ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Nude City: ಬಟ್ಟೆ ಧರಿಸುವುದನ್ನು ನಿಷೇಧಿಸಿದೆ ಈ ನಗರ; ಇದರ ಬಗ್ಗೆ ನಿಮಗೆ ತಿಳಿದಿದೆಯೇ?

Nude City: ನ್ಯೂಡೆಸ್ಟ್‌ ಸಿಟಿ ಎಂದು ಹೇಳುತ್ತೇವೆ. ನಗ್ನ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಆ ನಗರ ಯಾವುದು? ಬನ್ನಿ ತಿಳಿಯೋಣ.
10:06 AM Apr 23, 2024 IST | ಸುದರ್ಶನ್
UpdateAt: 10:11 AM Apr 23, 2024 IST
Advertisement

Nude City: ಜಗತ್ತಿನಲ್ಲಿ ಅನೇಕ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತದೆ. ಜೊತೆಗೆ ನಮ್ಮನ್ನು ಆಶ್ಚರ್ಯಗೊಳಿಸುವ ವಿಷಯಗಳು ಕೂಡಾ ಇರುತ್ತದೆ. ಕೆಲವೊಂದು ಸಂಸ್ಕೃತಿ ನಮ್ಮನ್ನು ನಿಜಕ್ಕೂ ಇದು ಸತ್ಯನಾ ಎಂಬ ಆಲೋಚನಾಲಹರಿಗೆ ತಳ್ಳುತ್ತದೆ. ಅಂತಹಾ ವಿಚಿತ್ರ ಸಂಸ್ಕೃತಿಯನ್ನು ನಡೆಸುವ ಒಂದು ನಗರವಿದೆ. ಇದನ್ನು ನ್ಯೂಡೆಸ್ಟ್‌ ಸಿಟಿ ಎಂದು ಹೇಳುತ್ತೇವೆ. ನಗ್ನ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಆ ನಗರ ಯಾವುದು? ಬನ್ನಿ ತಿಳಿಯೋಣ.

Advertisement

ಇದನ್ನೂ ಓದಿ:  Lok Sabha Elections: ಮೈಸೂರಿನ ಪ್ರವಾಸಿ ತಾಣಗಳು ಎ.26 ಕ್ಕೆ ಬಂದ್ ‌

ಆ ನಗರವೇ ಕ್ಯಾಪ್ ಡಿ'ಆಡ್ಜ್ ಹೆಸರಿನ ಫ್ರೆಂಚ್ ನಗರವಾಗಿದೆ. ಇದು ಮೆಡಿಟರೇನಿಯನ್ ಕರಾವಳಿಯ ಸಮೀಪದಲ್ಲಿದೆ. ವಿಶಿಷ್ಟ ಜೀವನಶೈಲಿಗೆ ಈ ನಗರ ಹೆಸರುವಾಸಿಯಾಗಿದೆ. ಇಲ್ಲಿ ನಿಮ್ಮ ಮೇಲೆ ಯಾವುದೇ ರೀತಿಯ ನಿರ್ಬಂಧಗಳನ್ನು ವಿಧಿಸಲಾಗುವುದಿಲ್ಲ. ಈ ನಗರವನ್ನು ಹೆಚ್ಚಾಗಿ ಹನಿಮೂನ್ ತಾಣವೆಂದು ಕರೆಯಲಾಗುತ್ತದೆ.

Advertisement

ಇದನ್ನೂ ಓದಿ:  Bengaluru Karaga: ಬೆಂಗಳೂರಿಗರೇ ಗಮನಿಸಿ, ಇಂದು, ನಾಳೆ ಸಂಚಾರ ಮಾರ್ಗದಲ್ಲಿ ಬದಲಾವಣೆ

ಈ ನಗರದಲ್ಲಿ ಜನರಿಗೆ ಬಟ್ಟೆ ಇಲ್ಲದೆ ತಿರುಗಾಡುವ ಸ್ವಾತಂತ್ರ್ಯವಿದೆ. ಸುಂದರವಾದ ಕಡಲತೀರಗಳಿಗೆ ಹೆಸರುವಾಸಿಯಾದ ಈ ನಗರದಲ್ಲಿ ಸಮುದ್ರ ತೀರದ ನೋಟವು ವಿಭಿನ್ನವಾಗಿದೆ. ಇಲ್ಲಿ, ಬೀಚ್‌ನ ಹೊರತಾಗಿ, ಜನರು ಒಂದೇ ಒಂದು ತುಂಡು ಬಟ್ಟೆಯನ್ನು ಧರಿಸದೆ ರೆಸ್ಟೋರೆಂಟ್‌ಗಳು ಮತ್ತು ಸೂಪರ್‌ಮಾರ್ಕೆಟ್‌ಗಳಲ್ಲಿ ಸುತ್ತಾಡಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ನೀವು ಕ್ಷೌರ ಮಾಡಬೇಕಾಗಿದ್ದರೂ ಅಥವಾ ಬೇಕರಿಯಿಂದ ಕೆಲವು ವಸ್ತುಗಳನ್ನು ಖರೀದಿಸಬೇಕಿದ್ದರೂ ಅಥವಾ ವ್ಯಾಯಾಮ ಮಾಡಬೇಕಿದ್ದರೂ ಸಹ ಇಲ್ಲಿ ಯಾವುದೇ ರೀತಿಯ ಬಟ್ಟೆಗಳನ್ನು ಧರಿಸಲು ಯಾವುದೇ ನಿರ್ಬಂಧವಿಲ್ಲ.

ಪ್ರತಿ ಬೇಸಿಗೆಯಲ್ಲಿ ಕ್ಯಾಪ್ ಡಿ'ಆಡ್ಜ್ ನಗರವು ಪ್ರವಾಸಿಗರಿಂದ ಗಿಜಿಗುಡುತ್ತಿರುತ್ತದೆ. ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ 50 ಸಾವಿರ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬೇಸಿಗೆಯಲ್ಲಿ ಇಲ್ಲಿಗೆ ಬರುವ ಹೆಚ್ಚಿನ ಪ್ರವಾಸಿಗರು ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಇಟಲಿ, ಅಮೆರಿಕ, ಡೆನ್ಮಾರ್ಕ್ ಮತ್ತು ಕೆನಡಾದಿಂದ ಬಂದವರು. ಹನಿಮೂನ್‌ಗಾಗಿ ಇಲ್ಲಿಗೆ ಬರುವ ಜೋಡಿಗಳು ಇದರ ಅನುಭವನ್ನು ಹೆಚ್ಚಾಗಿ ಬಳಸುತತಾರೆ.

Advertisement
Advertisement