Hibiscus Oil: ಮನೆಯಲ್ಲೇ ದಾಸವಾಳದ ಎಣ್ಣೆ ತಯಾರಿಸಿ: ಕೂದಲನ್ನು ಪುನರ್ಯೌವನಗೊಳಿಸಿ!
Hibiscus Oil: ಕೂದಲ ಸೌಂದರ್ಯ ಕಾಪಾಡುವುದಕ್ಕೆ ನಾನಾ ರೀತಿಯ ಸೋಪು, ಕಂಡೀಷನರ್ ಬಳಸುವ ಬದಲು ನೈಸರ್ಗಿಕವಾಗಿ ತಯಾರು ಮಾಡಿದ ಎಣ್ಣೆಯನ್ನು ಬಳಸುವ ಮೂಲಕ ಕೂದಲಿನ ಆರೋಗ್ಯವನ್ನು ಕಾಪಾಡಬಹುದಾಗಿದೆ. ಅದಕ್ಕಾಗಿ ದಾಸವಾಳದ ಹೂವು ಕೂದಲಿನ ಆರೈಕೆಗೆ ಹೆಸರುವಾಸಿ ಆಗಿದೆ. ಹೌದು, ದಾಸವಾಳದ ಎಣ್ಣೆಯನ್ನೂ (Hibiscus Oil) ನೀವು ಮನೆಯಲ್ಲೇ ತಯಾರಿಸಿ ಕೂದಲಿಗೆ ಮಸಾಜ್ ಮಾಡಬಹುದಾಗಿದೆ.
ಮುಖ್ಯವಾಗಿ ದಾಸವಾಳವು ವಿಟಮಿನ್ ಸಿ, ಅಮೈನೋ ಆಮ್ಲಗಳು ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ, ಆದ್ದರಿಂದ ದಾಸವಾಳದ ಎಣ್ಣೆ ಬರೀ ನೆತ್ತಿಯನ್ನು ಮಾತ್ರ ಪುನರ್ಯೌವನಗೊಳಿಸುವುದಿಲ್ಲ, ಇದು ಕೂದಲನ್ನು ಪೋಷಿಸುತ್ತದೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಿಂದ ಉದ್ದ ಮತ್ತು ಹೊಳೆಯುವ ಕೂದಲನ್ನು ಪಡೆಯಲು ಸಾಧ್ಯವಿದೆ.
ಇದಕ್ಕಾಗಿ ನಿಮ್ಮ ಹೂವಿನ ತೋಟದಲ್ಲಿರುವ ಕೆಲವು ಬೆರಳು ಏಣಿಕೆಯ ದಾಸವಾಳ ಇದ್ದರೆ ಸಾಕು. ಈ ದಾಸವಾಳದ ಎಣ್ಣೆಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಈ ಎಣ್ಣೆಯನ್ನು ಹೇಗೆ ತಯಾರಿಸಬಹುದು ಎಂಬುದನ್ನು ಇಲ್ಲಿ ನೋಡೋಣ.
ಈ ಎಣ್ಣೆ ತಯಾರಿಸಲು ಪ್ರಮುಖವಾಗಿ ದಾಸವಾಳದ ಹೂವು ಬೇಕು. 9-10 ದಾಸವಾಳದ ಹೂವು ತೆಗೆದು ಅದನ್ನು ಚೆನ್ನಾಗಿ ತೊಳೆಯಿರಿ. ಬಳಿಕ ಅವುಗಳನ್ನು ಚೆನ್ನಾಗಿ ಒಣಗಿಸಿ.
ಜೊತೆಗೆ ದಾಸವಾಳದ ಎಣ್ಣೆ ತಯಾರಿಸಲು ತೆಂಗಿನ ಎಣ್ಣೆ ಬೇಕು. ಹೀಗಾಗಿ ಸುಮಾರು 10 ಟೇಬಲ್ ಸ್ಪೂನ್ ಆಗುವಷ್ಟು ತೆಂಗಿನ ಎಣ್ಣೆ ಇದ್ದರೆ ಸಾಕಾಗುತ್ತದೆ. ಇದರ ಜೊತೆ ಆರೋಗ್ಯವೃದ್ಧಿಯ ಗುಣಗಳಿರುವ ಮೆಂತ್ಯ ಬೇಕಾಗುತ್ತದೆ. ಅದಕ್ಕಾಗಿ ಸುಮಾರು 10-15 ಮೆಂತ್ಯೆ ಕಾಳುಗಳನ್ನು ಇಲ್ಲಿ ಬಳಸಿ.
ಎಣ್ಣೆ ತಯಾರಿಸಲು ಒಣಗಿಸಿಟ್ಟ ದಾಸವಾಳದ ಹೂವುಗಳನ್ನು 2 ಟೇಬಲ್ ಸ್ಪೂನ್ ತೆಂಗಿನ ಎಣ್ಣೆ ಬಳಸಿ ಚೆನ್ನಾಗಿ ಅರೆದು ಪೇಸ್ಟ್ ತಯಾರಿಸಿ.
ನಂತರ ಪ್ಯಾನ್ ಬಿಸಿ ಮಾಡಿ ಅದಕ್ಕೆ 8 ಟೇಬಲ್ ಸ್ಫೂನ್ ತೆಂಗಿನ ಎಣ್ಣೆ ಹಾಕಿ. ನಂತರ ಅದಕ್ಕೆ ನುಣ್ಣಗೆ ಮಾಡಿದ ದಾಸವಾಳ ಪೇಸ್ಟ್ ನ್ನು ಹಾಕಿ ನಂತರ ಅದಕ್ಕೆ ಮೆಂತೆ ಕಾಳು ಸೇರಿಸಿ. ಈ ಮಿಶ್ರಣವನ್ನು ಕುದಿಸಿದ ನಂತರ ತಣ್ಣಗಾಗಲು ಬಿಡಿ. ಇದಾದ ಬಳಿಕ ಎಣ್ಣೆಯನ್ನು ಸೋಸಿ ಈಗ ನಿಮ್ಮ ದಾಸವಾಳದ ಎಣ್ಣೆ ರೆಡಿಯಾಗಿದೆ.
ಸೋಸಿದ ನಂತರ ಎಣ್ಣೆ ಬಾಳಿಕೆ ಬರಲು ಒಂದು ಬಾಟಲಿಯಲ್ಲಿ ಈ ಎಣ್ಣೆ ಸಂಗ್ರಹಿಸಿ ಇಟ್ಟುಕೊಳ್ಳಿ. ಈ ಎಣ್ಣೆಯಿಂದ ವಾರಕ್ಕೆ ಎರಡು ಸಲ ನಿಮ್ಮ ತಲೆಕೂದಲನ್ನು ಮಸಾಜ್ ಮಾಡಿ. ಆಮೇಲೆ ನಿಮ್ಮ ತಲೆಕೂದಲಿನಲ್ಲಿ ಆಗುವ ಬದಲಾವಣೆಯನ್ನು ಗಮನಿಸಿ.
Bigg Boss Kannada 11: ಕುತೂಹಲ ಮೂಡಿಸಿದ ಕನ್ನಡ ಬಿಗ್ಬಾಸ್ 11ರ ಸ್ಪರ್ಧಿಗಳ ಹೆಸರುಗಳು ಇದೇ ನೋಡಿ!