ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Odisha: ಮಗುಚಿದ 50 ಜನರಿದ್ದ ದೋಣಿ; ಸ್ಥಳೀಯ ಮೀನುಗಾರರಿಂದ ಹಲವರ ರಕ್ಷಣೆ; ಇಬ್ಬರ ಸಾವು, ಎಂಟು ಮಂದಿ ನಾಪತ್ತೆ

Odisha: ದೋಣಿಯೊಂದು ಮಗುಚಿದ್ದು, ಪರಿಣಾಮ ಇಬ್ಬರು ಸಾವಿಗೀಡಾದ ಘಟನೆಯೊಂದು ನಡೆದಿದೆ. ಜೊತೆಗೆ ಎಂಟು ಮಂದಿ ನಾಮಪತ್ತೆಯಾಗಿದ್ದಾರೆ.
10:08 AM Apr 20, 2024 IST | ಸುದರ್ಶನ್
UpdateAt: 11:32 AM Apr 20, 2024 IST
Advertisement

Odisha: ದೋಣಿಯೊಂದು ಮಗುಚಿದ್ದು, ಪರಿಣಾಮ ಇಬ್ಬರು ಸಾವಿಗೀಡಾದ ಘಟನೆಯೊಂದು ನಡೆದಿದೆ. ಜೊತೆಗೆ ಎಂಟು ಮಂದಿ ನಾಮಪತ್ತೆಯಾಗಿದ್ದಾರೆ. ಈ ಘಟನೆ ನಡೆದಿರುವುದು ಒಡಿಶಾ ರಾಜ್ಯದಲ್ಲಿ. ಶುಕ್ರವಾರ ಈ ಘಟನೆ ನಡೆದಿದ್ದು, ಜಾರ್ಸುಗುಡ ಜಿಲ್ಲೆಯ ಮಹಾನದಿ ಎಂಬಲ್ಲಿ ಈ ಘಟನೆ ನಡೆದಿದೆ.

Advertisement

ಇದನ್ನೂ ಓದಿ: Arvind Kejriwal: ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಜಾಮೀನಿಗಾಗಿ ಮಾವು ಸೇವನೆ- ಇಡಿ ಆರೋಪ

ಸ್ಥಳೀಯ ಮೀನುಗಾರರಿಂದ 35 ಪ್ರಯಾಣಿಕರ ರಕ್ಷಣೆ ಮಾಡಲಾಗಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ.

Advertisement

ಈ ದುರ್ಘಟನೆಯು ಪಥರ್ಸೇನಿ ಕುಡಾದಿಂದ ಬರ್ಗರ್‌ ಜಿಲ್ಲೆಯ ಬಂಜಿಪಲ್ಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಡೆದಿದೆ. ದೋಣಿಯಲ್ಲಿ ಸುಮಾರು 50 ಜನರಿದ್ದು, ಜಾರ್ಸುಗುಡಾ ಜಿಲ್ಲೆಯ ರೆಂಗಾಲಿ ಪೊಲೀಸ್‌ ಠಾಣಾ ವ್ಯಾಪ್ತಿಯ ಶಾರದಾ ಘಾಟ್‌ ತಲುಪುವ ಮೊದಲೇ ಬೋಟ್‌ ಪಲ್ಟಿಯಾಗಿರುವ ಕುರಿತು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Lakshmi Rai: ಹುಡುಗರಿಗೆಲ್ಲಾ ನನ್ನ ನಾಟಿ ಫೋಟೋ ಕಳಿಸಿದ್ದೇನೆ - ನಟಿ ಲಕ್ಷ್ಮೀ ರೈ !!

ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡಾ ಎಂಟು ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ನಾಪತ್ತೆಯಾದವರಿಗಾಗಿ ಹುಡುಕಾಟ ಮುಂದುವರಿದಿದೆ. ಮೃತ ಕುಟುಂಬಗಳಿಗೆ ಒಡಿಶಾ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದು, ನಾಲ್ಕು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

 

Advertisement
Advertisement