Mouse Milk: ಒಂದು ಲೀಟರ್ ಇಲಿ ಹಾಲು ಬರೋಬ್ಬರಿ 18 ಲಕ್ಷ ರು.! : ಲೀಟರ್ ಇಲಿ ಹಾಲಿಗೆ ಎಷ್ಟು ಇಲಿಗಳು ಬೇಕಾಗುತ್ತವೆ ಗೊತ್ತಾ ?
Mouse Milk: ನಾವು ಪ್ರತಿದಿನ ಎದ್ದ ತಕ್ಷಣ ಒಂದು ಕಪ್ ಕಾಫಿ ಅಥವಾ ಚಹಾವನ್ನು ಕುಡಿಯುತ್ತೇವೆ. ನಾವು ಎಮ್ಮೆಯ ಹಾಲು ಮತ್ತು ಹಸುವಿನ ಹಾಲನ್ನು ಸಾಮಾನ್ಯವಾಗಿ ಚಹಾ ಮಾಡಲು ಬಳಸುತ್ತೇವೆ. ಆದರೆ ಎಮ್ಮೆ ಹಾಲು, ಹಸುವಿನ ಹಾಲು ಮಾತ್ರವಲ್ಲದೆ ಮೇಕೆ ಹಾಲು ಕೂಡ ಸೇವಿಸಲಾಗುತ್ತದೆ. ಆದರೆ ಈಗ ಒಂಟೆ ಹಾಲು, ಕತ್ತೆ ಹಾಲಿಗೆ ಪೌಷ್ಟಿಕ ಹಾಲು ಎಂಬ ಕಾರಣಕ್ಕೆ ಬೇಡಿಕೆಯೂ ಹೆಚ್ಚಿದೆ. ಏಕೆಂದರೆ ಈ ಹಾಲುಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದರಿಂದಾಗಿ ಈ ಹಾಲಿಗೆ ಬೇಡಿಕೆ -ಹೆಚ್ಚಿದೆ. ಸಾವಿರಾರು ರೂಪಾಯಿ ವೆಚ್ಚದಲ್ಲಿ ಒಂಟೆ ಮತ್ತು ಕತ್ತೆ ಹಾಲು ಮಾರಾಟ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Mouse Milk: ಒಂದು ಲೀಟರ್ ಇಲಿ ಹಾಲು ಬರೋಬ್ಬರಿ 18 ಲಕ್ಷ ರು.! : ಲೀಟರ್ ಇಲಿ ಹಾಲಿಗೆ ಎಷ್ಟು ಇಲಿಗಳು ಬೇಕಾಗುತ್ತವೆ ಗೊತ್ತಾ ?
ಆದರೆ ಒಂಟೆ ಹಾಲು ಮತ್ತು ಕತ್ತೆ ಹಾಲಿಗಿಂತ ದುಬಾರಿಯಾದ ಇನ್ನೊಂದು ಹಾಲಿದೆ. ಅದೇ ತಾಜಾ 'ಮೌಸ್ ಮಿಲ್ಕ್' ಏನಿದು ಇಲಿ ಹಾಲು ಅಷ್ಟೊಂದು ಕಾಸ್ಟ್ಲಿನ! ಇಲಿ ಚಿಕ್ಕದಾಗಿದ್ದು ಅದರ ಹಾಲನ್ನು ಸಂಗ್ರಹಿಸುವುದಾದರು ಹೇಗೆ..? ಇಲಿ ಹಾಲನ್ನು ಏಕೆ ಬಳಸುತ್ತಾರೆ? ಎಂಬಂತಹ ದೊಡ್ಡ ಅನುಮಾನಗಳು ಬಂದು ಹೋಗುತ್ತವೆ. ಮತ್ತು ಆ 'ಇಲಿ ಹಾಲಿನ' ವಿಚಿತ್ರತೆ -ಏನು? ಯಾವುದಕ್ಕೆ ಬಳಸುತ್ತಾರೆ ಎಂದು ತಿಳಿದುಕೊಳ್ಳೋಣ.
ಏಕೆಂದರೆ ಒಂದು ಲೀಟರ್ ಇಲಿ ಹಾಲಿನ ಬೆಲೆ 23 ಸಾವಿರ ಯುರೋ ಅಂದರೆ ಸುಮಾರು ರೂ. 18 ಲಕ್ಷ..! 18ಲಕ್ಷ ಹೂಡಿಕೆ ಮಾಡಿದರೆ ಸಿಂಗಲ್ ಬೆಡ್ ರೂಂ ಮನೆ ಖರೀದಿಸಬಹುದು. ಮೂರು ಕಿಲೋಗಿಂತ ಹೆಚ್ಚು ಚಿನ್ನ ಖರೀದಿಸಬಹುದು. ಆದರೆ ಅಷ್ಟು ಸಣ್ಣ ಪ್ರಾಣಿಯ ಹಾಲು 18 ಲಕ್ಷ ರೂಪಾಯಿ ಎಂದರೆ ಆಶ್ಚರ್ಯವೇ? ಏಕೆಂದರೆ ಮರಿಗಳಿಗೆ ಜನ್ಮ ನೀಡಿದ ನಂತರ ಇಲಿಗಳ ದೇಹದಲ್ಲಿ ಹಾಲಿನ ಪ್ರಮಾಣವು ತುಂಬಾ ಕಡಿಮೆಯಾಗುತ್ತದೆ. ಮತ್ತು ಒಂದು ಲೀಟರ್ ಇಲಿ ಹಾಲು ಸಂಗ್ರಹಿಸಲು 40 ಸಾವಿರ ಇಲಿಗಳು ಬೇಕು.
