Madhyapradesh: ಯುವತಿಯ ಬಾಯಿಗೆ ಖಾರದ ಪುಡಿ ತುಂಬಿ, ತುಟಿಗೆ ಫೆವಿಕ್ವಿಕ್ ಅಂಟಿಸಿ 1 ತಿಂಗಳು ಅತ್ಯಾಚಾರ - ಕಾಮುಕ ಆಯನ್ ಪಠಾನ್ ಮನೆ ಧ್ವಂಸ !!
Madhyapradesh: ರಾಜ್ಯವನ್ನೇ ಬೆಚ್ಚಿಬೀಳಿಸಿದ ಹುಬ್ಬಳ್ಳಿ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಮಾಸುವ ಮುನ್ನವೇ ಇದೀಗ ನೆರೆ ರಾಜ್ಯ ಮಧ್ಯಪ್ರದೇಶ(Madhya Pradesh) ದಲ್ಲಿ ಮತ್ತೊಂದು ಅಘಾತಕಾರಿ ನಡೆದಿದೆ. 23ರ ಯುವತಿಗೆ ಪ್ರೀತಿಯ ನಾಟಕವಾಡಿ, ಕೊಠಡಿಯಲ್ಲಿ ಕೂಡಿ ಹಾಕಿ ಬರೋಬ್ಬರಿ ಒಂದು ತಿಂಗಳ ಕಾಲ ಅತ್ಯಾಚಾರ ಎಸಗಿದ ಭೀಕರ ಘಟನೆ ನಡೆದಿದೆ.
ಹೌದು, ಮಧ್ಯಪ್ರದೇಶದ ಗುನಾ(Guna) ಜಿಲ್ಲೆಯಲ್ಲಿ ಆಯನ್ ಪಠಾಣ್(Ayan Pathan) ಎಂಬಾತ 23ರ ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿ, ರೂಮಿಗೆ ಕರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿ, ಬಾಯಿಗೆ ಖಾರ ಪುಡಿ ತುರಕಿದ್ದಾನೆ. ಬಳಿಕ ತುಟಿಗಳನ್ನು ಫೆವಿಕ್ವಿಕ್ ಮೂಲಕ ಅಂಟಿಸಿ ಒಂದು ತಿಂಗಳು ಅತ್ಯಾಚಾರ ಎಸಗಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆ ದಾಖಲಿಸಿದ್ದರೆ, ಆರೋಪಿ ಆಯನ್ ಪಠಾಣ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಇದೀಗ ಈ ಬೆನ್ನಲ್ಲೇ ಅತ್ಯಾಚಾರಿ ಪಾಪಿಗಳಿಗೆ ಬುದ್ದಿಕಲಿಸುವ ನಿಟ್ಟಿನಲ್ಲಿ ಅತ್ಯಾಚಾರ ಎಸಗಿದ ಆರೋಪಿ ಆಯನ್ ಪಠಾನ್ ಮನೆಯನ್ನು ಮಧ್ಯಪ್ರದೇಶ ಸರ್ಕಾರ ಧ್ವಂಸಗೊಳಿಸಿದೆ.
ಏನಿದು ಪ್ರಕರಣ?
