For the best experience, open
https://m.hosakannada.com
on your mobile browser.
Advertisement

New Male Birth Control Gel: ಇನ್ಮೇಲೆ ಗರ್ಭಧಾರಣೆ ತಡೆಯುವ ಚಿಂತೆಯಿಲ್ಲ: ಅನಾವಶ್ಯಕ ಗರ್ಭಧಾರಣೆ ತಡೆಯಲು ಲಭ್ಯವಾಗಲಿದೆ ಈ ಜೆಲ್!

New Male Birth Control Gel: ಗಂಡಸರು ಕೇವಲ ಕಾಂಡೋಮ್‌ ಅಷ್ಟೇ ಅಲ್ಲ, ಈ ಜೆಲ್ ಬಳಸಿದ್ರೂ ಮಕ್ಕಳಾಗೋ ರಿಸ್ಕ್ ಇರೋದಿಲ್ಲವಂತೆ! ಇದರಿಂದ, ಪುರುಷರು ಅನಾವಶ್ಯಕ ಗರ್ಭಧಾರಣೆ ತಡೆಯಲು ಸಾಧ್ಯ.
01:52 PM Jun 07, 2024 IST | ಕಾವ್ಯ ವಾಣಿ
UpdateAt: 01:53 PM Jun 07, 2024 IST
new male birth control gel  ಇನ್ಮೇಲೆ ಗರ್ಭಧಾರಣೆ ತಡೆಯುವ ಚಿಂತೆಯಿಲ್ಲ  ಅನಾವಶ್ಯಕ ಗರ್ಭಧಾರಣೆ ತಡೆಯಲು ಲಭ್ಯವಾಗಲಿದೆ ಈ ಜೆಲ್
Advertisement

New Male Birth Control Gel: ಪುರುಷರಿಗೆ ಇನ್ಮೇಲೆ ಗರ್ಭಧಾರಣೆ ತಡೆಯಲು ಸುಲಭ ಉಪಾಯವೊಂದು ಬಂದಿದೆ. ಹಾಗಾದ್ರೆ ಏನಿದು ವಿಚಾರ ಎಂದು ತಿಳಿಯೋಣ. ಈಗಾಗಲೇ ಬೇಡದ ಗರ್ಭಧಾರಣೆಯನ್ನು ತಡೆಯಲು ಹಲವು ಜನನ ನಿಯಂತ್ರಣ ಆಯ್ಕೆಗಳಿವೆ. ಆದರೂ ಕೆಲವೊಮ್ಮೆ ಅವುಗಳು ತೊಂದರೆಗಳಿಗೆ ಕಾರಣವಾಗುತ್ತದೆ. ಅಸುರಕ್ಷಿತ ಲೈಂಗಿಕತೆ, ಕಾಂಡೋಮ್ ಮುರಿತ ಗರ್ಭಧಾರಣೆಗೆ ಕಾರಣವಾಗಬಹುದು.

Advertisement

ಆದರೆ ಗಂಡಸರು ಕೇವಲ ಕಾಂಡೋಮ್‌ ಅಷ್ಟೇ ಅಲ್ಲ, ಈ ಜೆಲ್ ಬಳಸಿದ್ರೂ ಮಕ್ಕಳಾಗೋ ರಿಸ್ಕ್ ಇರೋದಿಲ್ಲವಂತೆ! ಇದರಿಂದ, ಪುರುಷರು ಅನಾವಶ್ಯಕ ಗರ್ಭಧಾರಣೆ ತಡೆಯಲು ಸಾಧ್ಯ. ಶೀಘ್ರದಲ್ಲೇ ಹೊಸ ಚಿಕಿತ್ಸಾ ವಿಧಾನವೊಂದು ಲಭ್ಯವಾಗಲಿದ್ದು, ಇದು ಹೆಚ್ಚು ಪರಿಣಾಮಕಾರಿಯಾಗಿದೆ.

