ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Remove Stains From Clothes: ಬಟ್ಟೆ ಮೇಲೆ ಟೀ, ಕಾಫಿ ಚೆಲ್ಲಿ ಆದ ಕಲೆ ಹೋಗುತ್ತಿಲ್ಲವೇ? ಹೀಗೆ ಮಾಡಿದ್ರಾಯ್ತು, ಕಲೆ ಸಂಪೂರ್ಣ ಮಾಯ

11:07 AM Dec 08, 2023 IST | ಅಶ್ವಿನಿ ಹೆಬ್ಬಾರ್
UpdateAt: 11:07 AM Dec 08, 2023 IST
Image credit: Kannadiga world.com
Advertisement

Remove Stains From Clothes: ಸಾಮಾನ್ಯವಾಗಿ ಏನಾದರು ಕೆಲಸ ಮಾಡುವಾಗ ಕಲೆಯಾಗುವುದು(Stains From Clothes) ಸಹಜ. ಕೆಲವೊಮ್ಮೆ ಚೆಲ್ಲಿದ ಪಾನೀಯವಾಗಲಿ, ಆಹಾರವಾಗಲಿ ಅಥವಾ ಶಾಯಿಯ ಗುರುತುಗಳಾದರೆ ಈ ಕಲೆಗಳನ್ನು ತೆಗೆಯುವುದು (Remove Stains From Clothes)ದೊಡ್ಡ ಟಾಸ್ಕ್!ಆದರೆ, ಬಟ್ಟೆಗಳಲ್ಲಿ ಈ ರೀತಿ ಕಲೆಗಳಾದರೆ ತೆಗೆಯುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ, ಈ ಟಿಪ್ಸ್ ಮೂಲಕ ಈಸಿಯಾಗಿ ಬಟ್ಟೆಯಲ್ಲಾದ ಕಲೆಯನ್ನು ರಿಮೂವ್ (Remove Stains From Clothes)ಮಾಡಬಹುದು.

Advertisement

* ಬೆಚ್ಚಗಿನ ನೀರಿನಿಂದ ಕಲೆಗಳನ್ನು ತೆಗೆದುಹಾಕಿ: ಚಹಾ-ಕಾಫಿಯ ಕಲೆಗಳನ್ನು ತೆಗೆದುಹಾಕಲು ನೀವು ಬೆಚ್ಚಗಿನ ನೀರನ್ನು ಬಳಸಬಹುದು. ಇದಕ್ಕಾಗಿ, ಬಟ್ಟೆಯನ್ನು ಬಿಸಿ ನೀರಿನಲ್ಲಿ ಹಾಕಿ ಹದಿನೈದು ನಿಮಿಷಗಳ ಕಾಲ ನೆನೆಸಿಡಿ.

* ಶಾಯಿ ಕಲೆಗಳು:
ಯಾವುದೇ ಹೆಚ್ಚುವರಿ ಶಾಯಿಯನ್ನು ತೆಗೆದುಹಾಕಲು ಸ್ಟೇನ್ ಅನ್ನು ನಿಧಾನವಾಗಿ ಬ್ಲಾಟ್ ಮಾಡಿ. ರಬ್ಬಿಂಗ್ ಆಲ್ಕೋಹಾಲ್ ಅಥವಾ ಇಂಕ್ ಸ್ಟೇನ್ ರಿಮೂವರ್ ಅನ್ನು ಹಾಕಿ, ಇದಾದ ಬಳಿಕ ನೀರಿನಿಂದ ತೊಳೆಯಿರಿ.

Advertisement

* ಮೊಸರು ಬಳಸಿ:
ಬಟ್ಟೆಯ ಮೇಲೆ ಪಾನ್ ಮಸಾಲಾ ಇಲ್ಲವೇ ಬೇರೆ ಯಾವುದೇ ಕಲೆಗಳಿದ್ದರೆ ಅವುಗಳನ್ನು ತೆಗೆಯಲು ಮೊಸರನ್ನು ಬಳಕೆ ಮಾಡಬಹುದು.ಇದಕ್ಕಾಗಿ ಕಲೆಯಾದ ಜಾಗವನ್ನು ಮೊಸರು ಇಲ್ಲವೇ ಮಜ್ಜಿಗೆಯಲ್ಲಿ ಅದ್ದಿ ಹತ್ತು ನಿಮಿಷಗಳವರೆಗೆ ಬಿಡಿ. ಇದಾದ ಬಳಿಕ ಬಟ್ಟೆಯನ್ನು ಶುದ್ಧ ನೀರಿನಿಂದ ತೊಳೆಯಬೇಕು. ಇದರಿಂದ ಬಟ್ಟೆಯಿಂದ ಕಲೆಗಳನ್ನು ತೆಗೆಯಬಹುದು.

