For the best experience, open
https://m.hosakannada.com
on your mobile browser.
Advertisement

Dish wash Techniques: ಪಾತ್ರೆಗೆ ಅಂಟಿದ ಎಣ್ಣೆ ಜಿಡ್ಡು ತೆಗೆಯಲು ಕಷ್ಟ ಆಗ್ತಿದಿಯಾ ?! ಬಂದಿದೆ ನೋಡಿ ಹೊಸ ಟಿಪ್ಸ್

10:48 AM Nov 18, 2023 IST | ಸುದರ್ಶನ್
UpdateAt: 10:48 AM Nov 18, 2023 IST
dish wash techniques  ಪಾತ್ರೆಗೆ ಅಂಟಿದ ಎಣ್ಣೆ ಜಿಡ್ಡು ತೆಗೆಯಲು ಕಷ್ಟ ಆಗ್ತಿದಿಯಾ    ಬಂದಿದೆ ನೋಡಿ ಹೊಸ ಟಿಪ್ಸ್
Advertisement

Dish wash Techniques: ಭಾರತೀಯರು ತಯಾರಿಸುವಂತಹ ಮಾಸಲೆಯುಕ್ತ ಆಹಾರಗಳಿಂದಾಗಿ ಪಾತ್ರೆಗಳಲ್ಲಿ ಹೆಚ್ಚಿನ ಜಿಡ್ಡು, ಎಣ್ಣೆಯಂಶವು ಹೆಚ್ಚಾಗಿ ಅಂಟಿಕೊಂಡಿರುತ್ತದೆ. ಇಂತಹ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿ ಇರುವಂತಹ ಪಾತ್ರೆಗಳನ್ನು ಹೊಳೆಯುವಂತೆ ಮಾಡುವುದು ಹೇಗೆ (Dish wash Techniques)ಎಂದು ನಾವು ನಿಮಗೆ ಈ ಮೂಲಕ ತಿಳಿಸಿಕೊಡಲಿದ್ದೇವೆ.

Advertisement

ವಿನೆಗರ್:
ಇದೊಂದು ಉತ್ತಮ ನೈಸರ್ಗಿಕ ಕ್ಲನ್ಸರ್. ವಿನೆಗರ್ ಬಳಸಿ ಸ್ರಬ್‌ನಿಂದ ಪಾತ್ರೆ ತಿಕ್ಕಿ. ನಂತರ ತೊಳೆದರೆ ಜಿಡ್ಡು ಮಾಯ.

ನಿಂಬೆ ರಸ:
ಎಣ್ಣೆ ಜಿಡ್ಡು ಇರುವ ಜಾಗಕ್ಕೆ ನಿಂಬೆ ರಸ ಹಾಕಿ ಸ್ವಲ್ಪ ಸಮಯ ನೆನೆಸಿಟ್ಟು ನಂತರ ತಿಕ್ಕಿ ತೊಳೆಯಿರಿ. ನಿಂಬೆಯ ಸಿಟ್ರಸ್ ಅಂಶವು ಕಠಿಣ ಕಲೆ ಹಾಗೂ ಜಿಡ್ಡನ್ನು ತೆಗೆಯಲು ನೆರವಾಗುತ್ತದೆ.

Advertisement

ಡಿಶ್ವಾಶ್ ಲಿಕ್ವಿಡ್:
ನಿಂಬೆ ಅಥವಾ ವಿನೆಗರ್ ಇರುವ ಡಿಶ್ವಾಶ್ ಲಿಕ್ವಿಡ್ ಮಾರುಕಟ್ಟೆಯಲ್ಲಿ ಲಭ್ಯ. ಇದನ್ನು ಬಳಸಿದರೆ ಎಣ್ಣೆ ಜಿಡ್ಡಿನ ಜೊತೆ, ತಳಹತ್ತಿದ ಪಾತ್ರೆಗಳೂ ಪಳ ಪಳ ಹೊಳೆಯುತ್ತವೆ.

ಬಿಸಿನೀರು:
ಇದೊಂದು ಸುಲಭ ಹಾಗೂ ಉತ್ತಮ ಮಾರ್ಗ. ಎಣ್ಣೆ ಜಿಡ್ಡಾದ ಪಾತ್ರೆಗಳನ್ನು ಬಿಸಿ ನೀರಿನಲ್ಲಿ ನೆನೆಸಿ. ನಂತರ ಬಿಸಿ ನೀರನ್ನು ಬಳಸಿಕೊಂಡು ಸೋಪಿನಿಂದ ಪಾತ್ರೆ ತೊಳೆಯಿರಿ.

ಬೇಕಿಂಗ್ ಸೋಡಾ:
ಕಾಲು ಭಾಗ ವಿನೆಗರ್ ಮತ್ತು ಮುಕ್ಕಾಲು ಭಾಗ ನೀರು ಎರಡನ್ನು ಮಿಶ್ರಣ ಮಾಡಿಕೊಂಡು ಪಾತ್ರೆಯನ್ನು ಅದರಲ್ಲಿ ಸ್ವಲ್ಪ ಹೊತ್ತು ಹಾಗೆ ಬಿಡಿ. ನಂತರ ಸೋಪು ಹಾಕಿ ತೊಳೆಯಿರಿ.

ಇದನ್ನೂ ಓದಿ: ಮುಟ್ಟಾದಾಗ ಸಂಗಾತಿಗೆ 'ಲಿಪ್ ಕಿಸ್' ಕೊಡ್ಬೋದಾ ?! ಕೊಟ್ರೆ ಏನೇನಾಗುತ್ತೆ ಗೊತ್ತಾ?

Advertisement
Advertisement
Advertisement