NDA Parliamentary Leader: ಎನ್‌ಡಿಎ ಸಂಸದೀಯ ನಾಯಕರಾಗಿ ಪ್ರಧಾನಿ ಮೋದಿ ಅವರು ಅವಿರೋಧ ಆಯ್ಕೆ

Advertisement

ಸದ್ಯ ಅಮೆರಿಕದ ಸಂಶೋಧಕರು ಅಭಿವೃದ್ಧಿ ನಡೆಸುತ್ತಿದ್ದು, ಗ್ಲೂ ಲಿಕ್ಷಿಡ್​ (ಗ್ಲೂ) ರೀತಿಯ ಕ್ರೀಂ ಇದಾಗಿದೆ. ಇದನ್ನು ಪುರುಷರು ತಮ್ಮ ಭುಜಗಳಿಗೆ ಹಚ್ಚಿದರೆ ಸಾಕು ವಾರದೊಳಗೆ ಅವರ ಫಲವತ್ತತೆ ಕಡಿಮೆಯಾಗುತ್ತದೆ. ಗರ್ಭ ತಡೆಯುವ ನಿಟ್ಟಿನಲ್ಲಿ ಪುರಷರಿಗೆ ಇರುವ ಉತ್ತಮವಾದ ಮತ್ತೊಂದು ಆಯ್ಕೆ ಇದಾಗಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ವಿವರವಾದ ಅಧ್ಯಯನ ನಡೆಸಲಾಗಿದ್ದು, ಈ ಜೆಲ್​ ಅನ್ನು ಎನ್​ಇಎಸ್​/ಟಿ ಎಂದು ಕರೆಯಲಾಗುವುದು ಎಂದು ತಿಳಿಸಿದ್ದಾರೆ.

ಎನ್​ಇಎಸ್​/ಟಿಯಲ್ಲಿ ನೆಸ್ಟೊರಾನ್​ ಮತ್ತು ಟೆಸ್ಟೊಸ್ಟೆರೊನ್​ ಅಂಶಗಳನ್ನು ಪ್ರಮುಖವಾಗಿ ಸಂಯೋಜಿಸಲಾಗಿದೆ. ನೆಸ್ಟೊರಾನ್ ಪ್ರೊಜೆಸ್ಟರಾನ್‌ನ ಸಂಶ್ಲೇಷಿತ ಆವೃತ್ತಿಯಾಗಿದ್ದು, ಗರ್ಭಧಾರಣೆ ಮತ್ತು ಇತರ ಸಂತಾನೋತ್ಪತ್ತಿ ಕಾರ್ಯಗಳಿಗೆ ಕಾರಣವಾಗುವ ಹಾರ್ಮೋನ್ ಇದಾಗಿದೆ. ಮಹಿಳೆಯರಲ್ಲಿ ಗರ್ಭಧಾರಣೆ ಹಾರ್ಮೋನ್‌ಗಳನ್ನು ನಿಯಂತ್ರಿಸಲು ನೆಸ್ಟೊರಾನ್‌ನಂತಹ ಔಷಧಗಳನ್ನು ಬಳಸಲಾಗುತ್ತದೆ. ಇಂತಹ ಔಷಧವನ್ನು ಪುರುಷರಿಗೆ ನೀಡಿದಾಗ ಇದು ವೃಷಣಗಳಲ್ಲಿನ ಟೆಸ್ಟೋಸ್ಟೆರಾನ್ ನಂತಹ ಫಲವತ್ತತೆ ಹಾರ್ಮೋನುಗಳ ಮಟ್ಟ ಕಡಿಮೆ ಮಾಡುತ್ತದೆ. ಫಲವಾಗಿ ಅವರ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಈ ಔಷಧ ರಕ್ತದಲ್ಲಿನ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಪುರುಷರ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಅಧ್ಯಯನ ಪ್ರಕಾರ ಈ ನೆಸ್ಟೋರೋನ್ ಔಷಧಿಯನ್ನು ಪುರುಷರಿಗೆ ನೀಡುವುದರಿಂದ ಇತರ ಕೆಲವು ಅಡ್ಡ ಪರಿಣಾಮ ಬೀರುತ್ತದೆ. ಪುರುಷರಲ್ಲಿನ ಪುರುಷರ ರಕ್ತದಲ್ಲಿನ ಹಾರ್ಮೋನ್ ಮಟ್ಟವನ್ನು ಸ್ಥಿರವಾಗಿಡಲು, ಜೆಲ್ ಮೂಲಕ ಟೆಸ್ಟೋಸ್ಟೆರಾನ್ ಅನ್ನು ಚುಚ್ಚುಮದ್ದು ಮಾಡುವುದರಿಂದ ತಾತ್ಕಾಲಿಕವಾಗಿ ಫಲವತ್ತತೆ ಕಡಿಮೆ ಮಾಡಬಹುದು.

