For the best experience, open
https://m.hosakannada.com
on your mobile browser.
Advertisement

Egg: ಕೋಳಿ ಮೊಟ್ಟೆ ತಿನ್ನುವುದರಿಂದ ಹೊಟ್ಟೆ, ಬೊಜ್ಜು ಕರಗುವುದು ಗ್ಯಾರಂಟಿ- ಆದ್ರೆ ಹೀಗೆ ಸೇವಿಸಿದರೆ ಮಾತ್ರ !!

11:05 AM Nov 15, 2023 IST | ಹೊಸ ಕನ್ನಡ
UpdateAt: 11:05 AM Nov 15, 2023 IST
egg  ಕೋಳಿ ಮೊಟ್ಟೆ ತಿನ್ನುವುದರಿಂದ ಹೊಟ್ಟೆ  ಬೊಜ್ಜು ಕರಗುವುದು ಗ್ಯಾರಂಟಿ  ಆದ್ರೆ ಹೀಗೆ ಸೇವಿಸಿದರೆ ಮಾತ್ರ

Egg health benefits: ಇಂದು ಬೊಜ್ಜು ಕರಗಿಸಲು, ಹೊಟ್ಟೆ ಇಳಿಸಲು ಡಯಟ್ ಫುಡ್ ಆಗಿ ಹೆಚ್ಚಿನ ಆಹಾರ ಪದಾರ್ಥಗಳನ್ನು ಇತಿ-ಮಿತಿಯಲ್ಲಿ ಬಳಸುವುದುಂಟು. ಅದು ಹೆಚ್ಚು ಪ್ರೋಟೀನ್ ನೀಡಿ, ಸಣ್ಣ ಪ್ರಮಾಣದಲ್ಲಿ ಸೇವಿಸುವ ಆಹಾರ ಆಗಿರಬೇಕು. ಅಂತದರಲ್ಲಿ ಕೋಳಿ ಮೊಟ್ಟೆ(Egg health benefits) ಕೂಡ ಒಂದು.

Advertisement

ಹೌದು, ಕಾಲ ಬದಲಾದಂತೆ ನಮ್ಮ ಆಹಾರ ಪದ್ಧತಿಗಳು, ಜೀವನ ಕ್ರಮಗಳು ಕೂಡ ಬದಲಾಗುತ್ತಿದೆ. ಹಿಂದೆ ಹೊಟ್ಟೆ ತುಂಬಿಸಿಕೊಳ್ಳಲು ಮನುಷ್ಯರು ಕಷ್ಟಪಡುತ್ತಿದ್ದರೆ ಇಂದು ಹೊಟ್ಟೆ, ಬೊಜ್ಜುಗಳನ್ನು ಕರಗಿಸಲು ಜನರು ಕಷ್ಟ ಪಡುತ್ತಿದ್ದಾರೆ. ಇದಕ್ಕಾಗಿ ವಿವಿಧ ಆಹಾರಗಳ ಕ್ರಮಗಳ, ಡಯಟ್ ಗಳ ಬೆನ್ನತ್ತಿದ್ದಾರೆ. ಅದರಲ್ಲಿ ಕೋಳಿಮೊಟ್ಟೆ ಕೂಡ ಒಂದು. ದಿನಕ್ಕೊಂದು ಬೇಯಿಸಿದ ಮೊಟ್ಟೆ ತಿಂದ್ರೆ ಆರೋಗ್ಯವಾಗಿ ಹಾಗೂ ಫಿಟ್ ಆಗಿರುವಿರಿ
ಆದರೆ ಕೋಳಿ ಮೊಟ್ಟೆ ಸೇವಿಸುವುದರಿಂದ ದೇಹದ ತೂಕವನ್ನು ನಿಯಂತ್ರಣ ಮಾಡಿಕೊಳ್ಳಬಹುದು ಎಂಬ ಒಂದು ವಿಚಾರ ಈಗ ಬಯಲಾಗಿದೆ. ಹಾಗಿದ್ರೆ ಕೋಳಿ ಮೊಟ್ಟೆ ತಿಂದರೆ ಬೊಜ್ಜು, ಹೊಟ್ಟೆ ಕರಗುವುದು ಪಕ್ಕಾ!! ಆದರೆ ಈ ಕ್ರಮದಲ್ಲಿ ತಿಂದರೆ ಮಾತ್ರ.

