ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Parliment election : ಜಯದೇವ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಲೋಕಸಭಾ ಅಭ್ಯರ್ಥಿ ?! ಈ ಕ್ಷೇತ್ರದಿಂದಲೇ ಕಣಕ್ಕೆ, ಪಕ್ಷ ಯಾವುದು ?

08:37 AM Feb 07, 2024 IST | ಹೊಸ ಕನ್ನಡ
UpdateAt: 08:38 AM Feb 07, 2024 IST
Advertisement

Parliament election : ಮುಂಬರುವ ಲೋಕಸಭಾ ಚುಣಾವಣೆಯಲ್ಲಿ(Parliament election)ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್‌ ಅವರನ್ನ ಕಣಕ್ಕಿಳಿಸುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಹಾಗಿದ್ರೆ ಪಕ್ಷ ಯಾವುದು, ಕಣಕ್ಕಿಳಿಯೋ ಕ್ಷೇತ್ರ ಯಾವುದು ಗೊತ್ತಾ?

Advertisement

ಇದನ್ನೂ ಓದಿ: Emily Willis: ಖ್ಯಾತ ನೀಲಿ ಚಿತ್ರ ತಾರೆ ಎಮಿಲಿ ವಿಲ್ಲೀಸ್ ಆಸ್ಪತ್ರೆಗೆ ದಾಖಲು - ಸ್ಥಿತಿ ಗಂಭೀರ!! ಅಷ್ಟಕ್ಕೂ ನಡೆದದ್ದೇನು ?

ಡಾ. ಮಂಜುನಾಥ್(Dr manjunath) ಅವರು ಕೆಲವು ದಿನಗಳ ಹಿಂದಷ್ಟೇ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ನಿವೃತ್ತಿ ಹೊಂದಿದ್ದರು. ವೈಧ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದು, ಎಲ್ಲಾ ಪಕ್ಷದ ನಾಯಕರಿಗೂ ಡಾ ಮಂಜುನಾಥ್‌ ಅವರು ಚಿರಪರಿಚಿತರು. ಡಾ. ಸಿಎನ್ ಮಂಜುನಾಥ್ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆತರಲು ದಳಪತಿಗಳು ಪ್ಲಾನ್‌ ನಡೆಸಿದ್ದಾರೆ ಎನ್ನಲಾಗಿದೆ.

Advertisement

ಹೌದು, ಬಿಜೆಪಿ(BJP) ಜೊತೆಗೆ ಮೈತ್ರಿಯಾಗಿರುವ ಜೆಡಿಎಸ್‌(JDS) ಗೆ 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳು ಬಿಜೆಪಿ ಹಾಗೂ 4 ಕ್ಷೇತ್ರಗಳು ಜೆಡಿಎಸ್‌ ಗೆ ಸಿಗಲಿವೆ. ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿರುವ ಜೆಡಿಎಸ್ ಗೆ ಬಿಜೆಪಿ ಜೊತೆಗಿನ ಮೈತ್ರಿ ಮರುಜೀವ ತಂದಿದೆ. ಹೀಗಾಗಿ ಸಿಗುವ ನಾಲ್ಕು ಕ್ಷೇತ್ರಗಳಲ್ಲಿ ಯಾವುದಾದ್ರೂ ಒಂದು ಕ್ಷೇತ್ರದಿಂದ ಡಾ. ಮಂಜುನಾಥ್‌ ಅವರನ್ನ ಕಣಕ್ಕಿಳಿಸುವ ಕುರಿತು ಜೆಡಿಎಸ್‌ ನಾಯಕರು ಚಿಂತನೆ ನಡೆಸಿದ್ದಾರೆ.

ಯಾವ ಕ್ಷೇತ್ರದಲ್ಲಿ ಸ್ಪರ್ಧೆ?

ಒಕ್ಕಲಿಗರ ಭದ್ರಕೋಟೆಯಾದ ಬೆಂಗಳೂರು ಗ್ರಾಮಾಂತರ ಅಥವಾ ಬೆಂಗಳೂರು ಉತ್ತರದಿಂದ ಮಂಜುನಾಥ್ ಅವರನ್ನು ಅಭ್ಯರ್ಥಿ ಮಾಡಲು ಕಮಲದಳ ನಾಯಕರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಈ ಎರಡು ಲೋಕಸಭಾ ಕ್ಷೇತ್ರಗಳ ಪೈಕಿ ಒಂದರಿಂದ ಜೆಡಿಎಸ್ ಅಥವಾ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಮಂಜುನಾಥ್ ಕಣಕ್ಕಿಳಿದರೆ ಗೆಲುವಿನ ಹಾದಿ ಸುಗಮ ಎಂಬುದು ಉಭಯ ಪಕ್ಷಗಳ ನಾಯಕರ ಅಂದಾಜಾಗಿದೆ.

Advertisement
Advertisement