For the best experience, open
https://m.hosakannada.com
on your mobile browser.
Advertisement

UGC-NEET 2024: ಯುಜಿಸಿ NET ಮತ್ತು CSIR NET ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ

UGC-NEET 2024: ನೀಟ್‌ ಪೇಪರ್‌ ಸೋರಿಕೆ ಹಗರಣದ ನಂತರ ಯುಜಿಸಿ ನೆಟ್‌ ಪರೀಕ್ಷೆಗೆ ಹೊಸ ದಿನಾಂಕ ಪ್ರಕಟಗೊಂಡಿದೆ.
09:55 AM Jun 29, 2024 IST | ಸುದರ್ಶನ್
UpdateAt: 09:57 AM Jun 29, 2024 IST
ugc neet 2024  ಯುಜಿಸಿ net ಮತ್ತು csir net ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ
Advertisement

UGC-NEET 2024: ನೀಟ್‌ ಪೇಪರ್‌ ಸೋರಿಕೆ ಹಗರಣದ ನಂತರ ಯುಜಿಸಿ ನೆಟ್‌ ಪರೀಕ್ಷೆಗೆ ಹೊಸ ದಿನಾಂಕ ಪ್ರಕಟಗೊಂಡಿದೆ. ಆಗಸ್ಟ್‌ 21ರಿಂದ ಸೆಪ್ಟೆಂಬರ್‌ 04 ರ ನಡುವೆ ಪರೀಕ್ಷೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇಂದು ಪ್ರಕಟ ಮಾಡಿದೆ.

Advertisement

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) CSIR UGC NET ಪರೀಕ್ಷೆ ಮತ್ತು UGC NET ಪರೀಕ್ಷೆಗೆ ಹೊಸ ದಿನಾಂಕಗಳನ್ನು ಪ್ರಕಟಿಸಿದ್ದು, CSIR UGC NET ಪರೀಕ್ಷೆಯನ್ನು 25 ರಿಂದ 27 ಜುಲೈ 2024 ರವರೆಗೆ ನಡೆಸಲಾಗುವುದು. UGC NET ಮರು ಪರೀಕ್ಷೆಯನ್ನು 21ನೇ ಆಗಸ್ಟ್ ಮತ್ತು 4ನೇ ಸೆಪ್ಟೆಂಬರ್ 2024 ರಂದು ನಡೆಸಲಾಗುವುದು. ಪರೀಕ್ಷೆಯ ಮೊದಲು ಪ್ರವೇಶ ಕಾರ್ಡ್‌ಗಳನ್ನು ಮರು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

UGC NET ಪರೀಕ್ಷೆಯಲ್ಲಿನ ಅಕ್ರಮಗಳಿಂದಾಗಿ, NTA ಈ ಪರೀಕ್ಷೆಯನ್ನು ರದ್ದುಗೊಳಿಸಿದ್ದು, SIR UGC NET ಪರೀಕ್ಷೆಯನ್ನು 25 ರಿಂದ 27 ಜೂನ್ 2024 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು, ಇದನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ಈಗ NTA ಈ ಪರೀಕ್ಷೆಗಳನ್ನು ಮರು ನಡೆಸಲು ಹೊಸ ದಿನಾಂಕಗಳನ್ನು ಪ್ರಕಟಿಸಿದೆ.

Advertisement

Advertisement
Advertisement
Advertisement