Home Decor:ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಸಾಕು, 5 ಸ್ಟಾರ್ ಹೋಟೆಲ್ ರೀತಿ ಕಾಣೋದು ಮಾತ್ರವಲ್ಲ ಸದಾ ಸುವಾಸನೆಯಿಂದ ಕೂಡಿರುತ್ತೆ!!
Home Decor: ಐಷಾರಾಮಿ ಹೋಟೆಲ್‌ಗಳಿಗೆ(Home Decor) ಭೇಟಿ ನೀಡಿದ ಸಂದರ್ಭ ಅಲ್ಲಿನ ಸುಂದರ, ಪರಿಮಳಯುಕ್ತ ವಾತಾವರಣ ನೋಡಿದವರ ಮನ ಸೆಳೆಯುವುದು ಸುಳ್ಳಲ್ಲ. ಐಷಾರಾಮಿ ಹೋಟೆಲ್ ಗೆ ಭೇಟಿ ನೀಡಿದಾಗ ನಮ್ಮ ಮನೆಯಲ್ಲಿ ಕೂಡ ಇದೇ ರೀತಿ ಅಲಂಕರಿಸಬೇಕೆಂದು ಬಯಸುವುದು ಸಹಜ. ನೀವೂ ಕೂಡ ಇದೆ ರೀತಿ ಆಲೋಚಿಸುತ್ತಿದ್ದರೆ, ನಿಮಗಾಗಿ ಮುಖ್ಯ ಮಾಹಿತಿ ಇಲ್ಲಿದೆ ನೋಡಿ!!
ನಿಮ್ಮ ಸ್ವಂತ ಮನೆಯಲ್ಲಿ ಐಷಾರಾಮಿ ಹೋಟೆಲ್‌ನ ವಾತಾವರಣ ನಿರ್ಮಿಸಿಕೊಳ್ಳಲು ನಿಮಗೆ ಸಹಾಯವಾಗುವ ಐದು ಸರಳ ಮಾರ್ಗಗಳು ಇಲ್ಲಿವೆ ನೋಡಿ!!
*ಪರಿಮಳಯುಕ್ತ ಕ್ಯಾಂಡಲ್‌ಗಳು:
ನಿಮ್ಮ ಮನೆಯನ್ನು ಆಕರ್ಷಕವಾಗಿ ಕಾಣುವ ಹಾಗೇ ಮಾಡಲು ಪರಿಮಳಯುಕ್ತ ಕ್ಯಾಂಡಲ್‌ಗಳ ಬಳಕೆ ಮಾಡಬಹುದು. ಪರಿಮಳಯುಕ್ತ ಕ್ಯಾಂಡಲ್ ಗಳು ತಾಜಾತನ ತುಂಬುವಂತೆ ಮಾಡುವ ಜೊತೆಗೆ ಒತ್ತಡದ ದಿನಗಳಲ್ಲಿ ಆಯಾಸ ದೂರ ಮಾಡಿಕೊಳ್ಳಲು ನೆರವಾಗುತ್ತದೆ. ಬಗೆಬಗೆಯ ಆಕಾರಗಳಲ್ಲಿ ಸಿಗುವ ಕ್ಯಾಂಡಲ್‌ಗಳನ್ನು ಖರೀದಿ ಮಾಡಿ ನಿಮ್ಮಿಷ್ಟದ ಜಾಗದಲ್ಲಿ ಇಡಬಹುದು.
* ಪಾಟ್ಪೋರಿಸ್:
ಒಣಗಿದ ಪರಿಮಳದ ಹೂವು, ಎಲೆ, ಮತ್ತು ಸುಗಂಧ ತೈಲಗಳನ್ನು ಬಳಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿಸಿ, ಅವುಗಳನ್ನು ಒಂದು ಗ್ಲಾಸ್ ಪಾಟ್‌ಗೆ ಹಾಕಿ ಇಡಲಾಗುತ್ತದೆ. ಈ ಮಿಶ್ರಣದ ವಿಶಿಷ್ಟ ಪರಿಮಳ ನಿಮ್ಮ ಮನೆಯಲ್ಲಿ ನೈಸರ್ಗಿಕ ತಾಜಾತನವನ್ನು ತುಂಬುತ್ತದೆ.
* ಧೂಪದ ಕಡ್ಡಿಗಳು:
ಮನೆಯಲ್ಲಿ ಧೂಪದ ಕಡ್ಡಿಗಳನ್ನು ಹಚ್ಚುವುದರಿಂದ ಮನೆಯಲ್ಲಿ ಧನಾತ್ಮಕ ಭಾವನೆ ಹೆಚ್ಚುತ್ತದೆ.ನಿಮ್ಮ ಮನೆಯ ಹಾಲ್‌ನ ಮಧ್ಯಭಾಗದಲ್ಲಿ ಧೂಪದ ಕಡ್ಡಿಗಳನ್ನು ಇಟ್ಟರೆ ಅದರ ಪರಿಮಳ ಮನೆಯೆಲ್ಲೆಡೆ ಹರಡುತ್ತದ. ಮನೆಯಲ್ಲಿ ತಾಜಾ ವಾತಾವರಣ ಸೃಷ್ಠಿಸಿ ದಿನದ ಆಯಾಸ ದೂರಮಾಡುತ್ತದೆ.
* ಲಿನಿನ್ ಸ್ಪ್ರೇ:
ಲಿನಿನ್ ಸ್ಪ್ರೇ ಬಳಕೆ ಮಾಡುವುದರಿಂದ ಮನೆಯಲ್ಲಿ ತಾಜಾತನ ನೀಡುತ್ತದೆ. ಅಷ್ಟೇ ಅಲ್ಲದೇ, ಒತ್ತಡವಿದ್ದರೆ ವಿಶ್ರಾಂತಿಯನ್ನು ಒದಗಿಸುತ್ತದೆ.
* ಸುಗಂಧ ತೈಲಗಳ ಬಳಕೆ:
ಸುಗಂಧ ತೈಲಗಳು ಇಲ್ಲವೇ ಎಸೆನ್ಷಿಯಲ್ ಆಯಿಲ್‌ಗಳು ಮನಸ್ಸಿಗೆ ನೆಮ್ಮದಿಯನ್ನು ನೀಡಿ ದಣಿವು ನಿವಾರಿಸುತ್ತದೆ. ನಿಮ್ಮ ನೆಚ್ಚಿನ ಪರಿಮಳದ ಸುಗಂಧ ತೈಲ ಆರಿಸಿ ಅದನ್ನು ಎಲೆಕ್ಟ್ರಿಕ್ ಡಿಫ್ಯೂಸರ್‌ಗೆ ಸೇರಿಸಿ, ನಿಮ್ಮ ರೂಮ್‌ನಲ್ಲಿಡಬಹುದು. ಇದರಿಂದ ನಿಮ್ಮ ಒತ್ತಡ ಕಡಿಮೆಯಾಗಲಿದೆ.