ಹಾಗಾದರೆ ಈ ಇಲಿ ಹಾಲು ಯಾವುದಕ್ಕೆ ಬಳಸುತ್ತಾರೆ..? ಯಾಕೆ..? ಎಂಬ ವಿಷಯಗಳು ತುಂಬಾ -ಆಸಕ್ತಿದಾಯಕವಾಗಿವೆ. ಇಲಿ ಹಾಲನ್ನು ಸಾಮಾನ್ಯವಾಗಿ ಸಂಶೋಧನೆಗೆ ಬಳಸಲಾಗುತ್ತದೆ. ವಿಜ್ಞಾನಿಗಳು ಸಾಮಾನ್ಯವಾಗಿ ಇಲಿಗಳು, ಮಂಗಗಳು, ಹಂದಿಗಳು, ಮೊಲಗಳಂತಹ ಪ್ರಾಣಿಗಳ ಮೇಲೆ ಸಂಶೋಧನೆ ಮಾಡುತ್ತಾರೆ. ಆದರೆ ಇಲಿ ಹಾಲನ್ನು ವಿಜ್ಞಾನಿಗಳು ಸಂಶೋಧನೆಗೆ ಬಳಸುತ್ತಾರೆ.
ಮಲೇರಿಯಾ ಬ್ಯಾಕ್ಟಿರಿಯಾವನ್ನು ಕೊಲ್ಲುವ ಔಷಧಿಗಳಲ್ಲಿ ಇಲಿ ಹಾಲನ್ನು ಬಳಸಲಾಗುತ್ತದೆ. ವಿಜ್ಞಾನಿಗಳು ಹಸುವಿನ ಹಾಲಿಗೆ ಬದಲಾಗಿ ಇಲಿಯ ಹಾಲನ್ನು ಬಳಸುತ್ತಾರೆ. ಎಮ್ಮೆಯ ಹಾಲಿಗಿಂತ ಹಸುವಿನ ಹಾಲಿನಲ್ಲಿ ಹೆಚ್ಚಿನ ಪೋಷಕಾಂಶಗಳಿವೆ ಎಂದು ತಜ್ಞರು ಹೇಳುತ್ತಾರೆ, ಆದರೆ ಇಲಿ ಹಾಲಿನಲ್ಲಿ ಹಸುವಿನ ಹಾಲಿಗಿಂತ ನಾಲ್ಕು ಪಟ್ಟು ಹೆಚ್ಚು ಪೋಷಕಾಂಶಗಳಿವೆ. ಹಾಗಾಗಿಯೇ ವಿಜ್ಞಾನಿಗಳು ಸಂಶೋಧನೆಗೆ ಹಸುವಿನ ಹಾಲಿನ ಬದಲು ಇಲಿ ಹಾಲನ್ನು ಬಳಸುತ್ತಿದ್ದಾರೆ.
ಇಲಿ ಡಿಎನ್ಎ ಇತರ ಪ್ರಾಣಿಗಳ ಡಿಎನ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಇದು ಮಾನವ ದೇಹಕ್ಕೆ ಹೆಚ್ಚು ಹತ್ತಿರವಾಗಿದೆ. ಪ್ರಯೋಗವನ್ನು ನಡೆಸಲು ಫಲಿತಾಂಶಗಳನ್ನು ವಿಶ್ಲೇಷಿಸಲು ವಿಜ್ಞಾನಿಗಳಿಗೆ ಸುಲಭವಾಗುತ್ತದೆ. ಮಲೇರಿಯಾವನ್ನು ತಡೆಗಟ್ಟಲು ಸಂಶೋಧನಾ ಸಾಮಗ್ರಿಗಳನ್ನು ತಯಾರಿಸಲು ಇಲಿ ಹಾಲನ್ನು ಬಳಸಲಾಗುತ್ತದೆ. ಹಾಗಾಗಿ ಇಲಿ ಹಾಲು ತುಂಬಾ ದುಬಾರಿ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಇದೀಗ ಇಲಿ ಹಾಲಿನ ಬೆಲೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.