For the best experience, open
https://m.hosakannada.com
on your mobile browser.
Advertisement

Physical Contact : ಲೈಂಗಿಕ ಕ್ರಿಯೆ ನಡೆಸುವಾಗ ಎಂದಿಗೂ ಈ ತಪ್ಪನ್ನು ಮಾಡಬೇಡಿ !!

Physical Contact : ಗೊತ್ತಿಲ್ಲದೆ ಅನೇಕ ತಪ್ಪುಗಳು ನಡೆಯುತ್ತವೆ. ಅವುಗಳನ್ನು ತಿದ್ದಿಕೊಂಡರೆ ಸರಿಯಾಗುತ್ತದೆ. ಆದರೆ ಎಂದಿಗೂ ಈ ತಪ್ಪನ್ನು ಮಾಡಬೇಡಿ. ಹುಷಾರ್
02:30 PM Mar 29, 2024 IST | ಸುದರ್ಶನ್
UpdateAt: 02:32 PM Mar 29, 2024 IST
physical  contact   ಲೈಂಗಿಕ ಕ್ರಿಯೆ ನಡೆಸುವಾಗ ಎಂದಿಗೂ ಈ ತಪ್ಪನ್ನು ಮಾಡಬೇಡಿ
Advertisement

Physical Contact : ಲೈಂಗಿಕ ಕ್ರಿಯೆ ಅಥವಾ ಶಾರೀರಿಕ ಸಂಬಂಧವು ದಾಂಪತ್ಯ ಜೀವನದ ಒಂದು ಪ್ರಮುಖ ಭಾಗ. ಸಂಸಾರ ಸುಖಮಯವಾಗಿರಲು ಅಥವಾ ಹಾಳಾಗಲೂ ಇದೂ ಒಂದು ಕಾರಣ. ಸಂಭೋಗ ನಡೆಸುವ ಕೆಲವೊಮ್ಮೆ ನಮಗೆ ಗೊತ್ತಿಲ್ಲದೆ ಅನೇಕ ತಪ್ಪುಗಳು ನಡೆಯುತ್ತವೆ. ಅವುಗಳನ್ನು ತಿದ್ದಿಕೊಂಡರೆ ಸರಿಯಾಗುತ್ತದೆ. ಆದರೆ ಎಂದಿಗೂ ಈ ತಪ್ಪನ್ನು ಮಾಡಬೇಡಿ. ಹುಷಾರ್!!

Advertisement

ಇದನ್ನೂ ಓದಿ: Bengaluru: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ - ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಪ್ರಮುಖ ಆರೋಪಿ !!

ಕೆಲವೊಮ್ಮೆ ನಾವು ಮಾಡುವ ತಪ್ಪುಗಳು ಶಾರೀರಿಕ ಸಂಬಂಧ(Physical Contact ) ಬೆಳೆಸಿದಾಗ ಸಿಗುವ ಸಂಪೂರ್ಣ ಸುಖ ನಮಗೆ ಸಿಗದಂತೆ ಮಾಡುತ್ತದೆ. ಹಾಗಿದ್ರೆ ಏನು ಆ ತಪ್ಪುಗಳು, ಯಾವುದದು? ಅದನ್ನು ಹೇಗೆ ತಿದ್ದಿಕೊಳ್ಳಬೇಕು ಎಂದು ನೋಡೋಣ.

Advertisement

ಇದನ್ನೂ ಓದಿ: Bantwala: ಬಂಟ್ವಾಳ; ಚುನಾವಣಾ ಕರ್ತವ್ಯದಲ್ಲಿದ್ದ ಪಂಚಾಯತ್‌ ಕಾರ್ಯದರ್ಶಿ ನಾಪತ್ತೆ

• ಮುತ್ತು 

ತಜ್ಞರು ಸಂಭೋಗದ ವೇಳೆ ಸಂಗಾತಿಗೆ ಮುತ್ತು ಕೊಡುವಂತೆ ಸಲಹೆ ನೀಡ್ತಾರೆ. ಆದರೆ ಲೈಂಗಿಕ ಕ್ರಿಯೆಯ ವೇಳೆ ಸಂಗಾತಿಗೆ ( ಇದ್ರಲ್ಲಿ ಮಹಿಳೆಯರೂ ಸೇರಿದ್ದಾರೆ) ಮುತ್ತು ನೀಡಲು ಇಷ್ಟಪಡುವುದಿಲ್ಲ. ಲೈಂಗಿಕ ಭಂಗಿ ಇದಕ್ಕೆ ಕಾರಣವಾಗಿರಬಹುದು. ಇಲ್ಲ ಲೈಂಗಿಕ ಸುಖ ಪಡೆಯುವ ವೇಳೆ ಮುತ್ತು ಅಡ್ಡಿಯಾಗಬಹುದೆಂದು ಅವರು ಭಾವಿಸುತ್ತಾರೆ. ಆಗ ಮುತ್ತಿಗಾಗಿ ಬಲವಂತ ಮಾಡಬೇಡಿ. ಸ್ಶ ಇಚ್ಛೆಯಿಂದ ನೀಡಿದರೆ ಮಾತ್ರ ಪಡೆಯಿರಿ.

