ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Women Health: 40 ವರ್ಷದ ಮಹಿಳೆಯರಲ್ಲಿ ಈ ಲಕ್ಷಣ ಕಾಣಿಸಿದ್ರೆ ಇದೇ ನೋಡಿ ಕಾರಣ !! ಸರಿದೂಗಿಸಲು ತಕ್ಷಣ ಹೀಗೆ ಮಾಡಿ

02:51 PM Dec 02, 2023 IST | ಅಶ್ವಿನಿ ಹೆಬ್ಬಾರ್
UpdateAt: 04:13 PM Dec 02, 2023 IST
Image credit: Holland hospital.org
Advertisement

Health Tips for Women : ಆರೋಗ್ಯವನ್ನು(Health) ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಹರಸಾಹಸ ಪಡುವುದು ಸಹಜ. ಅದರಲ್ಲಿಯೂ ಮಹಿಳೆಯರಿಗೆ(Women Health)30 ದಾಟುತ್ತಿದ್ದಂತೆ ಕೈ- ಕಾಲು ನೋವು, ಮಂಡಿ ನೋವು ಹೀಗೆ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. 40 ವರ್ಷ ವಯಸ್ಸಿನ ನಂತರ, ಮಹಿಳೆಯರಿಗೆ ಹೆಚ್ಚಿನ ಪೋಷಣೆಯ ಅಗತ್ಯವಿರುತ್ತದೆ. ಹೀಗಾಗಿ, 40 ವರ್ಷ ಕಳೆದ ಬಳಿಕ, ಮಹಿಳೆಯರು ಅಗತ್ಯವಾದ ಜೀವಸತ್ವಗಳನ್ನು ಪಡೆಯಲು ತಮ್ಮ ಆಹಾರದಲ್ಲಿ ಕೆಲವೊಂದು ಸಣ್ಣ ಮಾರ್ಪಾಡು(Health Tips) ಮಾಡಬೇಕಾಗುತ್ತದೆ.

Advertisement

ವಯಸ್ಸಾಗುತ್ತ ಹೋದಂತೆ ಮಹಿಳೆಯರ(women's) ದೇಹದಲ್ಲಿ ಜೀವಸತ್ವಗಳು ಮತ್ತು ಅನೇಕ ಅಗತ್ಯ ಖನಿಜಗಳ ಕೊರತೆ ಉಂಟಾಗುತ್ತದೆ. ಮಹಿಳೆಯರಲ್ಲಿ (women health)ಮಕ್ಕಳ ಜನನದ ಬಳಿಕ ದೇಹದಲ್ಲಿ ಹಾರ್ಮೋನ್ ಬದಲಾವಣೆಯಾಗುತ್ತದೆ. ಮಹಿಳೆಯರ ದೇಹವು ದುರ್ಬಲಗೊಂಡು ಹೆಚ್ಚು ಆರೋಗ್ಯ ಸಮಸ್ಯೆ(health tips) ಉಂಟಾಗುತ್ತದೆ. ಹೀಗಾಗಿ, ಕೆಳಕಂಡ ಜೀವಸತ್ವಗಳನ್ನು ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ.

ಮಹಿಳೆಯರಿಗೆ ಅತ್ಯಂತ ಮುಖ್ಯವಾದ ಜೀವಸತ್ವಗಳು :
# ವಿಟಮಿನ್ ಡಿ :
ಮಹಿಳೆಯರ ದೇಹದಲ್ಲಿ (women body) ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಕೊರತೆಯಿಂದ ಮೂಳೆ ನೋವಿನ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ವಯಸ್ಸಾಗುತ್ತ ಹೋದಂತೆ ಮೂಳೆ ಸಂಬಂಧಿ ಕಾಯಿಲೆಗಳೂ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಈ ನಿಟ್ಟಿನಲ್ಲಿ ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಬೇಕಾಗಿದ್ದು, ಇದಕ್ಕಾಗಿ ಪ್ರತಿನಿತ್ಯ ಬೆಳಗ್ಗೆ ಎದ್ದು ಅರ್ಧ ಗಂಟೆ ಬಿಸಿಲಿನಲ್ಲಿ ಕುಳಿತು ಹಾಲು, ಪನ್ನೀರ್, ಮಶ್ರೂಮ್, ಸೋಯಾ, ಬೆಣ್ಣೆ, ಮೀನು, ಮೊಟ್ಟೆ ಇತ್ಯಾದಿಗಳನ್ನು ಸೇವಿಸುವುದು ಉತ್ತಮ.

Advertisement

# ವಿಟಮಿನ್ ಎ :
ಮಹಿಳೆಯರಿಗೆ ಋತು ಚಕ್ರದ ಸಮಸ್ಯೆ ಸರಾಸರಿ 40 ಮತ್ತು 45 ರ ನಡುವೆ ಸಂಭವಿಸುತ್ತದೆ. ಈ ಸಂದರ್ಭದಲ್ಲಿ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಹೀಗಾಗಿ, ಮಹಿಳೆಯರು(women health tips) ವಿಟಮಿನ್ ಎ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳಾದ ಕ್ಯಾರೆಟ್, ಪಪ್ಪಾಯಿ, ಕುಂಬಳಕಾಯಿ ಬೀಜಗಳು ಮತ್ತು ಪಾಲಕ್ ಸೊಪ್ಪನ್ನು ಸೇವಿಸುವುದು ಉತ್ತಮ(women health tips).

