For the best experience, open
https://m.hosakannada.com
on your mobile browser.
Advertisement

Parliment Election: ಬೆಂಗಳೂರಿಂದ ಎಸ್ ಎಂ ಕೃಷ್ಣ, ರಾಹುಲ್ ಗಾಂಧಿ ಸ್ಪರ್ಧೆ !!

Parliament Election: ಇದೀಗ ಅಚ್ಚರಿ ಎಂಬಂತೆ ಎಸ್ ಎಂ ಕೃಷ್ಣ ಹಾಗೂ ರಾಹುಲ್ ಗಾಂಧಿ ಅವರು ಬೆಂಗಳೂರಿಂದ ಕಣಕ್ಕಿಳಿದಿದ್ದಾರೆ ಎಂಬ ಸುದ್ದಿ ಬಂದಿದೆ.
02:43 PM Apr 06, 2024 IST | ಸುದರ್ಶನ್
UpdateAt: 02:54 PM Apr 06, 2024 IST
parliment election  ಬೆಂಗಳೂರಿಂದ ಎಸ್ ಎಂ ಕೃಷ್ಣ  ರಾಹುಲ್ ಗಾಂಧಿ ಸ್ಪರ್ಧೆ
Advertisement

Parliment Election : ರಾಜ್ಯದಲ್ಲಿ ಲೋಕಸಭಾ ಚುನಾವಣೆಯ(Parliament Election) ಕಾವು ರಂಗೇರಿದೆ. ದಿನದಿಂದ ದಿನಕ್ಕೆ ಪ್ರಚಾರದ ಅಬ್ಬರ ಜೋರಾಗುತ್ತಿದೆ. ಈ ನಡುವೆ ನಾಮಪತ್ರಗಳ ಸ್ವೀಕೃತಿ ಕಾರ್ಯವು ಕೂಡ ಮುಗಿದು ಹೋಗಿದೆ. ಇದೀಗ ಅಚ್ಚರಿ ಎಂಬಂತೆ ಎಸ್ ಎಂ ಕೃಷ್ಣ ಹಾಗೂ ರಾಹುಲ್ ಗಾಂಧಿ ಅವರು ಬೆಂಗಳೂರಿಂದ ಕಣಕ್ಕಿಳಿದಿದ್ದಾರೆ ಎಂಬ ಸುದ್ದಿ ಬಂದಿದೆ.

Advertisement

ಇದನ್ನೂ ಓದಿ: Physical Relationship: ಊಟ ಮಾಡಿದ ತಕ್ಷಣ ಇದನ್ನು ತಿನ್ನಿ, ಲೈಂಗಿಕ ಸಾಮರ್ಥ್ಯ ದುಪ್ಪಟ್ಟಾಗುತ್ತೆ

ಚುನಾವಣೆಯಲ್ಲಿ ಎದರಾಳಿಯನ್ನು ಮಣಿಸಲು ಹಲವು ತಂತ್ರಗಳು ನಡೆಯುತ್ತವೆ. ಅದರಲ್ಲಿ ಪ್ರಮುಖವಾದುದು ಎಂದರೆ ಎದುರಾಳಿಯ ಹೆಸರಿನ ಮತ್ತೊಬ್ಬ ಕ್ಯಾಂಡಿಡೇಟ್ ನನ್ನು ಅಕಾಡಕ್ಕೆ ಇಳಿಸುವುದು. ಹೌದು, ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಗ್ರಾಮಾಂತರದಿಂದ ಬಿಜೆಪಿ ಅಭ್ಯರ್ಥಿ ಸಿ ಎನ್ ಮಂಜುನಾಥ್(CN Manjunath) ವಿರುದ್ಧ ಅಪ್ಪ, ಅಮ್ಮ, ಊರು, ಜಿಲ್ಲೆ ಎಲ್ಲದೂ ಒಂದೇ ಆಗಿದ್ದ ಮತ್ತೊಬ್ಬ ಸಿಎನ್ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ಮಂಡ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ(H D kumarswamy) ಅವರ ವಿರುದ್ಧ ಅವರ ಅಣ್ಣನ ಹೆಸರಿನಂತೆ ಎಚ್ ಡಿ ರೇವಣ್ಣ(HD Revanna) ಎಂಬುವವರೂ ನಾಮಪತ್ರ ಸಲ್ಲಿಸಿದ್ದರು. ಇದೀಗ ಈ ಬೆನ್ನಲ್ಲೇ ರಾಜಕೀಯ ಪಕ್ಷಗಳ ನಾಯಕರ ಹೆಸರು ಇರುವ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದು ಗಮನ ಸೆಳೆದಿದ್ದಾರೆ.

Advertisement

ಇದನ್ನೂ ಓದಿ: Tulsi Plants: ತುಳಸಿ ಗಿಡದ ಆರೈಕೆ ಹೇಗೆ?

ಹೌದು, ಬೆಂಗಳೂರು ಕೇಂದ್ರದಲ್ಲಿ(Bengaluru Central) ರಾಹುಲ್‌ ಗಾಂಧಿ(Rahul Gandhi) ಎನ್‌. ಹಾಗೂ ಎಸ್‌.ಎಂ. ಕೃಷ್ಣ(SM Krishna) ಹೆಸರಿನ ಪಕ್ಷೇತರ ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ. ಕೊನೇ ಗಳಿಗೆಯಲ್ಲಿ ಈ ಅಚ್ಚರಿ ವ್ಯಕ್ತಿಗಳು ಕಣಕ್ಕಿಳಿಯುತ್ತಿರುವುದು ಬಾರೀ ವಿಶೇಷ ಎನಿಸಿದೆ. ಅಲ್ಲದೆ ಪ್ರಮುಖ ರಾಜಕೀಯ ನಾಯಕರ ಹೆರನ್ನೇ ಅವರಿಟ್ಟುಕೊಂಡಿರುವುದು ಅಚ್ಚರಿ ಎನಿಸಿದೆ.

Advertisement
Advertisement
Advertisement