Rice: ಅನ್ನ ಉದುರು ಉದುರಾಗಿ ಬರಲು ಹೀಗೆ ಮಾಡಿ - ಊಟ ಮಾಡಿದವರು ಪಕ್ಕಾ ನಿಮ್ಮನ್ನು ಹೊಗಳದೇ ಹೋಗಲಾರರು
Rice: ಹೆಂಗಸರು, ಅಡುಗೆ ಭಟ್ಟರಿಗೆಲ್ಲಾ ಒಂದೇ ದೊಡ್ಡ ಸಮಸ್ಯೆ. ಏನಪ್ಪಾ ಅಂದ್ರೆ ಎಷ್ಟೇ ಪ್ರಯತ್ನ ಪಟ್ಟರು ಮಾಡಿದ ಅನ್ನ ಉದುರು ಉದುರಾಗುವುದಿಲ್ಲವಲ್ಲಾ? ಯಾವಾಗಲೂ ಗಿಂಜಲಾಗಿ, ಮುದ್ದೆ ಮುದ್ದೆಯಾಗಿ, ಮೆತ್ತಗೆ ಆಗುತ್ತಲ್ಲಾ ಎಂದು. ಹಾಗಿದ್ರೆ ಇನ್ನು ಮುಂದೆ ಈ ಚಿಂತೆ ಬೇಡ. ನೀವು ಮಾಡಿದ ಅನ್ನ ಉದುರು ಉದುರಾಗಿ ಬರಲು ಜಸ್ಟ್ ಹೀಗ್ ಮಾಡಿ ಸಾಕು. ಮತ್ತೆ ತಿಂದವರೆಲ್ಲರೂ ನಿಮ್ಮನ್ನು ಹೊಗಳಿಯೇ ಹೋಗುತ್ತಾರೆ.
ಹೌದು, ಎಲ್ಲಾ ಆಹಾರಕ್ಕೂ ಅದರದ್ದೇ ಆದ ರುಚಿ ಇರುತ್ತದೆ. ರುಚಿಯೊಂದಿಗೆ ಮಾಡುವ ವಿಧಾನವೂ, ಬೆಂದ ಬಗೆಯೂ ಜನರಿಗೆ ಹಿಡಿಸುವಂತಿರಬೇಕು. ಅಂತೆಯೇ ಅನ್ನದಲ್ಲೂ ಹೆಚ್ಚಿನವರು ರುಚಿ ಹುಡುಕದಿದ್ದರೂ ಅನ್ನ( Rice) ಉದುರು ಉದುರಾಗಿರಬೇಕು ಎನ್ನುತ್ತಾರೆ. ಹಾಗಿದ್ರೆ ಹೀಗೆ ಯಾವಾಗಲೂ ಅನ್ನವನ್ನು ಉದುರು ಉದುರಾಗುವಂತೆ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್ !!
ಇದನ್ನು ಓದಿ: Bihar Proud Daughters: ತನ್ನ 7 ಮಂದಿ ಹೆಣ್ಣು ಮಕ್ಕಳನ್ನು ಪೊಲೀಸ್ ಮಾಡಿದ ರೈತ - ಇಲ್ಲಿದೆ ನೋಡಿ ರೋಚಕ ಯಶೋಗಾಥೆ
• ಅನ್ನ ತಯಾರಿಸುವಾಗ ಅಕ್ಕಿ ಬಗ್ಗೆ ತಿಳಿದಿರಬೇಕಾದ ವಿಷಯಗಳು:-
ಅಕ್ಕಿಗೆ ಎಷ್ಟು ಪ್ರಮಾಣದಲ್ಲಿ ನೀರು ಹಾಕಿದರೆ ಅನ್ನ ಸರಿಯಾಗಿ ಆಗುತ್ತದೆ ಎಂದು ತಿಳಿಯಲು ಒಂದು ಚಿಕ್ಕಪಾತ್ರೆಯಲ್ಲಿ ಸ್ವಲ್ಪ ಅಕ್ಕಿಯಲ್ಲಿ ಅನ್ನ ಮಾಡಿ ನೋಡಿ. ಕೆಲವೊಂದು ಅಕ್ಕಿಗೆ ಹೆಚ್ಚು ನೀರು ಬಳಕೆ ಮಾಡಿದರೆ ಮಾತ್ರ ಅನ್ನು ಸರಿಯಾಗಿ ಬೆಂದಿರುತ್ತದೆ. ಇನ್ನು ಕೆಲವು ಅಕ್ಕಿ ಕಡಿಮೆ ನೀರಿನಲ್ಲಿ ಬೇಯುತ್ತದೆ. ಒಂದು ಲೋಟ ಅಕ್ಕಿಗೆ ಎರಡು ಲೋಟ ನೀರು ಹಾಕುವುದು ಸಾಮಾನ್ಯವಾದರೂ ಎಲ್ಲ ಅಕ್ಕಿಗೂ ಇದು ಅನ್ವಯವಾಗುವುದಿಲ್ಲ. ಹೀಗಾಗಿ ಅಕ್ಕಿ ಖರೀದಿಸಿ ತಂದ ಮೊದಲ ದಿನ ಈ ಪ್ರಯೋಗ ಮಾಡಿ ನೋಡುವುದು ಉತ್ತಮ. ಮೊದಲಿಂದ ಒಂದೇ ರೀತಿ ಅಕ್ಕಿ ಬಳಸುತ್ತಿದ್ದರೆ ಹೀಗೆ ಮಾಡೋ ಅಗತ್ಯ ಇಲ್ಲ.