ಯಾವ ಕ್ರಮದಲ್ಲಿ ಕೋಳಿಮೊಟ್ಟೆ ಸೇವಿಸ ಬೇಕು?
ಕೋಳಿ ಮೊಟ್ಟೆಗಳಿಂದ ನಿಮ್ಮ ದೇಹದ ತೂಕ ಕಡಿಮೆ ಆಗಬೇಕು ಎಂದು ನೀವು ನಿರ್ಧಾರ ಮಾಡಿದರೆ ಆದಷ್ಟು ಮೊಟ್ಟೆಯನ್ನು ನಿಮ್ಮ ಬೆಳಗಿನ ಉಪಾಹಾರದ ಸಮಯದಲ್ಲಿ ಸೇವನೆ ಮಾಡಿ. ಏಕೆಂದರೆ ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವ ಮೂಲಕ ಇಡೀ ದಿನ ನಿಮ್ಮನ್ನು ಸದೃಡವಾಗಿ ಕಾಪಾಡುತ್ತದೆ. ಬೆಳಗಿನ ಸಮಯದಲ್ಲಿ ನಿಮ್ಮ ಜೀರ್ಣಾಂಗ ವ್ಯವಸ್ಥೆ ಕೂಡ ಚೆನ್ನಾಗಿ ಕೆಲಸ ಮಾಡುವ ಕಾರಣ ಮೊಟ್ಟೆಯಿಂದ ನಿಮ್ಮ ದೇಹಕ್ಕೆ ಲಭ್ಯವಾಗುವ ಪ್ರೋಟಿನ್ ಅಂಶಗಳನ್ನು ಮತ್ತು ಇತರ ಪೌಷ್ಟಿಕ ಸತ್ವಗಳನ್ನು ನಿಮ್ಮ ದೇಹ ಸರಿಯಾಗಿ ಬಳಸಿಕೊಳ್ಳುವಂತೆ ಮಾಡುತ್ತದೆ.

Advertisement

ಮೊಟ್ಟೆ ಒಳಗಿನ ಹಳದಿ ಭಾಗ ತಿನ್ನಬಹುದೇ?
ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಆದಷ್ಟು ಮೊಟ್ಟೆಯ ಹಳದಿ ಭಾಗವನ್ನು ಸೇವನೆ ಮಾಡಬಾರದು ಎಂದು ಹೇಳುತ್ತಾರೆ. ಆದರೆ ಇತ್ತೀಚೆಗಷ್ಟೇ ಸಂಶೋಧಕರು ಮೊಟ್ಟೆ ಹಳದಿ ಭಾಗದಲ್ಲಿ ಇರುವ ಕೊಬ್ಬಿನ ಅಂಶ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

ಮೊಟ್ಟೆ ತಿನ್ನುವ ಪ್ರಯೋಜನಗಳು:
ಸ್ನಾಯುಗಳ ಬೆಳವಣಿಗೆ ಮತ್ತು ಮೂಳೆಯ ಬಲಕ್ಕೆ ಪ್ರೋಟೀನ್ ಅತ್ಯಗತ್ಯ. ಮಕ್ಕಳ ಬೆಳವಣಿಗೆ ಮತ್ತು ಸ್ನಾಯುಗಳ ಬಲಕ್ಕೆ ಸಾಕಷ್ಟು ಪ್ರೋಟೀನ್‌ಯುಕ್ತ ಆಹಾರ ಸೇವನೆಯು ಅವಶ್ಯಕ. ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿರುವುದರಿಂದ ಮಕ್ಕಳಿಗೂ ಇದು ಉತ್ತಮ.
ಮೊಟ್ಟೆಯಿಂದ ದೊರೆಯುವ ಪ್ರೋಟೀನ್ ತೂಕವನ್ನು ಹೆಚ್ಚಿಸುವುದಿಲ್ಲ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Fishing: ಮೀನುಗಾರರೇ, ಈ ಒಂದು ಮೀನಿಗೆ ಬಲೆ ಬೀಸಿದ್ರೆ ಸಾಕು, ರಾತ್ರಿ ಬೆಳಗಾಗೋದ್ರೊಳಗೆ ಕೋಟ್ಯಾಧೀಶ್ವರಾಗ್ತೀರಾ !!

Advertisement
Advertisement