For the best experience, open
https://m.hosakannada.com
on your mobile browser.
Advertisement

Mosquito control: ಸೊಳ್ಳೆ ಕಾಟದಿಂದ ಪರ್ಮನೆಂಟ್ ಆಗಿ ಬಚಾವ್ ಆಗ್ಬೇಕಾ? ಹಾಗಿದ್ರೆ ಮನೆ ಹತ್ತಿರ ಈ ಗಿಡ ನೆಡಿ ಸಾಕು !!

Mosquito Control: ಸೊಳ್ಳೆಯನ್ನು ನಿಯಂತ್ರಿಸುವುದು(Mosquito control) ಹೇಗೆ ಎಂಬ ಯೋಚನೆ ಹಲವರಿಗೆ. ಹಾಗಿದ್ರೆ ನಾವ್ ಹೇಳ್ತೀವಿ ಸಿಂಪಲ್ ಟಿಪ್ಸ್!!
10:38 AM May 09, 2024 IST | ಸುದರ್ಶನ್
UpdateAt: 10:42 AM May 09, 2024 IST
mosquito control  ಸೊಳ್ಳೆ ಕಾಟದಿಂದ ಪರ್ಮನೆಂಟ್ ಆಗಿ ಬಚಾವ್ ಆಗ್ಬೇಕಾ  ಹಾಗಿದ್ರೆ ಮನೆ ಹತ್ತಿರ ಈ ಗಿಡ ನೆಡಿ ಸಾಕು
Advertisement

Mosquito control: ಜನರಿಗೆ ಯಾವ ಕಾಟದಿಂದ ತಪ್ಪಿಸಿಕೊಂಡರೂ ಈ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಬಿಡಿ. ಹೈಟೆಕ್ ಆಗಿರುವವರು ಹೈಟೆಕ್ ಎಚ್ಚರಿಕೆಗಳ ಮೂಲಕ ಹೇಗೋ ಬಚಾವ್ ಆಗಬಹುದು. ಆದರೆ ಸಾಮಾನ್ಯ ಜನರಿಗೆ ಸೊಳ್ಳೆಗಳು ಕಾಟ ಕೊಡುತ್ತಲೇ ಇರುತ್ತವೆ. ಸಂಜೆಯಾಗುತ್ತಿದ್ದಂತೆ ಸಂಗೀತ ಹಾಡುತ್ತಾ ಮನೆಗೆ ನುಗ್ಗುತ್ತವೆ. ಹೇಗಪ್ಪಾ ಇವುಗಳಿಂದ ಪಾರಾಗೋದು, ಸೊಳ್ಳೆಯನ್ನು ನಿಯಂತ್ರಿಸುವುದು(Mosquito control) ಹೇಗೆ ಎಂಬ ಯೋಚನೆ ಹಲವರಿಗೆ. ಹಾಗಿದ್ರೆ ನಾವ್ ಹೇಳ್ತೀವಿ ಸಿಂಪಲ್ ಟಿಪ್ಸ್!!

Advertisement

ಇದನ್ನೂ ಓದಿ: Millionaires: ಅಬ್ಬಬ್ಬಾ ವಿಶ್ವದಲ್ಲೇ ನಂ.1 ಕೋಟ್ಯಧಿಪತಿಗಳು ನಮ್ಮ ರಾಜ್ಯದಲ್ಲೇ ಇದ್ದಾರೆ ಅಂದ್ರೆ ನೀವ್ 100% ನಂಬಲೇ ಬೇಕು!

ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಇಂದು ಹಲವು ಮಾರ್ಗಗಳಿವೆ. ಸೊಳ್ಳೆ ಬತ್ತಿ, ಗುಡ್ ನೈಲ್, ಕಾಯಿಲ್, ಆಲ್ ಔಟ್ ಸೇರಿ ಕೆಲವು ಬಗೆಯ ಕ್ರೀಮ್ ಗಳು ಕೂಡ ಇವೆ. ಆದರೆ ಇದೆಲ್ಲವೂ ತಾತ್ಕಾಲಿಕ ಪರಿಹಾರ. ಆದರೆ ನಾವು ಪರ್ಮನೆಂಟ್ ಪರಿಹಾರ ನೀಡುತ್ತೇವೆ. ಅಂದರೆ ಸೊಳ್ಳೆ ಕಾಟದಿಂದ ಪರ್ಮನೆಂಟ್ ಆಗಿ ಬಚಾವ್ ಆಗ್ಬೇಕಾ? ಹಾಗಿದ್ರೆ ಮನೆ ಹತ್ತಿರ ಈ ಗಿಡಗಳನ್ನು ನೆಡಿ ಸಾಕು. ಹೌದು, ಸೊಳ್ಳೆಗಳಿಂದ ಬಚಾವ್ ಆಗಲು ಮನೆ ಸುತ್ತ ಕೆಲವು ಗಿಡಗಳನ್ನು ನೆಟ್ಟರೆ ಸಾಕು. ನೀವು ಆರಾಮಾಗಿ ಇರಬಹುದು. ಹಾಗಿದ್ರೆ ಯಾವುವು ಆ ಗಿಡಗಳು ??

Advertisement

ಇದನ್ನೂ ಓದಿ: K.Vasanth Bangera: ಹುಟ್ಟೂರಿಗೆ ಬಂದ ಮಾಜಿ ಶಾಸಕ ಕೆ.ವಸಂತ ಬಂಗೇರ ಪಾರ್ಥಿವ ಶರೀರ

• ತುಳಸಿ-ಪುದೀನ: ಸೊಳ್ಳೆಗಳನ್ನು ಮನೆಯಿಂದ ದೂರವಿರಿಸಲು ತುಳಸಿ ಮತ್ತು ಪುದೀನ ಗಿಡಗಳು ತುಂಬಾ ಸಹಾಯ ಮಾಡುತ್ತದೆ. ತುಳಸಿ ಎಲೆಗಳ ತೀವ್ರವಾದ ಪರಿಮಳವು ಸೊಳ್ಳೆಗಳು ಮತ್ತು ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಪುದೀನ ಗಿಡ ಕೂಡ ಸೊಳ್ಳೆಗಳು, ನೊಣಗಳು ಮತ್ತು ಇರುವೆಗಳನ್ನು ಸಹಾ ಮನೆಯಿಂದ ದೂರವಿರಿಸುತ್ತದೆ.

• ಚೆಂಡು ಹೂವಿನ ಗಿಡ : ಎಲ್ಲಾ ಕಾಲದಲ್ಲೂ ಅರಳುವ ಹೂವು ಇದು. ಇದರ ಸುವಾಸನೆಯು ಸೊಳ್ಳೆಗಳಿಗೆ ತೊಂದರೆ ಉಂಟುಮಾಡುತ್ತದೆ. ಈ ಕಾರಣದಿಂದ ಸೊಳ್ಳೆಗಳು ಈ ಸಸ್ಯದಿಂದ ದೂರವಿರುತ್ತದೆ. ಈ ಸಸಿಯನ್ನು ನೆಟ್ಟರೆ ಹೂ ಅರಳಿ ನಿಂತಾಗ ಮನೆಯ ಸೌಂದರ್ಯವು ಹೆಚ್ಚುತ್ತದೆ. ಸೊಳ್ಳೆ ಕಾಟದಿಂದ ಮುಕ್ತಿ ಕೂಡಾ ಸಿಗುತ್ತದೆ.

• ಲ್ಯಾವೆಂಡರ್ ಸಸ್ಯ: ಈ ಸಸ್ಯದ ಎಲೆಗಳಲ್ಲಿ ಕಂಡುಬರುವ ಎಸೆನ್ಶಿಯಲ್ ಆಯಿಲ್ ಕಾರಣದಿಂದ ಈ ಸಸ್ಯದಿಂದ ಸುಗಂಧ ಹೊರ ಹೊಮ್ಮುತ್ತದೆ. ಈ ಸುಗಂಧದ ಕಾರಣದಿಂದ ಸೊಳ್ಳೆಗಳು ಈ ಸಸಿ ಸುತ್ತ ಬರುವುದಿಲ್ಲ. ಈ ಸಸ್ಯಕ್ಕೆ ಹೆಚ್ಚಿನ ನೀರು ಕೂಡ ಅಗತ್ಯವಿಲ್ಲ ಮತ್ತು ಅದು ಹೆಚ್ಚು ಕಾಲ ಹಾಳಾಗುವುದಿಲ್ಲ.

Advertisement
Advertisement
Advertisement