• ಕುಕ್ಕರ್‌ನಲ್ಲಿ ಅನ್ನ ಮಾಡುವಾಗ ಗಮನಿಸಬೇಕಾದ ವಿಷಯಗಳು :-
ಕುಕ್ಕರ್‌ನಲ್ಲಿ ಅನ್ನ ಮಾಡುವಾಗ ಅಕ್ಕಿಯನ್ನು ಚೆನ್ನಾಗಿ ತೊಳೆದು ನೆನೆಯಲು ಇಟ್ಟು, ಒಂದು ಲೋಟ ಅಕ್ಕಿಗೆ ಒಂದುವರೆ ಲೋಟದಷ್ಟು ನೀರು ಹಾಗೂ ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚಿ. ಒಂದು ವಿಸಿಲ್ ಆಗುವವರೆಗೂ ಉರಿಯನ್ನು ಹೆಚ್ಚಾಗಿಡಿ. ನಂತರ ಉರಿಯನ್ನು ಮಧ್ಯಮದಲ್ಲಿಟ್ಟು ಎರಡು ವಿಸಿಲ್ ಆದ ಬಳಿಕ ಉರಿಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ. 10-15 ನಿಮಿಷ ಬಿಟ್ಟು ಗ್ಯಾಸ್ ಆಫ್ ಮಾಡಿ. 5ರಿಂದ 10 ನಿಮಿಷ ಬಿಟ್ಟು ಆವಿ ಹೋದ ಬಳಿಕ ಕುಕ್ಕರ್ ಮುಚ್ಚಳ ತೆಗೆದು ಅನ್ನ ತಿನ್ನಲು ಬಡಿಸಿ. ಇದರಿಂದ ಅನ್ನ ಉದುರಾಗಿರುತ್ತದೆ.
• ಪಾತ್ರೆಯಲ್ಲಿ ಅನ್ನ ತಯಾರಿಸುವಾಗ ಗಮನಿಸಬೇಕಾದ ವಿಷಯಗಳು:-
ಅಕ್ಕಿ ಚೆನ್ನಾಗಿ ತೊಳಿದ ನಂತರ ಅದನ್ನು ನೆನಸಿಡಿ. ಈ ವೇಳೆ ಒಂದು ಲೋಟ ಅಕ್ಕಿಗೆ ಎರಡು ಲೋಟ ನೀರು ಅಥವಾ ಹೆಚ್ಚು ಪ್ರಮಾಣದಲ್ಲೂ ನೀರನ್ನು ಹಾಕಬಹುದು. ಬಳಿಕ ಆ ನೀರನ್ನು ತೆಗೆದು ಒಂದು ಲೋಟಕ್ಕೆ ಒಂದುವರೆ ಲೋಟದಷ್ಟು ನೀರು, ಉಪ್ಪು ಹಾಕಿ ಒಲೆ ಅಥವಾ ಗ್ಯಾಸ್ ಮೇಲೆ ಇಡಿ. ಪಾತ್ರೆಯಲ್ಲಿ ಮಾಡುವಾಗ ಒಲೆಯ ಮೇಲಿಟ್ಟರೆ ಒಳ್ಳೆಯದು. ಚೆನ್ನಾಗಿ ಅನ್ನ ಆಗುತ್ತದೆ. ಅನ್ನಕ್ಕೆ ಒಂದು ಕುದಿ ಬರುವವರೆಗೂ ಉರಿಯನ್ನು ಹೆಚ್ಚಾಗಿಡಿ. ಒಂದು ಕುದಿ ಬಂದ ಬಳಿಕ ಉರಿಯನ್ನು ಮಧ್ಯಮ ಪ್ರಮಾಣದಲ್ಲಿಡಿ. ನೀರು ಸಂಪೂರ್ಣವಾಗಿ ಆವಿಯಾದ ಬಳಿಕ. ಉರಿಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ. ಬಳಿಕ ಪಾತ್ರೆಯನ್ನು ಮುಚ್ಚಿ 10-15 ನಿಮಿಷ ಬಿಟ್ಟು ಬಳಿಕ ಒಲೆಯನ್ನು ಆಫ್ ಮಾಡಿ. ಬಳಿಕ ಉದುರುದುರು ಅನ್ನವನ್ನು ಬಡಿಸಿ ಊಟ ಮಾಡಿ.
ಇದನ್ನೂ ಓದಿ: Gurkeerat Singh : RCB ಅಭಿಮಾನಿಗಳಿಗೆ ಬಿಗ್ ಶಾಕ್- ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ ಸ್ಟಾರ್ ಕ್ರಿಕೆಟಿಗ !!