 IST
petrol desel price  ಲೋಕಸಭಾ ಚುನಾವಣೆಗೆ ಕೇಂದ್ರದಿಂದ ಗಿಫ್ಟ್  ಪೆಟ್ರೋಲ್  ಡೀಸೆಲ್ ಬೆಲೆಯಲ್ಲಿ ಇಳಿಕೆ

Petrol-Desel price: ಲೋಕಸಭೆ ಚುನಾವಣೆ ನಿಮಿತ್ತ ಕೇಂದ್ರ ಸರ್ಕಾರವು ದೇಶದ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು, ಪೆಟ್ರೋಲ್-ಡೀಸೆಲ್ (Petrol-Desel price) ಬೆಲೆಯಲ್ಲಿ ಪ್ರತೀ ಲೀಟರ್ ಗೆ 2ರೂ ಇಳಿಕೆ ಮಾಡಿದೆ.

Advertisement

ಹೌದು, ಮುಂಬರುವ ಲೋಕಸಭಾ ಚುನಾವಣೆಯನ್ನು(Parliament election) ಗಮನದಲ್ಲಿಟ್ಟುಕೊಂಡು ಕೆಲವು ದಿನಗಳ ಹಿಂದಷ್ಟೇ ಕೇಂದ್ರವು LPG ಸಿಲಿಂಡರ್ ದರವನ್ನು ಕಡಿಮೆ ಮಾಡಿತ್ತು. ಈ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 2 ರೂ.ಗಳಷ್ಟು ಕಡಿತಗೊಳಿಸಿದೆ.

ಅಂದಹಾಗೆ ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್ಗೆ 2 ರೂಪಾಯಿ ಇಳಿಕೆಯಾಗಿದ್ದು, ಪರಿಷ್ಕೃತ ದರ ನಾಳೆ ಅಂದರೆ ಮಾರ್ಚ್ 15ರ ಬೆಳಗ್ಗೆ 6ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಅಂದರೆ ಬೆಂಗಳೂರಿನಲ್ಲಿ ಇಂದಿನಿಂದ ಪೆಟ್ರೋಲ್ ಬೆಲೆ 99.94 ರೂಪಾಯಿ ಹಾಗೂ ಡೀಸೆಲ್ ಬೆಲೆ 85.89 ರೂಪಾಯಿಗೆ ಇಳಿಕೆ ಆಗಲಿದೆ.

Advertisement

Advertisement
Advertisement