* ಕಾಸ್ಟಿಕ್ ಸೋಡಾ ಬಳಸಿ:
ಬಟ್ಟೆಯ ಮೇಲಿನ ಕಲೆಗಳನ್ನು ತೆಗೆಯಲು ನೀವು ಕಾಸ್ಟಿಕ್ ಸೋಡಾವನ್ನು ಸಹ ಬಳಕೆ ಮಾಡಬಹುದು. ಇದಕ್ಕಾಗಿ ಕಾಸ್ಟಿಕ್ ಸೋಡಾವನ್ನು ಸ್ವಲ್ಪ ನೀರಿಗೆ ಸೇರಿಸಿ ಹಾಗೂ ಬಟ್ಟೆಯನ್ನು ಹತ್ತು ನಿಮಿಷಗಳ ಕಾಲ ಅದರಲ್ಲಿ ನೆನೆಸಿಡಿ. ಇದರ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ಇದು ಬಟ್ಟೆಯ ಮೇಲಿನ ಯಾವುದೇ ರೀತಿಯ ಕಲೆಗಳನ್ನು ನಿಮಿಷಗಳಲ್ಲಿ ತೆಗೆದುಹಾಕುತ್ತದೆ.

* ನಿಂಬೆ-ಉಪ್ಪಿನ ಸಹಾಯವನ್ನು ತೆಗೆದುಕೊಳ್ಳಿ:
ಬಟ್ಟೆಗಳ ಮೇಲೆ ಎಣ್ಣೆ ಮತ್ತು ಜಿಡ್ಡಿನ ಕಲೆಗಳು ಆದಲ್ಲಿ ನೀವು ನಿಂಬೆ ಮತ್ತು ಉಪ್ಪನ್ನು ಬಳಕೆ ಮಾಡಬಹುದು. ಇದಕ್ಕಾಗಿ ಮೊದಲು ನಿಂಬೆಹಣ್ಣನ್ನು ಕತ್ತರಿಸಿಕೊಂಡು ಉಪ್ಪು ಹಾಕಿ ಬಟ್ಟೆಯ ಕಲೆಯ ಮೇಲೆ ಉಜ್ಜಬೇಕು. ಇದರಿಂದ ಕೆಲವೇ ನಿಮಿಷಗಳಲ್ಲಿ ಬಟ್ಟೆಯ ಕಲೆಗಳು ಮಾಯವಾಗುತ್ತದೆ.

* ರಕ್ತದ ಕಲೆಗಳು:
ಬಟ್ಟೆಗಳಲ್ಲಿ ರಕ್ತ ಚೆಕ್ಕಿದರೆ ತಣ್ಣನೆಯ ನೀರಿನಿಂದ ಸ್ಟೇನ್ ಅನ್ನು ತೊಳೆಯಬೇಕು. ಹೈಡ್ರೋಜನ್ ಪೆರಾಕ್ಸೈಡ್ ಇಲ್ಲವೇ ತಣ್ಣೀರು ಮತ್ತು ಉಪ್ಪಿನ ಮಿಶ್ರಣದೊಂದಿಗೆ ಅದನ್ನು ಬ್ರಷ್ ಮಾಡಿ. ತಣ್ಣನೆಯ ನೀರಿನಲ್ಲಿ ಬಟ್ಟೆಯನ್ನು ತೊಳೆಯಬೇಕು.

* ಸೀಮೆಎಣ್ಣೆ ಬಳಸಿ:
ಕೆಲವೊಮ್ಮೆ ಬಟ್ಟೆಯ ಮೇಲೆ ಕಲೆಗಳನ್ನು ಹೋಗಲಾಡಿಸುವುದು ತುಂಬಾ ಕಷ್ಟ. ಇದಕ್ಕಾಗಿ ಸೀಮೆಎಣ್ಣೆಯಲ್ಲಿ ಬಟ್ಟೆಯನ್ನು ಕಲೆಯಾದ ಜಾಗದಲ್ಲಿ ಅಪ್ಲೈ ಮಾಡಿ ಹತ್ತು ನಿಮಿಷ ಹಾಗೇ ಬಿಡಬೇಕು. ಇದಾದ ಬಳಿಕ, ಸಾಮಾನ್ಯವಾಗಿ ಡಿಟರ್ಜೆಂಟ್ನಿಂದ ತೊಳೆಯಬೇಕು. ಇದರಿಂದ ಕೆಲವೇ ನಿಮಿಷಗಳಲ್ಲಿ ಬಣ್ಣದ ಕಲೆಗಳು ಮಾಯವಾಗುತ್ತದೆ.

ಇದನ್ನೂ ಓದಿ: Mahalakshmi-Ravindar: ರಾತ್ರಿ ನಿದ್ದೆ ಮಾಡಿದ್ರೂ ಅದಕ್ಕಾಗಿ ಎಬ್ಬಿಸ್ತಾನೆ, ಎಷ್ಟು ಬೇಡ ಅಂದ್ರೂ ಸುಮ್ಮನಾಗಲ್ಲ !! ದಢೂತಿ ಗಂಡನ ಹೊಸ ಚಾಳಿ ಹೇಳಿ ಕಣ್ಣೀರಾಕಿದ ಮಹಾಲಕ್ಷ್ಮೀ!!

Advertisement
Advertisement