Parliment Election: ಇಂಡಿಯಾ ಕೂಟಕ್ಕೆ 295 ಸ್ಥಾನ ಪಕ್ಕಾ - ಖರ್ಗೆ ಭವಿಷ್ಯ !!
Parliment Election : ದೇಶಾದ್ಯಂತ ಲೋಕಸಭಾ ಚುನಾವಣೆ ಮುಗಿದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೊರಬಿದ್ದಿವೆ. ಎಲ್ಲಾ ಸಮೀಕ್ಷೆಗಳು NDAಗೆ ಜೈ ಎನ್ನುತ್ತಾ ನರೇಂದ್ರ ಮೋದಿಯೇ ಮುಂದಿನ ಪ್ರಧಾನಿ ಎನ್ನುತ್ತಿವೆ. ಆದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikharjun Kharge)ಮಾತ್ರ ಇಂಡಿಯಾ ಕೂಟಕ್ಕೆ 295 ಸ್ಥಾನ ಫಿಕ್ಸ್ ಎಂದು ಹೇಳಿದ್ದಾರೆ.
ಇಂಡಿಯಾ(INDIA) ಮೈತ್ರಿಕೂಟಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ(Parliament Election )ಕನಿಷ್ಟ 295 ಸ್ಥಾನಗಳು ಸಿಗಲಿವೆ. ಅಲ್ಲದೆ ಅಂತಿಮ ಫಲಿತಾಂಶಗಳು ಹೊರಬಿದ್ದಾಗ ತಮಗೆ ಸಿಗುವ ಸ್ಥಾನಗಳ ಸಂಖ್ಯೆ ಹೆಚ್ಚಾಗಬಹುದೇ ಹೊರತು ಕಡಿಮೆಯಂತೂ ಆಗಲಾರದು. ಮೈತ್ರಿಕೂಟದ ಎಲ್ಲ ಪಕ್ಷಗಳ ನಾಯಕರು ನೀಡಿದ ಮಾಹಿತಿಯ ಆಧಾರದ ಮೇಲೆ ತಮಗೆ ಸಿಗುವ ಸ್ಥಾನಗಳ ಸಂಖ್ಯೆಯನ್ನು ಕಂಡುಕೊಳ್ಳಲಾಗಿದೆ ಎಂದು ಖರ್ಗೆ ಹೇಳಿದರು.
ಅಂದಹಾಗೆ ಶನಿವಾರ ಲೋಕಸಭೆ ಚುನಾವಣೆಯ ಕೊನೆ ಹಂತದ ಮತದಾನಕ್ಕೆ ತೆರೆಬೀಳುವ ಕೆಲವೇ ಗಂಟೆಗಳ ಮುನ್ನ ಖರ್ಗೆ ಅವರ ದಿಲ್ಲಿ ನಿವಾಸದಲ್ಲಿ ಐಎನ್‌ಡಿಐಎ ನಾಯಕರು ಸಭೆ ಸೇರಿ ಸುಮಾರು ಎರಡೂವರೆ ಗಂಟೆ ಚರ್ಚೆ ನಡೆಸಿದರು. ಸಭೆ ಬಳಿಕ ಖರ್ಗೆ ಈ ಘೋಷಣೆ ಮಾಡಿದ್ದಾರೆ. ಜೊತೆಗೆ ಎನ್‌ಡಿಎ 235 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಖರ್ಗೆ ಅಂಕಿ ಅಂಶಗಳ ಮೂಲಕ ತಿಳಿಸಿದ್ದಾರೆ.
ಎಕ್ಸಿಟ್ ಪೋಲ್ ಗಳು ಹೇಳೋದೇನು?
ಇಂಡಿಯಾ ನ್ಯೂಸ್ ಡಿ-ಡೈನಾಮಿಕ್ಸ್
ಎನ್‌ಡಿಎ: 371
ಇಂಡಿಯಾ: 125
ಇತರೆ: 47
ಜನ್ ಕೀ ಬಾತ್
ಎನ್‌ಡಿಎ: 362-392
ಇಂಡಿಯಾ: 141-161
ಇತರೆ: 10-20
ನ್ಯೂಸ್ ನೇಷನ್
ಎನ್‌ಡಿಎ: 342-378
ಇಂಡಿಯಾ: 153-169
ಇತರೆ: 21-23
ರಿಪಬ್ಲಿಕ್ ಭಾರತ್-ಮ್ಯಾಟ್ರಿಝ್
ಎನ್‌ಡಿಎ: 353-368
ಇಂಡಿಯಾ: 118-133
ಇತರೆ: 43-48