• ದೇಹದ ಅಂಗಗಳ ಬಗ್ಗೆ ಎಚ್ಚರ

ದೇಹದ ಖಾಸಗಿ ಅಂಗ ಸಂಭೋಗದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದ್ರಲ್ಲಿ ಎರಡು ಮಾತಿಲ್ಲ. ಇದರ ಪೋಷಣೆ, ಪಾಲನೆ ತುಂಬಾ ಆಗತ್ಯ. ಜೊತೆಗೆ ಸದಾ ಸ್ವಚ್ಛವಾಗಿಡುವುದೂ ಮುಖ್ಯ. ಹಾಗಂತ ದೇಹದ ಉಳಿದ ಭಾಗಗಳನ್ನು ನಿರ್ಲಕ್ಷ್ಯಿಸುವುದು ಸರಿಯಲ್ಲ.

• ಅವಸರ, ಯಾಂತ್ರಿಕ ಚಲನೆ ಬೇಡ

ಕೆಲವರು ಜಿಮ್ ಗೆ ಹೋಗಿ ವ್ಯಾಯಾಮ ಮಾಡಿದಂತೆ ಶಾರೀರಿಕ ಸಂಬಂಧ ಬೆಳೆಸ್ತಾರೆ. ಅವಸರ ಮಾಡುತ್ತಾರೆ. ಆದ್ರೆ ಇದು ಸಂಗಾತಿಗೆ ಇಷ್ಟವಾಗದೆ ಹೋಗಬಹುದು. ಅವರು ನಿಧಾನವಾದ, ಬಹು ಹಿತವೆನಿಸುವ ಸ್ಪರ್ಷ ಬಯಸಬಹುದು. ಬಹುತೇಕ ಮಂದಿ ನಿಧಾನವಾಗಿ ಶಾರೀರಿಕ ಸಂಬಂಧ ಬೆಳೆಸಲು ಇಷ್ಟಪಡ್ತಾರೆ. ಹಾಗೆ ನಿಧಾನವಾಗಿ ಅಂತಿಮ ಘಟ್ಟ ತಲುಪಲು ಬಯಸ್ತಾರೆ. ಯಾಂತ್ರಿಕವಾಗಿಯೇ ಕ್ರಿಯೆ ನಡೆಸಬೇಡಿ. ಭಂಗಿ ಬದಲಾಯಿಸಿ. ಏನಾದರೂ ಬದಲಾವಣೆಗಳನ್ನು ತನ್ನಿ.

• ಪೂರ್ತಿ ಭಾರ ಬಿಡಬೇಡಿ

ಸಂಭೋಗದ ವೇಳೇ ಪ್ರೀತಿಯಲ್ಲಿ ಭಾವೋದ್ರೇಕಕ್ಕೆ ಒಳಗಾಗೋದು ಸಹಜ. ಹಾಗಂತ ಸಂಗಾತಿ ಮೇಲಿರುವಾಗ ಪೂರ್ತಿ ಭಾರವನ್ನು ಅವರ ಮೇಲೆ ಹೇರುವುದು ಸರಿಯಲ್ಲ. ಇದ್ರಿಂದ ಅವರಿಗೆ ಉಸಿರಾಡಲು ತೊಂದರೆಯಾಗಬಹುದು. ಆದಷ್ಟು ಜಾಗರೂಕರಾಗಿ ವರ್ತಿಸಿ.

• ಯಾವಾಗಲೂ ಆಕ್ರಮಣಕಾರಿ ಆಗಬೇಡಿ

ಆಕ್ರಮಣಕಾರಿ ಸಂಗಾತಿ ಅನೇಕರಿಗೆ ಇಷ್ಟವಾಗ್ತಾರೆ. ಹಾಗಂತ ಸಂಗಾತಿ ಸಿದ್ದವಿಲ್ಲದ ವೇಳೆ ನಿಮ್ಮ ಆಕ್ರಮಣ ಪ್ರದರ್ಶನ ಸರಿಯಲ್ಲ. ಸಂಗಾತಿಯ ಕಿವಿ, ಭುಜ, ಕುತ್ತಿಗೆ ಅಥವಾ ದೇಹದ ಇನ್ನಾವುದೋ ಭಾಗವನ್ನು ಕಚ್ಚುವ ಮೊದಲು ನಿಮ್ಮ ಸಂಗಾತಿ ಆಯಕ್ಟಿವ್ ಆಗಿದ್ದಾರಾ ಎಂಬುದನ್ನು ನೋಡಿಕೊಳ್ಳಿ. ನಿಮ್ಮ ಸಂಗಾತಿ ಆಯಕ್ಟಿವ್ ಆಗಿಲ್ಲವಾದ್ರೆ ಅವರು ಭಯಗೊಳ್ಳುವ ಸಾಧ್ಯತೆಯಿರುತ್ತದೆ. ಅಲ್ಲದೆ ಅದು ಅವರಿಗೆ ಕಿರಿಕಿರಿ ಉಂಟು ಮಾಡಿ ಪ್ರತಿಭಟಿಸಲೂ ಬಹುದು. ಇದು ಜಗಳಕ್ಕೂ ಕಾರಣವಾಗಬಹುದು.

Advertisement
Advertisement
Advertisement