For the best experience, open
https://m.hosakannada.com
on your mobile browser.
Advertisement

New Delhi: ಕಾಂಗ್ರೆಸ್ ಗೆ ಬಿಗ್ ರಿಲೀಫ್ ನೀಡಿದ ಇಡಿ : ಎಲೆಕ್ಷನ್ ಮುಗಿಯುವವರೆಗೆ ಕಾಂಗ್ರೆಸ್ ನಿಂದ ಬಲವಂತವಾಗಿ 3,500 ಕೋಟಿ ತೆರಿಗೆ ವಸೂಲು ಮಾಡುವುದಿಲ್ಲ ಎಂದ ಇಡಿ

New Delhi: ಚುನಾವಣೆಗಳು ನಡೆಯುತ್ತಿರುವುದರಿಂದ ಇಲಾಖೆಯು ವಸೂಲಾತಿ ಪ್ರಕ್ರಿಯೆಗಳನ್ನು ಅಥವಾ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
02:28 PM Apr 01, 2024 IST | ಸುದರ್ಶನ್
UpdateAt: 02:30 PM Apr 01, 2024 IST
new delhi  ಕಾಂಗ್ರೆಸ್ ಗೆ ಬಿಗ್ ರಿಲೀಫ್ ನೀಡಿದ ಇಡಿ   ಎಲೆಕ್ಷನ್ ಮುಗಿಯುವವರೆಗೆ  ಕಾಂಗ್ರೆಸ್ ನಿಂದ ಬಲವಂತವಾಗಿ 3 500 ಕೋಟಿ ತೆರಿಗೆ ವಸೂಲು ಮಾಡುವುದಿಲ್ಲ ಎಂದ ಇಡಿ
Advertisement

New Delhi: ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷದ 3,500 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೀಡಲಾಗಿದ್ದ ನೋಟಿಸ್‌ಗೆ ಸಂಬಂಧಿಸಿದಂತೆ ಜುಲೈ 24 ರವರೆಗೆ ಕಾಂಗ್ರೆಸ್‌ ಪಕ್ಷದ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಇಡಿ ಪರ ವಾದ ಮಂಡಿಸಿದ ಸಾಲಿಸಿಟ‌ರ್ ಜನರಲ್ ತುಷಾ‌ರ್ ಮೆಹ್ರಾ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: Viral Video : ಹುಳುಕು ಹಲ್ಲನ್ನು ಹುಡುಕಿ ಹುಡುಕಿ ಕೀಳುತ್ತೆ ಈ ಗಿಳಿ !! ಕೆಲವೇ ನಿಮಿಷಗಳಲ್ಲಿ 9 ಕೋಟಿ ವೀಕ್ಷಣೆ ಕಂಡ ವಿಡಿಯೋ!!

ಐಟಿ ಅಧಿಕಾರಿಗಳ ಪರವಾಗಿ ಹಾಜರಾದ ಮೆಹ್ರಾ ಅವರು ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠದ ಮುಂದೆ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿರುವುದರಿಂದ ಇಲಾಖೆಯು ವಸೂಲಾತಿ ಪ್ರಕ್ರಿಯೆಗಳನ್ನು ಅಥವಾ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

Advertisement

ಇದನ್ನೂ ಓದಿ: New Delhi: ಏಪ್ರಿಲ್ 1 ರಿಂದ ಆದಾಯ ತೆರಿಗೆ ಪದ್ಧತಿಯಲ್ಲಿ ಹೊಸ ಬದಲಾವಣೆ ಇಲ್ಲ : ಹಣಕಾಸು ಸಚಿವಾಲಯ

ಕಾಂಗ್ರೆಸ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಫ್ಟಿ ಅವರು ಆದಾಯ ತೆರಿಗೆ ಇಲಾಖೆಯ ಈ ಕ್ರಮವನ್ನು ಶ್ಲಾಘಿಸಿದರು.

ಮಾರ್ಚ್‌ನಲ್ಲಿ ಮತ್ತು ಅದಕ್ಕೂ ಮೊದಲು ಅನೇಕ ವರ್ಷಗಳಿಂದ ಸುಮಾರು 3,500 ಕೋಟಿ ರೂ.ಗೆ ಸಂಬಂಧಿಸಿದಂತೆ ನೋಟಿಸ್‌ಗಳನ್ನು ನೀಡಲಾಗಿದೆ. ಕಾಂಗ್ರೆಸ್, ಮಾರ್ಚ್ 29 ರಂದು ಐಟಿ ಇಲಾಖೆಯಿಂದ 1,823 ಕೋಟಿ ರೂ. ಪಾವತಿಸಬೇಕು ಎಂಬ ನೋಟಿಸ್‌ ಅನ್ನು ಸ್ವೀಕರಿಸಿದೆ ಎಂದು ಸಿಂಫ್ಟಿ ಹೇಳಿದ್ದಾರೆ.

ಮಾರ್ಚ್ 28 ರಂದು, ಅಧಿಕಾರಿಗಳು ನಾಲ್ಕು ವರ್ಷಗಳ ಅವಧಿಗೆ ತೆರಿಗೆ ಮರುಮೌಲ್ಯಮಾಪನ ಪ್ರಕ್ರಿಯೆಯ ಪ್ರಾರಂಭವನ್ನು ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು.

ಇದಕ್ಕೂ ಮೊದಲು 2014-15 80 2016-17 ರ ಮೌಲ್ಯಮಾಪನ ವರ್ಷಗಳ ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದನ್ನು ಪ್ರಶ್ನಿಸಿದ ಕಾಂಗ್ರೆಸ್ ಪಕ್ಷದ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

Advertisement
Advertisement
Advertisement