For the best experience, open
https://m.hosakannada.com
on your mobile browser.
Advertisement

Lok Sabha Election: ಜಗದೀಶ್ ಶೆಟ್ಟರ್'ಗೆ MP ಟಿಕೆಟ್ !! ಸ್ಪರ್ಧೆ ಕಾಂಗ್ರೆಸ್ ನಿಂದಲೋ ಇಲ್ಲಾ.. ಬಿಜೆಪಿ ಯಿಂದಲೊ?!

04:16 PM Dec 17, 2023 IST | ಅಶ್ವಿನಿ ಹೆಬ್ಬಾರ್
UpdateAt: 04:16 PM Dec 17, 2023 IST
lok sabha election  ಜಗದೀಶ್ ಶೆಟ್ಟರ್ ಗೆ mp ಟಿಕೆಟ್    ಸ್ಪರ್ಧೆ ಕಾಂಗ್ರೆಸ್ ನಿಂದಲೋ ಇಲ್ಲಾ    ಬಿಜೆಪಿ ಯಿಂದಲೊ
Advertisement

Lok Sabha Election: ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಜನರ ಮನವೊಲಿಕೆಗೆ ನಾನಾ ಕಸರತ್ತು ನಡೆಸುತ್ತಿವೆ. ಇದೀಗ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ (Jagadish Shettar) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಟಿಕೆಟ್ ಆಫರ್ ನೀಡಿದ್ದಾರೆ ಎಂಬ ಸುದ್ಧಿ ಭಾರೀ ಚರ್ಚೆಗೆ ಕಾರಣವಾಗಿದೆ.

Advertisement

ಜಗದೀಶ್ ಶೆಟ್ಟರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶೆಟ್ಟರ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಸದ್ಯ ಈ ವಿಚಾರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲಿಯೂ ಲೋಕ ಸಭಾ ಚುನಾವಣೆ ಸಮೀಪಸುತ್ತಿರುವಂತೆಯೇ ಸಿದ್ದರಾಮಯ್ಯನವರು ಜಗದೀಶ್‌ ಶೆಟ್ಟರ್‌ಗೆ ಎಂಪಿ ಟಿಕೆಟ್ ಆಫರ್ ನೀಡಿದ್ರಾ?? ಅದು ಕೂಡ ಪ್ರಹ್ಲಾದ್ ಜೋಶಿ ವಿರುದ್ಧ ಸ್ಪರ್ಧಿಸೋದು ಗ್ಯಾರಂಟೀಯಾ ?? ಎಂಬೆಲ್ಲ ಪ್ರಶ್ನೆಗಳು ಎಲ್ಲರಿಗೂ ಮೂಡುವುದು ಸಹಜ. ಆದ್ರೆ, ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೆಟ್ಟರ್ ಅವರನ್ನು ಭೇಟಿ ಮಾಡಿದ ಅಸಲಿ ವಿಷಯವೇ ಬೇರೆ ಎನ್ನಲಾಗಿದೆ.

ಧಾರವಾಡ ಲೋಕಸಭೆಯಿಂದ ಸ್ಪರ್ಧಿಸಲು ಜಗದೀಶ್ ಶೆಟ್ಟರ್ ಅವರ ಅಭಿಪ್ರಾಯ ಸ್ವೀಕರಿಸುತ್ತಿದ್ದೇವೆ. ಶೆಟ್ಟರ್ ಅವರನ್ನು ಕೂಡ ಟಿಕೆಟ್ ಆಕಾಂಕ್ಷಿ ಎಂದು ಭಾವಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯನವರು (Siddaramaiah)ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಸಿದ್ಧರಾಮಯ್ಯನವರು ಹೀಗೆ ಹೇಳುತ್ತಿರುವಾಗಲೇ ಶೆಟ್ಟರ್ ಅವರು ನಾನಂತೂ ಟಿಕೇಟ್ ಆಕಾಂಕ್ಷಿಯಲ್ಲಾ ಎಂದು ನಗುತ್ತಲೇ ಹೇಳಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಜಗದೀಶ್ ಶೆಟ್ಟರ್ ನಿವಾಸದ ಭೇಟಿಗೆ ಕಾರಣ ಹೇಳಿಕೊಂಡಿದ್ದು, ಈ ಭೇಟಿಗೆ ವಿಶೇಷವಾದ ಅರ್ಥವನ್ನು ಕಲ್ಪಿಸುವ ಅಗತ್ಯವಿಲ್ಲ. ನಾನು ಈ ಹಿಂದೆ ಕೂಡ. ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ್ದೇನೆ. ಅವರು ಬಿಜೆಪಿಯಲ್ಲಿದ್ದಾಗ ಕೂಡ ನಾನೂ ಅವರ ಮನೆಗೆ ಬಂದಿದ್ದೆ. ಸದ್ಯ ಧಾರವಾಡ ಜಿಲ್ಲಾ ಪ್ರವಾಸದಲ್ಲಿರುವ ಹಿನ್ನೆಲೆ ಉಪಹಾರಕ್ಕೆ ಬನ್ನಿ ಅಂತ ಶೆಟ್ಟರ್ ಕರೆದಿದ್ದರು. ಇಂದು ಶೆಟ್ಟರ್ ಅವರ ಹುಟ್ಟುಹಬ್ಬ ಅಂತ ತಿಳಿದು, ಶುಭಾಶಯ ಕೋರಿದ ಹಾಗೂ ಆಗುತ್ತೆ, ಅದೇ ರೀತಿ ತಿಂಡಿ ಕೂಡ ತಿಂದಂತಾಗುತ್ತೆ ಅಂತ ಬಂದೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿಕೊಂಡಿದ್ದಾರೆ.

Advertisement

Advertisement
Advertisement
Advertisement