For the best experience, open
https://m.hosakannada.com
on your mobile browser.
Advertisement

NEET UG 2024 ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್‌ ವಿಧಾನ, ಬೇಕಾದ ದಾಖಲೆಯ ಮಾಹಿತಿ !

NEET UG 2024: ಅಡ್ಮಿಟ್‌ ಕಾರ್ಡ್ ಡೌನ್‌ಲೋಡ್‌ ಮಾಡುವ ವಿಧಾನ ಹಾಗೂ ಪರೀಕ್ಷೆಗೆ ಹಾಜರಾಗಲು ಬೇಕಾದ ದಾಖಲೆಗಳ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
08:35 AM May 01, 2024 IST | ಸುದರ್ಶನ್
UpdateAt: 09:04 AM May 01, 2024 IST
neet ug 2024 ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್‌ ವಿಧಾನ  ಬೇಕಾದ ದಾಖಲೆಯ ಮಾಹಿತಿ
Advertisement

NEET UG 2024: ನೀಟ್ ಸ್ಪರ್ಧಾತ್ಮಕ ದೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಬರುವ ಭಾನುವಾರ, ಮೇ 5 ರಂದು 2024ನೇ ಸಾಲಿನ ನೀಟ್‌ ಯುಜಿ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ನೀಟ್ ಪರೀಕ್ಷೆ ತೆಗೆದುಕೊಂಡಿರುವ ಅಭ್ಯರ್ಥಿಗಳು ಅಡ್ಮಿಟ್‌ ಕಾರ್ಡ್ ಡೌನ್‌ಲೋಡ್‌ ಮಾಡುವ ವಿಧಾನ ಹಾಗೂ ಪರೀಕ್ಷೆಗೆ ಹಾಜರಾಗಲು ಬೇಕಾದ ದಾಖಲೆಗಳ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

Advertisement

ಇದನ್ನೂ ಓದಿ:  Mangaluru: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

ವೈದ್ಯಕೀಯ, ಡೆಂಟಲ್ ಮತ್ತು ಇತರ ಜೀವಶಾಸ್ತ್ರ ಸಂಬಂಧಿ ಕೋರ್ಸ್‌ಗಳ ಪ್ರವೇಶಕ್ಕೆ ದೇಶದಾದ್ಯಂತ ನಡೆಸುವ ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್‌ ಟೆಸ್ಟ್‌ 2024 ಗೆ ಶೀಘ್ರದಲ್ಲೇ ಅಡ್ಮಿಟ್‌ ಕಾರ್ಡ್‌ ಬಿಡುಗಡೆ ಆಗಲಿದೆ. ನೀಟ್‌ ಯುಜಿ ಪರೀಕ್ಷೆಯನ್ನು ಸ್ನಾತಕ ಪದವಿ ಕೋರ್ಸ್‌ಗಳಾದ ಎಂಬಿಬಿಎಸ್‌, ಬಿಡಿಎಸ್, ಬಿಎಸ್‌ಎಂಎಸ್‌, ಬಿಯುಎಂಎಸ್, ಬಿಎಎಂಎಸ್, ಬಿಹೆಚ್‌ಎಂಎಸ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಹತಾ ಪರೀಕ್ಷೆಯಾಗಿ ನಡೆಸಲಾಗುತ್ತದೆ. ಮೇ 05 ರಂದು ಈ ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ತಪ್ಪದೇ ಎನ್‌ಟಿಎ ವೆಬ್‌ಸೈಟ್‌ನಲ್ಲಿ ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕಾಗಿದೆ.

Advertisement

ಇದನ್ನೂ ಓದಿ:  Bihar: ಅತ್ತೆಯನ್ನೇ ಪ್ರೀತಿಸಿದ ಅಳೀಮಯ್ಯ, ಅವರ ಪ್ರೀತಿ ಕಂಡು ಸ್ವತಃ ಮದುವೆ ಮಾಡಿಕೊಟ್ಟ ಮಾವ !

ನೀಟ್ ಸಂಬಂಧಿ ಪ್ರಮುಖ ದಿನಾಂಕಗಳು:

ನೀಟ್‌ ಯುಜಿ 2024 ಅಡ್ಮಿಟ್‌ ಕಾರ್ಡ್‌ ಬಿಡುಗಡೆ ದಿನಾಂಕ: ಇವತ್ತು ಅಥವಾ ನಾಳೆ. (May 1st or 2nd)

ನೀಟ್‌ ಯುಜಿ 2024 ಪರೀಕ್ಷೆ ದಿನಾಂಕ: 05-05-2024

ಪರೀಕ್ಷೆ ಅವಧಿ : 3 ಗಂಟೆ 20 ನಿಮಿಷ

ನೀಟ್ ಯುಜಿ 2024 ಪರೀಕ್ಷೆ ಸಮಯ : ಮಧ್ಯಾಹ್ನ 2 ಗಂಟೆಯಿಂದ ಸಂಜೆ 05-20 ರವರೆಗೆ.

