For the best experience, open
https://m.hosakannada.com
on your mobile browser.
Advertisement

Sonia gandhi: ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಗುಡ್ ಬೈ ಹೇಳಿದ ಸೋನಿಯಾ ಗಾಂಧಿ !!

02:36 PM Feb 15, 2024 IST | ಹೊಸ ಕನ್ನಡ
UpdateAt: 02:52 PM Feb 15, 2024 IST
sonia gandhi  ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಗುಡ್ ಬೈ ಹೇಳಿದ ಸೋನಿಯಾ ಗಾಂಧಿ

Sonia gandhi: ಕಾಂಗ್ರೆಸ್ ನೇತಾರೆ, ಕೈ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಲೋಕಸಭೆಗೆ ಗುಡ್ ಬೈ ಹೇಳಿದ್ದಾರೆ.

Advertisement

ಇದನ್ನೂ ಓದಿ: Watermelon seed: ಕಲ್ಲಂಗಡಿ ತಿಂದು ಅದರ ಬೀಜ ಬಿಸಾಡ್ತೀರಾ ?! ಈ ವಿಚಾರ ಏನಾದ್ರೂ ಗೊತ್ತಾದ್ರೆ ಎಲ್ಲೇ ಹಣ್ಣು ತಿಂದ್ರೂ ಬೀಜ ಮನೆಗೆ ತರ್ತೀರಾ !!

ಹೌದು, ಮೂರು ದಶಕಗಳ ಚುನಾವಣಾ ರಾಜಕೀಯಕ್ಕೆ ಸೋನಿಯಾ ಗಾಂಧಿ(Sonia Gandhi)ವಿದಾಯ ಹೇಳಿದ್ದಾರೆ. ಲೋಕಸಭೆ ಬದಲು ರಾಜ್ಯಸಭೆಯಿಂದ (Rajyasabha) ಸಂಸತ್ ಪ್ರವೇಶಕ್ಕೆ ಸೋನಿಯಾ ಮುಂದಾಗಿದ್ದಾರೆ.

Advertisement

ಅಂದಹಾಗೆ ಈಗಾಗಲೇ ಅವರು ರಾಜ್ಯಸಭಾ ಚುನಾವಣೆಯಲ್ಲಿ ರಾಜಸ್ಥಾನದಿಂದ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಿನ್ನೆ ದಿನ ರಾಜಸ್ಥಾನದ ವಿದಾನಸಭೆಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಅನಾರೋಗ್ಯ ಕಾರಣ ಲೋಕಸಭೆ(Loksabha) ಬದಲು ರಾಜ್ಯಸಭೆಗೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋನಿಯಾ ರಾಜಕೀಯ ಹಾದಿ:

ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು 1999 ರಿಂದ ನಿರಂತರವಾಗಿ ಲೋಕಸಭಾ ಸದಸ್ಯರಾಗಿದ್ದಾರೆ. ಪ್ರಸ್ತುತ ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಅಮೇಥಿಯ ಲೋಕಸಭಾ ಸದಸ್ಯರೂ ಆಗಿದ್ದಾರೆ. ಅವರು ಸಂಸತ್ತಿನ ಮೇಲ್ಮನೆಗೆ ಹೋಗುತ್ತಿರುವುದು ಇದೇ ಮೊದಲು.

Advertisement
Advertisement