ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

NEET 2024: ಒತ್ತಡಕ್ಕೆ ಮಣಿದ NTA, 1563 ವಿದ್ಯಾರ್ಥಿಗಳ ಗ್ರೇಸ್ ಮಾರ್ಕ್ ರದ್ದು- ಮರುಪರೀಕ್ಷೆ ಜೂನ್ 23ಕ್ಕೆ!

NEET UG 2024 - 1563 ಅಭ್ಯರ್ಥಿಗಳಿಗೆ ನೀಡಿದ ಗ್ರೇಸ್ ಅಂಕಗಳನ್ನು ರದ್ದುಗೊಳಿಸಲಾಗುವುದು, ಅವರಿಗೆ ಮರುಪರೀಕ್ಷೆ ಆಯ್ಕೆಯನ್ನು ನೀಡಲಾಗುವುದು ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
12:34 PM Jun 13, 2024 IST | ಸುದರ್ಶನ್
UpdateAt: 05:28 PM Jun 13, 2024 IST
Advertisement

NEET UG 2024: 1563 ಅಭ್ಯರ್ಥಿಗಳಿಗೆ ನೀಡಿದ ಗ್ರೇಸ್ ಅಂಕಗಳನ್ನು ರದ್ದುಗೊಳಿಸಲಾಗುವುದು, ಅವರಿಗೆ ಮರುಪರೀಕ್ಷೆ ಆಯ್ಕೆಯನ್ನು ನೀಡಲಾಗುವುದು ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

Advertisement

Actor Darshan Case: ನಟ ದರ್ಶನ್‌ ವಿರುದ್ಧ ರೌಡಿ ಶೀಟರ್‌ ತೆರೆಯುವ ಸಾಧ್ಯತೆ?

NEET 2024 ವಿವಾದಕ್ಕೆ ಸಂಬಂಧಿಸಿದಂತೆ, ಇಂದು ಗುರುವಾರ (ಜೂನ್ 13) ಕೇಂದ್ರವು ಸುಪ್ರೀಂ ಕೋರ್ಟ್‌ಗೆ 1563 ವಿದ್ಯಾರ್ಥಿಗಳಿಗೆ ನೀಡಲಾದ ಗ್ರೇಸ್ ಅಂಕಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ಈ 1563 ಅಭ್ಯರ್ಥಿಗಳು ತಮ್ಮ ನೈಜ ಅಂಕಗಳನ್ನು (ಗ್ರೇಸ್ ಮಾರ್ಕ್ ಇಲ್ಲದೆ) ತಿಳಿಸಲಾಗುವುದು ಮತ್ತು ಮರು ಪರೀಕ್ಷೆಗೆ ಹಾಜರಾಗಲು ಅಥವಾ ಹಾಜರಾಗದೆ ಇರಲು ಆಯ್ಕೆಯನ್ನು ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಆ ವಿದ್ಯಾರ್ಥಿಗಳು ಮರು ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸದಿದ್ದರೆ, ಮೇ 5 ರಂದು ನಡೆದ ಪರೀಕ್ಷೆಯ ಆಧಾರದ ಮೇಲೆ ಅವರ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ತಿಳಿಸಿದೆ.

Advertisement

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ವಕೀಲರಾದ ಕನು ಅಗರ್ವಾಲ್ ಅವರು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟಿನ ರಜಾಕಾಲದ ಪೀಠಕ್ಕೆ ಈ ವಿಷಯವನ್ನು ತಿಳಿಸಿದ್ದಾರೆ. ಜೂನ್ 12 ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರಚಿಸಿದ್ದ ಸಮಿತಿಯು 'ವಿದ್ಯಾರ್ಥಿಗಳ ಭಯವನ್ನು ನಿವಾರಿಸಲು' ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಸಮಯದ ನಷ್ಟದ ಆಧಾರದ ಮೇಲೆ 1563 ವಿದ್ಯಾರ್ಥಿಗಳಿಗೆ ಪರಿಹಾರದ ಅಂಕಗಳನ್ನು ನೀಡುವುದು "ವಿಕೃತ ಪರಿಸ್ಥಿತಿ" ಯನ್ನು ಉಂಟುಮಾಡಿದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ ಎಂದು ಅಗರ್ವಾಲ್ ಹೇಳಿದ್ದಾರೆ ಏಕೆಂದರೆ, ಗ್ರೇಸ್ ಅಂಕಗಳನ್ನು ವಿದ್ಯಾರ್ಥಿಗಳು ಪ್ರಯತ್ನಿಸದ ಪ್ರಶ್ನೆಗಳಿಗೆ ಮಾತ್ರ ಸೀಮಿತಗೊಳಿಸಬೇಕಾಗಿತ್ತು. ಆದರೆ ಹಾಗೆ ಮಾಡಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ ಸಮಿತಿಯು 1563 ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ರದ್ದುಗೊಳಿಸಲು ಶಿಫಾರಸು ಮಾಡುವುದು ಸೂಕ್ತ ಎಂದು ತೀರ್ಮಾನಿಸಿದೆ. ಜತೆಗೆ ಅವರ ನಿಜವಾದ ಅಂಕಗಳನ್ನು (ಗ್ರೇಸ್ ಮಾರ್ಕ್ ರಹಿತ) ಅವರಿಗೆ ತಿಳಿಸಲಾಗುವುದು ಎಂದು ಸಮಿತಿ ತೀರ್ಮಾನಿಸಿತು ಎಲ್ಲಿದೆ.