Government Employee: ಸರ್ಕಾರಿ ನೌಕರರಿಗೆ ಬೊಂಬಾಟ್ ಸುದ್ದಿ- ಕೊನೆಗೂ ದಶಕಗಳ ಬೇಡಿಕೆ ಈಡೇರಿಸಿದ ಸರ್ಕಾರ!!

ವಿಟಮಿನ್ ಇ :
ಮಹಿಳೆಯರಿಗೆ ವಯಸ್ಸಾಗುತ್ತಾ ಹೋದಂತೆ ಮುಖದಲ್ಲಿ ಸುಕ್ಕುಗಳು ಕಂಡುಬರುವುದು ಸಹಜ. ಇದನ್ನು ಸರಿಪಡಿಸಲು, ವಿಟಮಿನ್ ಇ ಸಮೃದ್ಧವಾಗಿರುವ ಆಹಾರ ಸೇವನೆ ಮಾಡುವುದು ಉತ್ತಮ. ಇದರಿಂದಾಗಿ ಚರ್ಮ, ಕೂದಲು ಬೆಳವಣಿಗೆಯಾಗುತ್ತದೆ. ವಿಟಮಿನ್ ಇ ನಿಂದ ಮುಖದ ಮೇಲಿನ ಕಲೆಗ ಕಮ್ಮಿಯಾಗುತ್ತದೆ. ಇದಕ್ಕಾಗಿ ನಿಮ್ಮ ಆಹಾರದಲ್ಲಿ ಬಾದಾಮಿ, ಕಡಲೆಕಾಯಿ ಬೆಣ್ಣೆ ಮತ್ತು ಬೀಜಗಳು, ಹಸಿರು ತರಕಾರಿಗಳು ಮತ್ತು ಧಾನ್ಯಗಳನ್ನು ಸೇವಿಸುವುದು ಒಳ್ಳೆಯದು.

Chanakya Niti: ಮಹಿಳೆಯರೇ ನಿಮ್ಮಲ್ಲಿ ಈ 3 ಗುಣಗಳಿದ್ದರೆ ಎಂದಿಗೂ ಮನೆ ಏಳಿಗೆ ಹೊಂದಲ್ಲ !!

# ವಿಟಮಿನ್ ಬಿ :
ಗರ್ಭಾವಸ್ಥೆಯಲ್ಲಿ, ಮಗುವಿನ ಮೆದುಳಿನ ಬೆಳವಣಿಗೆಗೆ ಮಹಿಳೆಯರಿಗೆ(women health tips) ವಿಟಮಿನ್ ಬಿ 9 ನೀಡಲಾಗುತ್ತದೆ. ಇದು ಮಗುವಿನ ಮೆದುಳು ಸರಿಯಾಗಿ ಬೆಳೆಯಲು ಸಹಕರಿಸುತ್ತದೆ. ಅಷ್ಟೇ ಅಲ್ಲದೆ, ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಟಮಿನ್ ಬಿ ಅತ್ಯವಶ್ಯಕವಾಗಿದ್ದು, ಮಹಿಳೆಯರು(women health ) ವಯಸ್ಸಾದಂತೆ ವಿಟಮಿನ್ ಬಿ ಸಮೃದ್ಧವಾಗಿರುವ ಆಹಾರವನ್ನು ಸೇವನೆಯ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು.

# ವಿಟಮಿನ್ ಸಿ :
ಮಹಿಳೆಯರಲ್ಲಿ 40 ವರ್ಷ ವಾಗುತ್ತಿದ್ದಂತೆ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಅನೇಕ ಆರೋಗ್ಯ(health news) ಸಮಸ್ಯೆಗಳು ಕಂಡುಬರುತ್ತವೆ. ಈ ಸಮಸ್ಯೆಯಿಂದ ಪಾರಾಗಲು, ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಒಳ್ಳೆಯದು. ವಿಟಮಿನ್ ಸಿ ಚರ್ಮವನ್ನು ಆರೋಗ್ಯವಾಗಿರಿಸಲು ನೆರವಾಗುತ್ತದೆ. ಇದಲ್ಲದೇ ,ನಿಂಬೆಹಣ್ಣು, ಕಿತ್ತಳೆ, ಹಸಿರು ತರಕಾರಿಗಳು ಮತ್ತು ನೆಲ್ಲಿಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಹಾರದಲ್ಲಿ ಸೇರಿಸಿಕೊಂಡರೆ ಒಳಿತು.

ಇದನ್ನೂ ಓದಿ: Liquor Sale: ಖಾಲಿಯಾದ ಸರ್ಕಾರದ ಖಜಾನೆ -ಮಧ್ಯ ಮಾರಾಟ ಮಾಡಲು ಬಂತು ಹೊಸ ರೂಲ್ಸ್, ಇನ್ನು ಟಾರ್ಗೆಟ್ ಫಿಕ್ಸ್!!

Advertisement
Advertisement