ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

New Virus: ಕೊರೋನ ಬೆನ್ನಲ್ಲೇ ಹೊಸ ವೈರಸ್ ಪತ್ತೆ: 8 ಮಂದಿ ಸಾವು!

New Virus: ಕೋವಿಡ್‌ ಸೋಂಕನ್ನೂ ಮೀರಿಸುವಂತಹ ಭಯಾನಕ ಕಾಯಿಲೆಯ ಭೀತಿ ಈಗ ಎಲ್ಲೆಡೆ ಶುರುವಾಗಿದೆ. ಹೌದು, ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಮತ್ತೊಂದು ವೈರಸ್ (New Virus)  ಸಂಚಲನ ಸೃಷ್ಟಿಸುತ್ತಿದೆ.
03:32 PM Jul 17, 2024 IST | ಕೆ. ಎಸ್. ರೂಪಾ
UpdateAt: 03:32 PM Jul 17, 2024 IST
Advertisement

New Virus: ಈಗಾಗಲೇ 2020ರಲ್ಲಿ ಮಹಾಮಾರಿ ಕೋವಿಡ್‌ಗೆ 70 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಕೊರೋನಾ ಸೋಂಕು ಸಂಪೂರ್ಣ ಜಗತ್ತನ್ನೇ  ತಟಸ್ಥ  ಮಾಡಿತ್ತು. ಇನ್ನೇನು ಕೊರೋನ ಭಯದಿಂದ ಚೇತರಿಕೆ ಕಾಣುವಷ್ಟರಲ್ಲಿ  ಜನರು ಮತ್ತೊಮ್ಮೆ ಜೀವ ಕೈಯಲ್ಲಿ ಹಿಡಿದಿಟ್ಟುಕೊಳ್ಳುವ ಪರಿಸ್ಥಿತಿಯ ಮುನ್ಸೂಚನೆ ದೊರೆತಿದೆ. ಹೌದು, ಕೋವಿಡ್‌ ಸೋಂಕನ್ನೂ ಮೀರಿಸುವಂತಹ ಭಯಾನಕ ಕಾಯಿಲೆಯ ಭೀತಿ ಈಗ ಎಲ್ಲೆಡೆ ಶುರುವಾಗಿದೆ. ಹೌದು, ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಮತ್ತೊಂದು ವೈರಸ್ (New Virus)  ಸಂಚಲನ ಸೃಷ್ಟಿಸುತ್ತಿದೆ. ಪ್ರಸ್ತುತ ಈ ವೈರಸ್ ಗುಜರಾತ್ ರಾಜ್ಯದಲ್ಲಿ ಅವ್ಯವಸ್ಥೆಯನ್ನು ಉಂಟು ಮಾಡಿದೆ.

Advertisement

ಗುಜರಾತ್‌ನ ಸಬರಕಾಂತ ಮತ್ತು ಅರಾವಳಿ ಜಿಲ್ಲೆಗಳಲ್ಲಿ ‘ಚಂಡೀಪುರ’ ಹೆಸರಿನ ಹೊಸ ವೈರಸ್ ಕಂಡು ಬಂದಿದೆ. ಈ ಚಂಡೀಪುರ ವೈರಸ್‌ನಿಂದ ಕಳೆದ ಐದು ದಿನಗಳಲ್ಲಿ ಗುಜರಾತ್‌ನಲ್ಲಿ ಆರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಮಂಗಳವಾರ ಈ ವೈರಸ್‌ನಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ವೈರಸ್‌ನಿಂದ ಇದುವರೆಗೆ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಗುಜರಾತ್ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ತಿಳಿಸಿದೆ. ಜೊತೆಗೆ 14 ಜನರು ಈ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಮುಖ್ಯವಾಗಿ ಸಬರಕಾಂತ, ಅರಾವಳಿ, ಮಹಿಸಾಗರ್, ಖೇಡಾ, ಮೆಹ್ಸಾನಾ ಮತ್ತು ರಾಜ್‌ಕೋಟ್ ಜಿಲ್ಲೆಗಳ ಜನರು ಈ ವೈರಸ್‌ನಿಂದ ಬಳಲುತ್ತಿದ್ದಾರೆ ಎಂದು ಕಂಡುಹಿಡಿದಿದ್ದಾರೆ.

Advertisement

Dry Clothes: ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ಕಷ್ಟವಾಗುತ್ತಿದ್ಯಾ? ಹಾಗಿದ್ರೆ ಈ ಟಿಪ್ಸ್ ನಿಮ್ಗೆ ಹೆಲ್ಪ್ ಮಾಡುತ್ತೆ

ವೈದ್ಯರ ಪ್ರಕಾರ, ‘ಚಂಡೀಪುರ’ ವೈರಸ್ ಸೋಂಕಿತ ಮಕ್ಕಳ ಮೆದುಳಿನಲ್ಲಿ ಊತ ಸೇರಿದಂತೆ ಹಲವು ರೋಗಲಕ್ಷಣಗಳು ಕಂಡುಬಂದಿವೆ. ವೈರಸ್ ಸೋಂಕಿತ ಮಕ್ಕಳ ಕುಟುಂಬ ಸದಸ್ಯರ ಮಾದರಿಗಳನ್ನು ಸಹ ಆರೋಗ್ಯ ಇಲಾಖೆ ತೆಗೆದುಕೊಳ್ಳುತ್ತಿದೆ.

ಇನ್ನು ಹಿಮ್ಮತ್‌ನಗರ ಸಿವಿಲ್ ಆಸ್ಪತ್ರೆಯಲ್ಲಿ ಒಟ್ಟು 6 ರೋಗಿಗಳು ದಾಖಲಾಗಿದ್ದಾರೆ. ಸಬರಕಾಂತದದ ಖೇಡಬ್ರಹ್ಮದ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ಅರಾವಳಿ ಜಿಲ್ಲೆಯ ಭಿಲೋರಾದ ಇಬ್ಬರು ಕೂಡ ಸಾವನ್ನಪ್ಪಿದ್ದಾರೆ. ಈ ವೈರಸ್ ಸೋಂಕಿತರು ಕೆಲವೊಮ್ಮೆ ಕೋಮಾಗೆ ಹೋಗುವ ಅಪಾಯವಿದೆ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಇನ್ನು ಮಕ್ಕಳಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸರ್ಕಾರ ಸೂಚಿಸಿದೆ.

H D Revanna: ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದ ಹೆಚ್‌ ಡಿ ರೇವಣ್ಣ; ಪಕ್ಕೆಲುಬಿಗೆ ಪೆಟ್ಟು

Advertisement
Advertisement