NABARD: ರೈತರಿಗೆ ನೇರ ಸಾಲ ಇಲ್ಲ
NABARD: ಹೈನುಗಾರಿಕೆ ಮಾಡುವ ಉದ್ಯಮಿಗಳು ಅಥವಾ ರೈತರಿಗೆ ನೇರ ಸಾಲ ನೀಡಲಾಗುತ್ತದೆ ಎಂಬ ವರದಿಯನ್ನು ತಳ್ಳಿ ಹಾಕಿರುವ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್), ಹೈನೋದ್ಯಮದ ರೈತರಿಗೆ ನೇರವಾಗಿ ಸಾಲ ಸೌಲಭ್ಯ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: H D Revanna: SIT ಕೇಳಿದ ನೂರು ಪ್ರಶ್ನೆಗೆ ಎಚ್ ಡಿ ರೇವಣ್ಣ ಕೊಟ್ರು ಒಂದೇ ಒಂದು ಆನ್ಸರ್ - ಏನದು ?
"ನಬಾರ್ಡ್ ಒಂದು ಅಗ್ರ ಅಭಿವೃದ್ಧಿ ಹಣಕಾಸು ಸಂಸ್ಥೆಯಾಗಿ ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ವಿವಿಧ ಹಣಕಾಸು ಸಂಸ್ಥೆಗಳು ಮತ್ತು ಸಹಕಾರ ಸಂಸ್ಥೆಗಳಿಗೆ ಆರ್ಥಿಕ ಸಹಾಯ ಮತ್ತು ಬೆಂಬಲ ನೀಡಲಿದೆ. ಆದರೆ, ರೈತರಿಗೆ ನೇರವಾಗಿ ಸಾಲ ನೀಡುವುದಿಲ್ಲ,'' ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: SSLC Result: ಎಸ್ಸೆಸ್ಸೆಲ್ಸಿ ಫಲಿತಾಂಶ ಮೇ 9 ಕ್ಕೆ ಪ್ರಕಟ
"ಸಂಸ್ಥೆಯ ಎಲ್ಲ ಪಾಲುದಾರರು, ಅದರಲ್ಲಿಯೂ ರೈತರು ಹಾಗೂ ಗ್ರಾಮೀಣ ಉದ್ದಿಮೆದಾರರು ಬಹಳ ಎಚ್ಚರ ವಹಿಸಬೇಕು. ಇಂತಹ ಸುಳ್ಳು ಸುದ್ದಿಗಳನ್ನು ನಂಬಬಾರದು. ಸುಳ್ಳು ಸುದ್ದಿಗಳು ಆರ್ಥಿಕ ಸಂಕಷ್ಟ ಹಾಗೂ ಅಪಾರ್ಥಗಳಿಗೆ ದಾರಿಯಾಗಬಹುದು. ನಿಖರವಾದ ಮಾಹಿತಿಯನ್ನು ನಬಾರ್ಡ್ ಅಧಿಕೃತ ವೆಬ್‌ಸೈಟ್ www.nabard.org ಮೂಲಕ ಪಡೆದುಕೊಳ್ಳಬಹುದು. ಹೆಚ್ಚಿನ ಸ್ಪಷ್ಟಿಕರಣ ಅಥವಾ ವಿಚಾರಣೆಗಾಗಿ ನೇರವಾಗಿ ನಬಾರ್ಡ್ ಹತ್ತಿರದ ಕಚೇರಿಗೆ ಭೇಟಿ ನೀಡಬಹುದು,'' ಎಂದು ತಿಳಿಸಿದೆ.