ಇನ್ನು ಜೆಲ್ ಹಚ್ಚಿದ 12 ರಿಂದ 15 ವಾರಗಳಲ್ಲಿ ಪುರುಷರಲ್ಲಿ ವೀರ್ಯಾಣು ಸಂಖ್ಯೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ, ಇದಕ್ಕಿಂತ ಕಡಿಮೆ ಅವಧಿಯಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿರುವುದು ಕೂಡ ಕಂಡು ಬಂದಿದೆ ಎಂದು ಗರ್ಭನಿರೋಧಕ ಅಭಿವೃದ್ಧಿ ಕಾರ್ಯಕ್ರಮದ ಮುಖ್ಯಸ್ಥ ಡಯಾನಾ ಬ್ಲೈಥ್ಹೇಳಿದ್ದಾರೆ.

ಮುಖ್ಯವಾಗಿ ಈ ಅಧ್ಯಯನಕ್ಕೆ 222 ಮಂದಿಯನ್ನು ಭಾಗಿಯಾಗಿಸಿದ್ದು, 15 ವಾರಗಳ ಕಾಲ ನಡೆದ ಅಧ್ಯಯನದಲ್ಲಿ ಪರೀಕ್ಷೆಗೊಳಗಾದವರಲ್ಲಿ ವೀರ್ಯದ ಸಂಖ್ಯೆ ಶೇ 86ರಷ್ಟು ಕಡಿಮೆಯಾಗಿದೆ. ಐದು ವಾರಗಳಲ್ಲಿ ಶೇ 20ರಷ್ಟು, 8 ವಾರಗಳಲ್ಲಿ ಶೇ 52 ಮತ್ತು 9 ವಾರಗಳಲ್ಲಿ ಶೇ 62ರಷ್ಟು ವೀರ್ಯದ ಸಂಖ್ಯೆ ಕಡಿಮೆಯಾಗಿದೆ.
ಇದು ಅಧ್ಯಯನದ ಪ್ರಾಥಮಿಕ ಫಲಿತಾಂಶವಾಗಿದೆ. ಇದರ ಪೂರ್ಣ ಫಲಿತಾಂಶಕ್ಕೆ ಇನ್ನು ಸಮಯಬೇಕಿದೆ.
ಒಟ್ಟಿನಲ್ಲಿ ಈ ಜೆಲ್​ ಅನ್ನು ಮಾರುಕಟ್ಟೆಗೆ ತರಲು ಕಮರ್ಷಿಯಲ್​ ಪಾರ್ಟನರ್​ ಹುಡುಕಾಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದು ಲಭ್ಯವಾಗಲು ಇನ್ನು ಕೆಲವು ವರ್ಷಗಳ ಕಾಲ ಕಾಯಬೇಕಿದೆ.

ಪುತ್ತೂರು ವ್ಯಕ್ತಿಯಿಂದ ಅಯೋಧ್ಯೆಯಲ್ಲಿ ಸೋಲುಂಡ ಬಿಜೆಪಿ ಅಭ್ಯರ್ಥಿಗೆ ಹಿಗ್ಗಾ ಮುಗ್ಗಾ ಕ್ಲಾಸ್; ಆಡಿಯೋ ವೈರಲ್ !!

Advertisement
Advertisement
Advertisement