For the best experience, open
https://m.hosakannada.com
on your mobile browser.
Advertisement

Women Health: ಮಹಿಳೆಯರೇ ಕೈ ಕಾಲುಗಳ ಕೂದಲು ತೆಗೆಯಲು ರೇಜರ್ ಬಳಸುತ್ತೀರಾ? ಈ ಸುದ್ದಿ ನಿಮಗಾಗಿ

05:21 PM Dec 29, 2023 IST | ಹೊಸ ಕನ್ನಡ
UpdateAt: 05:24 PM Dec 29, 2023 IST
women health  ಮಹಿಳೆಯರೇ ಕೈ ಕಾಲುಗಳ ಕೂದಲು ತೆಗೆಯಲು ರೇಜರ್ ಬಳಸುತ್ತೀರಾ  ಈ ಸುದ್ದಿ ನಿಮಗಾಗಿ
Advertisement

Women Health: ಹೆಚ್ಚಿನ ಯುವತಿಯರು ಮಹಿಳೆಯರು ತಮ್ಮ ಕೈಕಾಲುಗಳಲ್ಲಿರುವ ಕೂದಲುಗಳನ್ನು ನಿವಾರಿಸಿಕೊಳ್ಳಲು ಶೇವಿಂಗ್ ಟೆಕ್ನಿಕ್‌ಗಳನ್ನು ಬಳಸುತ್ತಾರೆ. ಬ್ಯೂಟಿಪಾರ್ಲರ್‌ಗಳಲ್ಲಿ ವ್ಯಾಕ್ಸಿಂಗ್‌ಗಾಗಿ ನೂರಾರು ರೂಪಾಯಿಗಳನ್ನು ಸುರಿಯುವುದಕ್ಕಿಂತ ನಮಗೆ ನಾವೇ ಬೇಕಾದ ಸಮಯದಲ್ಲಿ ಶೇವ್ ಮಾಡಿಕೊಂಡು ಕೂದಲುಗಳನ್ನು ನಿವಾರಿಸಿಕೊಳ್ಳಬಹುದು ಎಂಬುದು ಹೆಚ್ಚಿನವರ ಲೆಕ್ಕಾಚಾರವಾಗಿರುತ್ತದೆ. ಆದರೆ ನೀವು ಶೇವ್ ಮಾಡಲು ಬಳಸುವ ರೇಜರ್‌ ಕುರಿತಾದ ಆಘಾತಕಾರಿ ಸತ್ಯವನ್ನು ಸೌಂದರ್ಯತಜ್ಞರೇ ಸ್ವತಃ ಹಂಚಿಕೊಂಡಿದ್ದಾರೆ.

Advertisement

ಶೇವಿಂಗ್ ಮಾಡಿ ನೀವು ಕೂದಲನ್ನು ನಿವಾರಿಸಿಕೊಳ್ಳುತ್ತಿದ್ದೀರಿ ಎಂದಾದಲ್ಲಿ ಇದು ಪ್ರಯೋಜನಕ್ಕಿಂತ ಹೆಚ್ಚು ಹಾನಿಯನ್ನೇ ಉಂಟುಮಾಡುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಒಂದು ಅಧ್ಯಯನದ ಪ್ರಕಾರ ಕೆಲವು ಮಹಿಳೆಯರು ವಾರಕ್ಕೆ ಎರಡು ಮೂರು ದಿನಗಳಿಗೊಮ್ಮೆ ಕೂದಲು ನಿವಾರಿಸಲು ರೇಜರ್‌ಗಳನ್ನು ಬಳಸುತ್ತಾರೆ ಆದರೆ ನೀವು ಅನುಸರಿಸುವ ಶೇವಿಂಗ್ ವಿಧಾನ ತುಂಬಾ ಕೆಟ್ಟದ್ದು ಎಂದು ಬೋಂಡಿ ಬಾಡಿ ಸಂಸ್ಥಾಪಕ ಲಂಡನ್ ಮೂಲದ ಸೌಂದರ್ಯ ತಜ್ಞರಾದ ಟ್ರಿಶ್ ಕೌಲ್ಟನ್ ಎಚ್ಚರಿಸಿದ್ದಾರೆ.

ರೇಜರ್ ಬಳಸುವಾಗ ಹೆಚ್ಚು ಎಚ್ಚರಿಕೆ ವಹಿಸಬೇಕು:
ನೀವು ಬಳಸುವ ರೇಜರ್‌ಗಳು ಬ್ಯಾಕ್ಟೀರಿಯಾಗಳನ್ನು ನಿಮ್ಮ ದೇಹಕ್ಕೆ ಸುಲಭವಾಗಿ ಒಯ್ಯುವ ಮಾರಕ ವಿಧಾನ ಎಂದೆನಿಸಿದ್ದು, ನೀವು ಶೇವ್ ಮಾಡುವ ಸಮಯದಲ್ಲಿ ಚರ್ಮದ ಮೇಲೆ ಏನಾದರೂ ಗಾಯವಾದಾಗ ಈ ಗಾಯದ ಮೂಲದ ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸಬಹುದು ಅಂತೆಯೇ ಉರಿಯೂತ ಹಾಗೂ ಚರ್ಮದ ವಿವಿಧ ಸೋಂಕುಗಳಿಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