ಮರುಪರೀಕ್ಷೆ ಜೂನ್ 23ಕ್ಕೆ

ಎನ್‌ಟಿಎ ಪರ ಹಿರಿಯ ವಕೀಲ ನರೇಶ್ ಕೌಶಿಕ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯವು ದಾಖಲಿಸಿಕೊಂಡಿದ್ದು, ಮರು ಪರೀಕ್ಷೆಯ ದಿನ ಇಂದೇ ತಿಳಿದಿರುವ ಸಂಭವವಿದೆ. ಮತ್ತು ಜೂನ್ 23 ರಂದು ನಡೆಯಲಿದೆ. ಮರು ಪರೀಕ್ಷೆಯ ಫಲಿತಾಂಶವನ್ನು ಜೂನ್ 30 ರ ಮೊದಲು ಪ್ರಕಟಿಸಲಾಗುವುದು. ಜುಲೈ 6 ರಂದು ನಿಗದಿಪಡಿಸಲಾದ ಕೌನ್ಸೆಲಿಂಗ್ ಪ್ರಾರಂಭವಾಗಬಹುದು ಎಂದು ನ್ಯಾಷನಲ್ ಟೆಸ್ಟಿಂಗ್ ಅಕಾಡೆಮಿ ತಿಳಿಸಿದೆ.
ಗ್ರೇಸ್ ಮಾರ್ಕಿನ ಸಂಬಂಧ ಪಟ್ಟ ನಿರ್ಧಾರವನ್ನು ಇದೀಗ ಹೆಚ್ಚು ಕಮ್ಮಿ ತೆಗೆದುಕೊಂಡಳಾಗಿದ್ದು ಪ್ರಶ್ನೆ ಪತ್ರಿಕೆ ಸೋರಿಕೆಯ ನಿರ್ಧಾರ ಬಾಕಿ ಉಳಿದಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, NEET-UG, 2024 ರ ಫಲಿತಾಂಶಗಳನ್ನು ವ್ಯಾಪಕ ಅಕ್ರಮಗಳಿಗಾಗಿ ಪ್ರಶ್ನಿಸಿ ಸಲ್ಲಿಸಲಾದ 3 ಅರ್ಜಿಗಳನ್ನು ನ್ಯಾಯಾಲಯವು ಪರಿಗಣಿಸಿದೆ. ಮತ್ತು ನಷ್ಟದ ಆಧಾರದ ಮೇಲೆ 1500 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಿಂದ ಪರೀಕ್ಷೆಯಲ್ಲಿ ಗ್ರೇಸ್ ಅಂಕಗಳನ್ನು ನೀಡುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಆಗ್ರಹಕ್ಕೆ ತತ್ತರಗೊಂಡ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಎಲ್ಲಾ 1563 ವಿದ್ಯಾರ್ಥಿಗಳ ಗ್ರೇಸ್ ಅಂಕಗಳನ್ನು ರದ್ದು ಮಾಡಿದೆ. ಆದರೆ ಫಸ್ಟ್ ಪತ್ರಿಕೆ ಸೋರಿಕೆ ಸಂಬಂಧ ಪಟ್ಟ ಹಲವು ಅಂಕಿಗಳು ಇನ್ನೂ ವಿಚಾರಣೆಯ ಹಂತದಲ್ಲಿವೆ.

Dengue: ರಾಜ್ಯದಲ್ಲಿ ಡೆಂಗ್ಯೂಗೆ ಮೊದಲ ಬಲಿ

Related News

Advertisement
Advertisement