ಆರೋಪಿ ಆಯನ್ ಪಠಾಣ್ ಯುವತಿಯ ಮನೆಯ ಪಕ್ಕದಲ್ಲೇ ಇದ್ದು ಪ್ರೀತಿಯ ನಾಟಕವಾಡಿದ್ದಾನೆ. ಮದುವೆಯಾಗುವುದಾಗಿ ನಂಬಿಸಿದ್ದಾನೆ. ಯುವತಿ ಪೋಷಕರು ಈ ಕುರಿತು ಮಗಳಿಗೆ ಎಚ್ಚರಿಕೆ ನೀಡಿದ್ದರು. ಇಷ್ಟೇ ಅಲ್ಲ ಆಯನ್ ಪಠಾಣ್ ಕಾಟ ವಿಪರೀತವಾಗುತ್ತಿದ್ದಂತೆ ಬೇರೆ ಗ್ರಾಮಕ್ಕೆ ತೆರಳಿದ್ದರು. ಆದರೆ ಪಠಾಣ್ ಬಣ್ಣದ ಮಾತಿಗೆ ಮರುಳಾದ ಯುವತಿ ಮತ್ತೆ ಗುನಾಗೆ ಆಗಮಿಸಿದ್ದಳು. ಮರಳಿ ಊರಿಗೆ ಬಂದ ಬಳಿಕ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಡುವಂತೆ ಒತ್ತಾಯಿಸಿದ್ದಾನೆ. ತಾನು ಮೋಸಹೋಗಿದ್ದೇನೆ ಎಂಬುದು ಅರಿವಾಗುತ್ತಿದ್ದಂತೆ ಯುವತಿ ವಿರೋಧಿಸಲು ಆರಂಭಿಸಿದ್ದಾಳೆ. ಆದರೆ ಕೊಠಡಿಯಲ್ಲಿ ಕೂಡಿ ಹಾಕದಿ ಆಯನ್ ಪಠಾಣ್, ಆಕೆಯ ಬಾಯಿಗೆ ಖಾರ ಪುಡಿ ಹಾಕಿ ತುಟಿಗಳನ್ನು ಗಮ್ ಹಾಕಿ ಅಂಟಿಸಿ ಅತ್ಯಾಚಾರ ಎಸಗಿದ್ದಾನೆ.
ಸದ್ಯ ಆಯನ್ ಪಠಾಣ್ ಬಂಧನವಾಗುತ್ತಿದ್ದಂತೆ ಮಧ್ಯಪ್ರದೇಶ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿತ್ತು. ಅಯನ್ ಪಠಾಣ್ ಇತಿಹಾಸ ತೆಗೆಯುವಂತೆ ಸೂಚನೆ ನೀಡಲಾಗಿತ್ತು. ಈ ವೇಳೆ ಈತನ ಮನೆ, ವೃತ್ತಿ ಸೇರಿದಂತೆ ಎಲ್ಲಾ ಮಾಹಿತಿ ಕಲೆ ಹಾಕಿ ಸ್ಥಳೀಯ ಜಿಲ್ಲಾಡಳಿತ ಪರಿಶೀಲನೆ ನಡೆಸಿತ್ತು. ಈ ವೇಳೆ ಅಯನ್ ಪಠಾಣ್ ಮನೆ ಅಕ್ರಮ ಅನ್ನೋದು ಪತ್ತೆಯಾಗಿದೆ. ಇಷ್ಟೇ ಅಲ್ಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರ ಜಾಗ ಕಬಳಿಸಲಾಗಿದೆ ಅನ್ನೋದು ಬಹಿರಂಗವಾಗಿದೆ. ಸ್ಥಳೀಯ ಜಿಲ್ಲಾಡಳಿತ ಪೊಲೀಸ್ ಜೊತೆಗೆ ಅಯನ್ ಪಠಾಣ್ ಮನೆಗೆ ಆಗಮಿಸಿದೆ. ಬುಲ್ಡೋಜರ್ ಜೊತೆ ಆಗಮಿಸಿ ಮನೆಯನ್ನು ಧ್ವಂಸ ಮಾಡಿದೆ. ಈ ಮೂಲಕ ಮಧ್ಯಪ್ರದೇಶ ಸರ್ಕಾರ(Madhyapradesh Government)ಲವ್ ಜಿಹಾದ್ ಹಾಗೂ ಅತ್ಯಾಚಾರ ಪ್ರಕರಣ ಕೈಹಾಕುವ ಕಿಡಿಗೇಡಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದೆ.
ಇದನ್ನೂ ಓದಿ: Karnataka Bank: ಕರ್ನಾಟಕ ಬ್ಯಾಂಕ್ ಎಟಿಎಂ ನಲ್ಲಿ ಅಗ್ನಿ ಅವಘಡ; ಲಕ್ಷ ಲಕ್ಷ ಹಣ ಬೆಂಕಿಗಾಹುತಿ