Advertisement

ಶೇವ್ ಮಾಡುವ ಮೂಲಕ ನೀವು ಕೂದಲಿನಿಂದ ಸಂಪೂರ್ಣವಾಗಿ ಮುಕ್ತಿಪಡೆದುಕೊಳ್ಳುವುದಿಲ್ಲ ಎಂದು ಹೇಳುವ ಟ್ರಿಶ್, ನಿಮ್ಮ ತ್ವಚೆಯ ಮಟ್ಟಕ್ಕೆ ಮಾತ್ರವೇ ಇದನ್ನು ಕತ್ತರಿಸಿಕೊಳ್ಳಬಹುದಾಗಿದೆ ಹಾಗಾಗಿ 24 ಗಂಟೆಗಳ ಒಳಗಾಗಿ ಈ ಕೂದಲುಗಳು ಪುನಃ ಹುಟ್ಟಿಕೊಂಡು ನಮಗೆ ಕಿರಿಕಿರಿಯನ್ನುಂಟು ಮಾಡುತ್ತವೆ ವ್ಯಾಕ್ಸಿಂಗ್‌ನಂತೆ ನಯತ್ವವನ್ನು ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಇತರ ವೈಯಕ್ತಿಕ ಉಪಕರಣಗಳಿಗಿಂತ ರೇಜರ್‌ಗಳು ಹೆಚ್ಚು ಬ್ಯಾಕ್ಟೀರಿಯಾವನ್ನು ಹೊಂದಿರುವ ಕಾರಣ ಸೂಕ್ಷ್ಮ ಅಥವಾ ಇನ್ನಿತರ ಹೊಂದಿಕೊಳ್ಳುವ ತ್ವಚೆಯುಳ್ಳವರಿಗೆ ಇದು ಉತ್ತಮ ವಿಧಾನವಲ್ಲ ಎಂದು ತಿಳಿಸಿದ್ದಾರೆ. ರೇಜರ್‌ಗಳನ್ನು ಬಳಸುವುದು ಅತ್ಯಂತ ನಿಕಟ ಪ್ರದೇಶಗಳಲ್ಲಿ ಮೃತ ಹಾಗೂ ಕೊಳೆತ ಚರ್ಮವನ್ನು ಹರಡಿದಂತೆ ಹಾಗೂ ಎಲ್ಲಿಯಾದರೂ ಗಾಯವಾದಲ್ಲಿ ಇದು ಉರಿಯೂತ ಹಾಗೂ ಚರ್ಮದ ಇತರ ಸೋಂಕುಗಳನ್ನುಂಟು ಮಾಡಬಹುದು ಎಂದು ಟ್ರಿಶ್ ಎಚ್ಚರಿಸಿದ್ದಾರೆ.

ಸೋಪಿಗಿಂತ ಫೋಮ್ ಇಲ್ಲವೇ ಕ್ರೀಮ್ ಬಳಸಿ:
ರೇಜರ್‌ಗಳನ್ನು ಬಳಸಿ ಶೇವ್ ಮಾಡುವುದು ಅತ್ಯಂತ ಸರಳ ಹಾಗೂ ಕಡಿಮೆ ವೆಚ್ಚದ ಪರಿಹಾರ ಎಂದು ಭಾವಿಸುತ್ತಾರೆ ಆದರೆ ಇದು ತುಂಬಾ ಅಪಾಯಕಾರಿ ಎಂದು ಅವರು ಹೇಳುತ್ತಾರೆ. ಕೂದಲು ತೆಗೆಯುವ ಹಲವಾರು ವಿಧಾನಗಳಲ್ಲಿ ಕೂದಲು ತೆಗೆಯುವ ಕ್ರೀಮ್‌ಗಳನ್ನು ಬಳಸಬಹುದು ಇದನ್ನು ಮನೆಯಲ್ಲೇ ಅನುಸರಿಸಬಹುದು ಎಂದವರು ಸಲಹೆ ನೀಡುತ್ತಾರೆ.

ಶೇವಿಂಗ್ ಮಾಡುವಾಗ ಆದಷ್ಟು ಸೋಪು ಬಳಸುವುದಕ್ಕಿಂತ ಫೋಮ್ ಬಳಸಿ ಎಂದು ಟ್ರಿಶ್ ತಿಳಿಸುತ್ತಾರೆ. ಫೋಮ್ ಬ್ಲೇಡ್ ಹಾಗೂ ಚರ್ಮವನ್ನು ನಯಗೊಳಿಸಲು ಹಾಗೂ ಶೇವಿಂಗ್ ದದ್ದುಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದವರು ಹೇಳುತ್ತಾರೆ.

ಶೇವ್ ಮಾಡುವಾಗ ಗಾಯವಾದಲ್ಲಿ ಏನು ಮಾಡಬೇಕು?
ಶೇವಿಂಗ್ ಮಾಡುವಾಗ ಏನಾದರೂ ಗಾಯವಾದರೆ, ಒಣ ಟಿಶ್ಯೂ ಬಳಸಿ ಗಾಯವನ್ನು ಶುದ್ಧೀಕರಿಸಿ ಹಾಗೂ ರಕ್ತಸ್ರಾವ ತಡೆಯಲು ಮತ್ತು ಹೆಪ್ಪುಗಟ್ಟುವಿಕೆಯನ್ನು ತಡೆಯಲು ಗಾಳಿಯಾಡಲು ಬಿಡಿ. ಅದಾಗ್ಯೂ ಮನೆಯಲ್ಲೇ ವ್ಯಾಕ್ಸಿಂಗ್ ಮಾಡುವುದನ್ನು ಆದಷ್ಟು ತಪ್ಪಿಸಿ ಎಂದು ಟ್ರಿಶ್ ತಿಳಿಸುತ್ತಾರೆ. ವೃತ್ತಿಪರರ ಸಹಾಯವಿಲ್ಲದೆ ನಿಮಗೆ ನೀವೇ ವ್ಯಾಕ್ಸಿಂಗ್ ಮಾಡುವುದು ಅನೇಕ ತೊಂದರೆಗಳನ್ನುಂಟು ಮಾಡಬಹುದು ಎಂದು ತಿಳಿಸುತ್ತಾರೆ.

Advertisement
Advertisement
Advertisement