For the best experience, open
https://m.hosakannada.com
on your mobile browser.
Advertisement

Nandini Products: ನಂದಿನಿಯ ಕ್ಷೀರೇತರ ಎನರ್ಜಿ ಡ್ರಿಂಕ್ಸ್ ಮಾರುಕಟ್ಟೆಗೆ ಬರಲು ಸಿದ್ದ

Nandini Product:ಮೊದಲ ಬಾರಿಗೆ ಕೆಎಂಎಫ್ ಎನರ್ಜಿ ಡ್ರಿಂಕ್ಸ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ಧವಾಗಿದೆ.
09:21 AM May 24, 2024 IST | Praveen Chennavara
UpdateAt: 09:21 AM May 24, 2024 IST
nandini products  ನಂದಿನಿಯ ಕ್ಷೀರೇತರ ಎನರ್ಜಿ ಡ್ರಿಂಕ್ಸ್ ಮಾರುಕಟ್ಟೆಗೆ ಬರಲು ಸಿದ್ದ
Advertisement

Nandini Product:ಮೊದಲ ಬಾರಿಗೆ ಕೆಎಂಎಫ್ ಎನರ್ಜಿ ಡ್ರಿಂಕ್ಸ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ಧವಾಗಿದೆ. ಪ್ರಾಯೋಗಿಕವಾಗಿ ಇದನ್ನು ಬೆಂಗಳೂರು ಮಾರುಕಟ್ಟೆಗೆ ಮೊದಲು ಪರಿಚಯಿಸಲು ನಿರ್ಧರಿಸಿದೆ. ಇದು ನಂದಿನಿಯ ಕ್ಷೀರೇತರ ಉತ್ಪನ್ನವಾಗಿದೆ.

Advertisement

ಹಾಲು ಮಾರುಕಟ್ಟೆಯಲ್ಲಿ ಘಟಾನುಘಟಿ ಬ್ರಾಂಡುಗಳಿಗೆ ಪೈಪೋಟಿ ಕೊಟ್ಟು ತನ್ನದೇ ಆದ ಹೆಸರನ್ನು 'ನಂದಿನಿ' ಗಳಿಸಿಕೊಂಡಿದೆ.

ಇದೀಗ ಕೆಎಂಎಫ್ ನಂದಿನಿ ಎನರ್ಜಿ ಡ್ರಿಂಕ್‌ಗಳನ್ನು ಪರಿಚಯಿಸಲು ಮುಂದಾಗಿದೆ. 200 ML ಬಾಟಲಿಯನ್ನು ಮಾರುಕಟ್ಟೆಗೆ ತರುತ್ತಿದೆ. ಇದಕ್ಕೆ 'ನಂದಿನಿ ಸ್ವಾಶ್' ಹಾಗೂ 'ನಂದಿನಿ ಬೌನ್ಸ್' ಎನ್ನುವ ಹೆಸರಿಡಲಾಗಿದೆ.

Advertisement

ಇದನ್ನು ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಡಿಸ್ಪ್ಲೇ ಮಾಡಲಾಗುತ್ತಿದ್ದು, ಆರಂಭಿಕವಾಗಿ ಬೆಂಗಳೂರು ಮಾರುಕಟ್ಟೆಗೆ ಬಿಡಲಿದೆ. ಇದರ ಬೆಲೆ 10 ರೂಪಾಯಿಯಂತೆ ನಿಗದಿ ಪಡಿಸಲಾಗಿದೆ. ಇದು ಇತರೆ ಕಾರ್ಪೋರೇಟ್ ಬ್ರಾಂಡ್ ಗಿಂತ ಆರೋಗ್ಯಕರ ತಂಪು ಪಾನೀಯ ಎಂದು ನಂದಿನಿ ಹೇಳಿಕೊಂಡಿದೆ.

Advertisement
Advertisement
Advertisement