ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Master Anand: ಆ ನೋವಿಗಿಂತ ಈಗ ಅನುಭವಿಸುತ್ತಿರುವ ನೋವೇ ವಾಸಿ;ಮಗನ ನೆನೆದು ಕಣ್ಣೀರಿಟ್ಟ ಮಾಸ್ಟರ್ ಆನಂದ್!!

01:09 PM Jan 09, 2024 IST | ಅಶ್ವಿನಿ ಹೆಬ್ಬಾರ್
UpdateAt: 01:10 PM Jan 09, 2024 IST
Advertisement

Master Anand: ಕಿರುತೆರೆಯ ಬೇಡಿಕೆಯ ನಿರೂಪಕ ಮಾಸ್ಟರ್ ಆನಂದ್(Master Anand) ಈಗ ಕಿರುತೆರೆ ಬೇಡಿಕೆಯ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಒಂದೆಡೆ ಮಗಳು ವಂಶಿಕಾ ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಪಡೆಯುತ್ತಿದ್ದಾರೆ.ಮತ್ತೊಂದೆಡೆ, ಕೃಷ್ಣ ಚೈತನ್ಯಾ ಕಶ್ಯಪಾ ಗುರುಕುಲದಲ್ಲಿದ್ದಾರೆ(Gurukula).ಮಗನನ್ನು ಗುರುಕುಲದಲ್ಲಿ ಬಿಟ್ಟು ಬಂದ ಬಳಿಕ ಮಗನನ್ನು ಬಿಟ್ಟಿರುವುದು ಎಷ್ಟು ಕಷ್ಟ ಎಂಬುದನ್ನು ಕಂಡುಕೊಂಡಿರುವ ಆನಂದ್ (Master Anand Son)ಮಗನ ನೆನೆದು ಕಂಬನಿ ಮಿಡಿದಿದ್ದಾರೆ.

Advertisement

'ನನ್ನ ಮಗನನ್ನು ಗುರುಕೂಲದಲ್ಲಿ ಓದಿಸುತ್ತಿರುವುದಕ್ಕೆ ನನಗೆ ಸಿಗುತ್ತಿರುವುದು ಬರೀ ನೋವು.ತಿಂಗಳಿಗೆ ಒಮ್ಮೆ ಭೇಟಿ ಮಾಡಬೇಕು, 15 ದಿನಕ್ಕೆ ಒಮ್ಮೆ ಫೋನ್ ಮಾಡಬೇಕು. ಯಾಕೆ ಹೀಗೆ? ಒಂದು ಸುರಕ್ಷಿತವಾದ ಪ್ರಪಂಚದ ಕಡೆ ಅವನನ್ನು ಬಿಟ್ಟು ಬಂದಿದ್ದೀನಿ.. ಮಗನಿಗೆ ವಸ್ತುಗಳ ಬೆಲೆ ಗೊತ್ತಾಗಬೇಕು ಎಂದು ಹಾಸ್ಟಲ್ಗೆ ಹಾಕಿರುವೆ. ಆತನನ್ನು ಭೇಟಿ ಮಾಡಲು ಹೋದಾಗ ಅವನಿಗೂ ಬೇಸರವಾಗುತ್ತೆ. ನಾವು ಕಣ್ಣೀರು ಹಾಕುತ್ತೀವಿ. ಇದಕ್ಕೆ ಪ್ರತಿಯಾಗಿ ನನಗೆ ಒಳ್ಳೆ ಫಲ ಸಿಗುತ್ತದೆ ಅನ್ನೋ ಖುಷಿ ಇದೆ' ಎಂದು ಕನ್ನಡ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾಸ್ತರ್ ಆನಂದ್ ಮಾತನಾಡಿದ್ದಾರೆ.

ಇದನ್ನೂ ಓದಿ: IMDB ಬಿಡುಗಡೆ ಮಾಡಿದ 2024ರ ಬಹುನಿರೀಕ್ಷಿತ ಭಾರತೀಯ ಚಿತ್ರಗಳ ಪಟ್ಟಿ!!!

Advertisement

'ಯಾರ ಜೊತೆಗೂ ಮಗನ ಬಗ್ಗೆ ಚರ್ಚೆ ಮಾಡುವುದಿಲ್ಲ. ಪೇರೆಂಟಿಂಗ್ ಎಂದು ಬಂದಾಗ ಎಲ್ಲವೂ ನಮಗೆ ಅಗ್ನಿ ಪರೀಕ್ಷೆಯಾಗಿರುತ್ತದೆ. ಈಗ ನಾವು ಕೆಲವೊಂದು ನೋವು ಸ್ವೀಕರಿಸಬೇಕಾಗುತ್ತದೆ. ಇಂದು ನಾನು ಹೊಡೆಯಬಹುದು ಅಲ್ಲಿ ಮೇಷ್ಟ್ರು ಹೊಡೆಯಬಹುದು....ಆದರೆ ಅಲ್ಲಿಗೆ ಕಳುಹಿಸದೇ ಇಲ್ಲಿ ಬಿಟ್ಟು ಯಾರೊಂದಿಗೋ ಪೋಲಿ ಬಿದ್ದ ಜಗಳ ಆದ ಮೇಲೆ ಕಿರಿಕ್ ಮಾಡಿಕೊಂಡು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದಾಗ ಆಗುವ ಆ ನೋವಿಗಿಂತ ಈಗ ಪಡುತ್ತಿರುವ ನೋವು ವಾಸಿ' ಎಂದು ಆನಂದ್ ಹೇಳಿದ್ದಾರೆ.

'ಮಗನನ್ನು ಹಾಸ್ಟಲ್ಗೆ ಬಿಟ್ಟಿರುವ ನೋವು ನಮಗೂ ಇದೆ ಅವನಿಗೂ ಇದೆ. ಇದರ ಫಲ ನನಗೆ ಈಗಲೇ ಗೊತ್ತಾಗುತ್ತಿದೆ. ಈ ಹಿಂದೆ ಕೆಲಸ ಮುಗಿಸಿಕೊಂಡು ನಾನು ಮನೆಗೆ ಬಂದಾಗ ಮೊಬೈಲ್ ನೋಡಿಕೊಂಡು ಹಾಯ್ ಅಂದ್ರೆ ಹಾಯ್ ನನ್ನ ಬಗ್ಗೆ ಕೇರ್ ಇಲ್ಲದಂತೆ ಇರುತ್ತಿದ್ದ. ಆದರೆ ಗುರುಕೂಲಕ್ಕೆ ಸೇರಿಸಿದ ಬಳಿಕ ನನ್ನನ್ನು ನೋಡಿ ಖುಷಿಯಿಂದ ಓಡಿ ಬಂದು ತಬ್ಬಿಕೊಳ್ಳುತ್ತಾನೆ. ನನ್ನ ಕೈಯಲ್ಲಿದ್ದ ಬ್ಯಾಗ್ ಮತ್ತು ಲಗೇಜ್ ಹಿಡಿದುಕೊಂಡು ಬರ ಮಾಡಿಕೊಳ್ಳುತ್ತಾನೆ. ಸಹಾಯಕ್ಕೆ ಅವನ ಫ್ರೆಂಡ್ಸ್ ಬಂದರು ಕೂಡ ನಾನೇ ತೆಗೆದುಕೊಂಡು ಹೋಗುತ್ತೀನಿ ಎನ್ನುತ್ತಾನೆ ಎಂದು ಆನಂದ್ ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement
Advertisement