ನೀಟ್ ಯುಜಿ 2024 ಕೀ ಉತ್ತರ ಬಿಡುಗಡೆ : 14-06-2024

ನೀಟ್ ಯುಜಿ 2024 ಫಲಿತಾಂಶ ಬಿಡುಗಡೆ ದಿನಾಂಕ : 14-06-2024

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಮೇ 05, 2024 ರಂದು ದೇಶದಾದ್ಯಂತ 571 ನಗರಗಳಲ್ಲಿ ನೀಟ್‌ ಯುಜಿ ಪರೀಕ್ಷೆಯನ್ನು ನಡೆಸಲಿದೆ. ಈಗಾಗಲೇ ಅಭ್ಯರ್ಥಿಗಳಿಗೆ ತಮ್ಮ ಪರೀಕ್ಷೆ ಸಿಟಿಯ ಕುರಿತು ಮಾಹಿತಿ ನೀಡಿದೆ. ಸದ್ಯದಲ್ಲೇ ಅಡ್ಮಿಟ್‌ ಕಾರ್ಡ್‌ ಅನ್ನು ಬಿಡುಗಡೆ ಮಾಡಲಿದೆ. ನೀಟ್‌ ಯುಜಿ ನಂತರ ಮುಂದೇನು? ಯಾವೆಲ್ಲ ಆಯ್ಕೆಗಳಿವೆ? ಎಂದು ತಿಳಿಯಲು ಬಯಸುವವರು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಓದಿರಿ.

ನೀಟ್‌ ಯುಜಿ 2024 ಪ್ರವೇಶ ಪತ್ರ ಡೌನ್‌ಲೋಡ್‌ ಮಾಡುವುದು ಹೇಗೆ?

- ಎನ್‌ಟಿಎ ನೀಟ್‌ ಯುಜಿ ವೆಬ್‌ಸೈಟ್‌ https://exams.nta.ac.in/NEET/ ಗೆ ಭೇಟಿ ನೀಡಿ. ಅಲ್ಲಿ

'Latest News >> NEET UG 2024 Call Letter' ಎಂಬ ಆಯ್ಕೆಗಳನ್ನು ಸೆಲೆಕ್ಟ್‌ ಮಾಡಿ ಕ್ಲಿಕ್ ಮಾಡಿ.

- ಅಲ್ಲಿ ತೆರೆದ ಪೇಜ್‌ನಲ್ಲಿ ಅಪ್ಲಿಕೇಶನ್‌ ನಂಬರ್, ಪಾಸ್‌ ವರ್ಡ್‌, ಸೆಕ್ಯೂರಿಟಿ ಪಿನ್ ನಮೂದಿಸಿ ಲಾಗಿನ್‌ ಆಗಿ.

- ಪ್ರವೇಶ ಪತ್ರ ಪ್ರದರ್ಶನ ಆದ ನಂತರ. ಡೌನ್‌ ಲೋಡ್‌ ಮಾಡಿ ಪ್ರಿಂಟ್‌ ತೆಗೆದುಕೊಂಡು ಇಟ್ಟುಕೊಳ್ಳಿ.

ನೀಟ್‌ ಯುಜಿ ಪರೀಕ್ಷೆಯನ್ನು ಬರೆಯಲಿರುವ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರದ ಜತೆಗೆ, ಇತರೆ ಯಾವುದಾದರೊಂದು ಅಧಿಕೃತ ಗುರುತಿನ ಚೀಟಿ ತೆಗೆದುಕೊಂಡು ಹಾಜರಾಗುವುದು ಅಗತ್ಯ. ನೀಟ್ 2024 ಪರೀಕ್ಷೆಯನ್ನು ರಾಜ್ಯದಲ್ಲಿ 14 ಕೇಂದ್ರಗಳಲ್ಲಿ ದೇಶದಾದ್ಯಂತ 13 ಭಾಷೆಗಳಲ್ಲಿ ನಡೆಸಲಾಗುತ್ತದೆ.

Advertisement
Advertisement
Advertisement