Jai Shri Ram Chant: ಪಾಕ್ ಟೀಂ ಎದುರು 'ಜೈ ಶ್ರೀರಾಮ್ ಘೋಷಣೆ' - ಮತ್ತೆ ಹರಿಹಾಯ್ದ ಉದಯನಿಧಿ ಸ್ಟಾಲಿನ್
Jai Shri Ram Chant : ನಿನ್ನೆ ಶನಿವಾರ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ (IND vs PAK)ನಡುವಿನ ವಿಶ್ವಕಪ್ ಪಂದ್ಯ ನಡೆದಿದ್ದು, ಬಾಬರ್ ಅಜಂ ಪಡೆಯನ್ನು ಸುಲಭವಾಗಿ ಸೋಲಸಿದ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ. ಇದೀಗ ಪಂದ್ಯದ ವೇಳೆ ಅಹಿತಕರ ಘಟನೆ ಒಂದು ನಡೆದಿದೆ.
ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ವೇಳೆ ಪಾಕಿಸ್ತಾನದ ಆಟಗಾರ ಮುಹಮ್ಮದ್ ರಿಜ್ವಾನ್ ಡ್ರೆಸ್ಸಿಂಗ್ ರೂಮ್ ಗೆ ತೆರಳುತ್ತಿದ್ದಾಗ ಪ್ರೇಕ್ಷಕರು “ಜೈ ಶ್ರೀ ರಾಮ್” ಘೋಷಣೆಗಳನ್ನು (Jai Shri Ram Chant ) ಕೂಗುವ ವೀಡಿಯೊಗಳು ವೈರಲ್ ಆಗಿದೆ. ವಿಡಿಯೋದಲ್ಲಿ, ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ರಿಜ್ವಾನ್ 69 ಎಸೆತಗಳಲ್ಲಿ 49 ರನ್ ಗಳಿಸಿ ಔಟಾದರು. ನಂತರ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುತ್ತಿದ್ದಾಗ ಪ್ರೇಕ್ಷಕರು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುವುದನ್ನು ವೀಡಿಯೊದಲ್ಲಿ ಕಾಣಬಹುದು.
ಆದರೆ “ಜೈ ಶ್ರೀ ರಾಮ್” ಕೂಗುವ ಕುರಿತು ಎಕ್ಸ್ ಜಾಲತಾಣದಲ್ಲಿ (ಟ್ವಿಟ್ಟರ್) ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸಚಿವ, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, ‘’ಅಭಿಮಾನಿಗಳ ವರ್ತನೆ ಸ್ವೀಕಾರಾರ್ಹವಲ್ಲ” ಎಂದಿದ್ದಾರೆ. “ಭಾರತವು ತನ್ನ ಕ್ರೀಡಾ ಮನೋಭಾವ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಆಟಗಾರರಿಗೆ ನೀಡಿದ ಆತಿಥ್ಯ ಸ್ವೀಕಾರಾರ್ಹವಲ್ಲ. ಕ್ರೀಡೆಗಳು ಏಕೀಕರಣಗೊಳ್ಳುವಂತೆ ಮಾಡಬೇಕು. ದೇಶಗಳ ನಡುವೆ ಬಲ, ನಿಜವಾದ ಸಹೋದರತ್ವವನ್ನು ಬೆಳೆಸಬೇಕು, ಆದರೆ ದ್ವೇಷವನ್ನು ಹರಡುವ ಸಾಧನವಾಗಿ ಬಳಸುವುದು ಖಂಡನೀಯ” ಎಂದಿದ್ದಾರೆ.
ಸದ್ಯ ಪಂದ್ಯದ ಅಂತ್ಯದಲ್ಲಿ ಪಾಕಿಸ್ತಾನವು 42.5 ಓವರ್‌ಗಳಲ್ಲಿ 155-2 ರಿಂದ 191 ಕ್ಕೆ ಆಲೌಟ್ ಆಗುವ ಮೂಲಕ ಅದ್ಭುತ ಬ್ಯಾಟಿಂಗ್ ಕುಸಿತದ ಬೆನ್ನಲ್ಲೇ ಏಳು ವಿಕೆಟ್‌ಗಳ ಸೋಲನ್ನು ಅನುಭವಿಸಿತು.
Pàkistan batsman Muhammad Rizwan was returning to the pavilion after getting out.
He had to face 'Jai Shri Ram' chants from the crowd of Narendra Módi stadium during #IndiaVsPakistan WC today.
Thoughts? pic.twitter.com/IvbpFnE8fh
— Amock (@Politics_2022_) October 14, 2023
ಇದನ್ನೂ ಓದಿ: ಸದ್ಯದಲ್ಲೇ ಎಲ್ಲಾ ಶಾಲೆಗಳಿಗೂ ಬರಲಿದೆ ಈ ಹೊಸ ರೂಲ್ಸ್- ಕೇಂದ್ರದಿಂದ ಮಹತ್ವದ ನಿರ್ಧಾರ !!