ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Peepal Tree Health Benefits: ನಿತ್ಯವೂ ನೀವು ಪೂಜಿಸುವ ಅರಳಿ ಮರದಲ್ಲೂ ಉಂಟು ಈ ಎಲ್ಲಾ ಔಷಧೀಯ ಗುಣಗಳು !!

04:03 PM Dec 02, 2023 IST | ಕಾವ್ಯ ವಾಣಿ
UpdateAt: 04:25 PM Dec 02, 2023 IST
Advertisement

Peepal Tree Health Benefits: ಆಮ್ಲಜನಕವನ್ನು ಹೆಚ್ಚಾಗಿ ಹೊರಹಾಕುವ ಮರಗಳಲ್ಲಿ ಅಶ್ವತ್ಥ ಅಥವಾ ಅರಳಿ ವೃಕ್ಷ ಕೂಡ ಒಂದು. ಅರಳಿ ಮರಕ್ಕೆ ಹಿಂದೂ ಧರ್ಮದಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ. ಅಲ್ಲದೆ, ಈ ಮರ ಆಯುರ್ವೇದದ ವಿಷಯದಲ್ಲಿ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಅರಳಿ ಮರದ ಎಲೆಗಳು ಮತ್ತು ಅದರ ತೊಗಟೆ, ರೆಂಬೆ ಸೇರಿದಂತೆ ಇದರ ಎಲ್ಲಾ ಭಾಗಗಳನ್ನು ಬಳಸಿ ಅನೇಕ ರೀತಿಯ ರೋಗಗಳನ್ನು (Peepal Tree Health Benefits) ತಡೆಗಟ್ಟಬಹುದು.

Advertisement

ತುರಿಕೆ ಮತ್ತು ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಅರಳಿ ಮರದ ತೊಗಟೆ ತುಂಬಾ ಪ್ರಯೋಜನಕಾರಿ. ಈ ತೊಗಟೆಯನ್ನು ಪುಡಿ ಮಾಡಿ ತುರಿಕೆ ಇರುವ ಜಾಗದಲ್ಲಿ ಹಚ್ಚುವುದರಿಂದ ಸಮಸ್ಯೆ ನಿವಾರಿಸಿಕೊಳ್ಳಬಹುದು.

ಅರಳಿ ಮರದ ಬಲಿತ ಹಣ್ಣುಗಳನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ತೊದಲುವಿಕೆಯ ಸಮಸ್ಯೆಯೂ ದೂರವಾಗುತ್ತದೆ.

Advertisement

Dead Body : ಇಲ್ಲಿದ್ದಾನೆ ಹೆಣವನ್ನೂ ಬಿಡದ ಕಾಮುಕ - 79ರ ಅಜ್ಜಿಯ ಹೆಣದ ಜತೆ ಲೈಂಗಿಕ ಕ್ರಿಯೆ ನಡೆಸಿದ ಸೆಕ್ಯುರಿಟಿ ಗಾರ್ಡ್‌

ಅರಳಿ ಮರದ ಎಲೆಗಳನ್ನು ದಿನವೂ ಜಗಿಯುತ್ತಿದ್ದರೆ ಒತ್ತಡ ದೂರವಾಗುತ್ತದೆ. ವಯಸ್ಸಿನೊಂದಿಗೆ ಬರುವ ವಯಸ್ಸಾದ ಚಿಹ್ನೆಗಳನ್ನು ತೆಗೆದುಹಾಕುತ್ತದೆ. ಅಷ್ಟೇ ಅಲ್ಲ ಈ ಎಲೆಯ ರಸದಿಂದ ಪಾದಗಳ ಬಿರುಕು ಸಮಸ್ಯೆ ನಿವಾರಿಸಬಹುದು.

ಅರಳಿ ಮರದ ಎಲೆಗಳ ರಸದಿಂದ ಶೀತ, ಜ್ವರ ಮತ್ತು ಕೆಮ್ಮು ಗುಣವಾಗುತ್ತದೆ. ಇದರ ಎಲೆಗಳ ರಸದಿಂದ ಮಸಾಜ್ ಮಾಡುವುದರಿಂದ ಚರ್ಮವು ಕಾಂತಿಯುತವಾಗುತ್ತದೆ. ಚರ್ಮದ ಮೇಲಿನ ಸುಕ್ಕುಗಳು ಮಾಯವಾಗುತ್ತವೆ.

ಅರಳಿ ಮರದ ತೊಗಟೆಯಿಂದ ತಯಾರಿಸಿದ ಪುಡಿಯನ್ನು ಬೇಳೆ ಹಿಟ್ಟಿನೊಂದಿಗೆ ಸೇರಿಸಿ ಫೇಸ್ ಪ್ಯಾಕ್‌ಗಳಾಗಿ ಬಳಸಬಹುದು. ಈ ಫೇಸ್ ಪ್ಯಾಕ್ ಮೈಬಣ್ಣವನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ.

ಅರಳಿ ಮರದ ಎಲೆಗಳು ಹೊಟ್ಟೆಗೆ ಸಂಬಂಧಿಸಿದ ರೋಗಗಳನ್ನು ದೂರಮಾಡುತ್ತವೆ. ಗ್ಯಾಸ್ ಮತ್ತು ಮಲಬದ್ಧತೆ ಸಮಸ್ಯೆ ದೂರವಾಗಿಸುತ್ತದೆ.

ನಿಮ್ಮ ದೈನಂದಿನ ಆಹಾರದಲ್ಲಿ ಪೀಪಲ್ ಅಥವಾ ಅರಳಿ ಮರದ ಹಣ್ಣುಗಳನ್ನು (ಪವಿತ್ರ ಅಂಜೂರ) ಸೇರಿಸುವುದು ಮಲಬದ್ಧತೆಯಿಂದ ಪರಿಹಾರವನ್ನು ಪಡೆಯಲು ಉತ್ತಮ ಮಾರ್ಗವಾಗಿದೆ. ನಿತ್ಯ 5-10 ಅಂಜೂರದ ಹಣ್ಣನ್ನು ತಿಂದರೆ ಮಲಬದ್ಧತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.

Advertisement
Advertisement