For the best experience, open
https://m.hosakannada.com
on your mobile browser.
Advertisement

Uttarakhand: ಉತ್ತರ ಖಂಡದ ನಾನಕಮಟ್ಟಾ ಗುರುದ್ವಾರಕ್ಕೆ ನುಗ್ಗಿ ಕರಸೇವಾ ಪ್ರಮುಖ್ ಅವರನ್ನು ಗುಂಡು ಹಾರಿಸಿ ಹತ್ಯೆಗೈದ ದುಷ್ಕರ್ಮಿಗಳು

Uttarakhand: ಉತ್ತರಾಖಂಡ್‌ನ ನಾನಕಮಟ್ಟಾ ಗುರುದ್ವಾರಕ್ಕೆ ನುಗ್ಗಿ ಕರಸೇವಾ ಪ್ರಮುಖ್ ಬಾಬಾ ತಾರ್ಸೆಮ್ ಸಿಂಗ್ ಅವರನ್ನು ಗುಂಡು ಹಾರಿಸಿದ್ದಾರೆ
06:53 AM Mar 29, 2024 IST | ಸುದರ್ಶನ್
UpdateAt: 07:35 AM Mar 29, 2024 IST
uttarakhand  ಉತ್ತರ ಖಂಡದ ನಾನಕಮಟ್ಟಾ ಗುರುದ್ವಾರಕ್ಕೆ ನುಗ್ಗಿ ಕರಸೇವಾ ಪ್ರಮುಖ್ ಅವರನ್ನು ಗುಂಡು ಹಾರಿಸಿ ಹತ್ಯೆಗೈದ ದುಷ್ಕರ್ಮಿಗಳು
Advertisement

ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಗುರುವಾರ ಬೆಳ್ಳಂ ಬೆಳಗ್ಗೆ 6:15-6:30ರ ಸುಮಾರಿಗೆ ಉತ್ತರಾಖಂಡ್‌ನ ನಾನಕಮಟ್ಟಾ ಗುರುದ್ವಾರಕ್ಕೆ ನುಗ್ಗಿ ಕರಸೇವಾ ಪ್ರಮುಖ್ ಬಾಬಾ ತಾರ್ಸೆಮ್ ಸಿಂಗ್ ಅವರನ್ನು ಗುಂಡು ಹಾರಿಸಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಸಾವನಪ್ಪಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾ‌ರ್ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: Arvind Kejriwal: ಸಿಎಂ ಸ್ಥಾನದಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ವಜಾಗೊಳಿಸುವಂತೆ ಸಲ್ಲಿಸಲಾಗಿದ್ದ ಪಿಐಎಲ್ ವಜಾ ಗೊಳಿಸಿದ ದೆಹಲಿ ಹೈಕೋರ್ಟ್

ಕುರ್ಚಿಯ ಮೇಲೆ ಕುಳಿತಿದ್ದ ಸಿಂಗ್ ಮೇಲೆ ಎರಡು ಸುತ್ತು ಗುಂಡು ಹಾರಿಸಲಾಗಿದೆ. ಮೊದಲ ಗುಂಡು ಮುಂಭಾಗದಿಂದ ಮತ್ತು ಇನ್ನೊಂದು ಹಿಂಭಾಗದಿಂದ ಗುಂಡು ಹಾರಿಸಲಾಗಿದೆ. ಎರಡನೆಯ ಗುಂಡು ತಾಗುವಷ್ಟರಲ್ಲಿ ಸಿ ನೆಲದ ಮೇಲೆ ಬಿದ್ದರು ಸ್ಥಳೀಯ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: HSRP: ನೀತಿ ಸಂಹಿತೆ ಎಫೆಕ್ಟ್- HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳ ಚಲಾವಣೆ ನಿರ್ಭಂಧ !!

"ಇದು ಅತ್ಯಂತ ಗಂಭೀರವಾದ ವಿಷಯವಾಗಿದ್ದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಈಗಾಗಲೇ ಎಸ್‌ಎಸ್‌ಪಿ, ಡಿಐಜಿ ಕುಮಾನ್ ಅವರು ಅಪರಾಧದ ಸ್ಥಳವನ್ನು ಪರಿಶೀಲಿಸುತ್ತಿದ್ದು, ಘಟನೆ ಕುರಿತು ಸ್ಥಳೀಯರೊಂದಿಗೆ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.

ಘಟನೆಯ ತನಿಖೆಗಾಗಿ, ಪೊಲೀಸ್ ಪ್ರಧಾನ ಕಛೇರಿಯು ಎಂಟು ಎಸ್‌ಐಟಿ ತಂಡಗಳನ್ನು ರಚಿಸಲಾಗಿದೆ - ಇದು ಎಸ್‌ಟಿಎಫ್ ಮತ್ತು ಸ್ಥಳೀಯ ಪೊಲೀಸರನ್ನು ಒಳಗೊಂಡಿರುತ್ತದೆ' ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.

Advertisement
Advertisement
Advertisement