For the best experience, open
https://m.hosakannada.com
on your mobile browser.
Advertisement

Shakthi yojane: ಕಾಂಗ್ರೆಸ್ 'ಶಕ್ತಿ ಯೋಜನೆ'ಗೆ ಬಿಗ್ ಶಾಕ್- ರಾಜ್ಯದ್ಯಂತ ಹಬ್ಬುತ್ತಾ ಈ ಕಿಚ್ಚು !!

11:15 PM Dec 06, 2023 IST | ಹೊಸ ಕನ್ನಡ
UpdateAt: 11:15 PM Dec 06, 2023 IST
shakthi yojane  ಕಾಂಗ್ರೆಸ್  ಶಕ್ತಿ ಯೋಜನೆ ಗೆ ಬಿಗ್ ಶಾಕ್  ರಾಜ್ಯದ್ಯಂತ ಹಬ್ಬುತ್ತಾ ಈ ಕಿಚ್ಚು
Advertisement

Shakthi yojane: ಕಾಂಗ್ರೆಸ್ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಗ್ಯಾರಂಟಿ ಯೋಜನೆಗಳಲ್ಲಿ ಅವರಿಗಾಗಿ ಕೆಲವು ಯೋಜನೆಗಳನ್ನು ಮೀಸಲಿಟ್ಟಿದೆ. ಅಂತೆಯೇ ಶಕ್ತಿ ಯೋಜನೆ ಮೂಲಕ ರಾಜ್ಯದ ಎಲ್ಲಾ ಮಹಿಳೆಯರಿಗೂ ರಾಜ್ಯಾದ್ಯಂತ ಉಚಿತ ಪ್ರಯಾಣವನ್ನು ಕೂಡ ಕಲ್ಪಿಸಿದೆ. ಈ ಯೋಜನೆ ಅನೇಕ ಮಹಿಳೆಯರಿಗೆ ಉಪಯುಕ್ತವಾದರೂ ಅನೇಕರಿಗೆ ಇದು ತೊಂದರೆ ಉಂಟುಮಾಡಿದೆ. ಹೀಗಾಗಿ ಇದೀಗ ಶಕ್ತಿ ಯೋಜನೆ(Shakthi yojane) ವಿರುದ್ಧ ಗ್ರಾಮವೊಂದರಲ್ಲಿ ಪ್ರತಿಭಟನೆ ಮಾಡಲಾಗಿದೆ.

Advertisement

ಹೌದು, ಶಕ್ತಿ ಯೋಜನೆಯಿಂದಾಗಿ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ. ಇದು ಜನಸಾಮಾನ್ಯರಿಗೆ ಮಾತ್ರವಲ್ಲಾ, ಸರ್ಕಾರದ ಬೊಕ್ಕಸಕ್ಕೂ ಕನ್ನ ಹಾಕುತ್ತಿದೆ. ಆದರೂ ಸರಕಾರ ಮಹಿಳಾ ಸಬಲೀಕರಣ ಎಂದ ತೇಪೆ ಹಾಕುತ್ತಿದೆ. ಅಂತೆಯೇ ಇದೀಗ ಮಹಿಳೆಯರಿಗೆ ನೀಡಿರುವ ಉಚಿತ ಬಸ್ ಸೌಲಭ್ಯದಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಈ ಹಿನ್ನಲೆ ಮೈಸೂರು – ಚಾಮರಾಜನಗರ (Mysore-Chamarajanagar)ಬಳಿ ಬಸ್ ಸಂಚಾರ ಬಂದ್‌ ಮಾಡಿ ಗ್ರಾಮಸ್ಥರು ಯೋಜನೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನು ಓದಿ: BJP: ಸಂಸತ್ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಿಜೆಪಿಯ 10 ಪ್ರಮುಖ ಸಂಸದರು !!

Advertisement

ಅಂದಹಾಗೆ ವೀರಗೌಡಪುರ(Veeragouda pura) ಬಳಿಯ ಗ್ರಾಮಸ್ಥರೆಲ್ಲರೂ ಸೇರಿ ಮೈಸೂರು – ಚಾಮರಾಜನಗರ ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್ ತಡೆದು, ಸಂಚಾರ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಾರ್ಗದಲ್ಲಿ ಓಡಾಡುವ ಎಲ್ಲಾ ಬಸ್ ನಲ್ಲೂ ಪ್ರಯಾಣಿಕರು ತುಂಬಿ ತುಳುಕುತ್ತಿದ್ದುದರಿಂದ ಕಳೆದ ಎರಡು ತಿಂಗಳಿಂದ ನಮ್ಮ ಊರಿನಲ್ಲಿ ಯಾವ ಬಸ್ ಗಳು ನಿಲ್ಲಿಸುತ್ತಿಲ್ಲ. ಶಾಲಾ ಕಾಲೇಜಿಗೆ ತೆರಳುವ ಮಕ್ಕಳಿಗೆ ನಿತ್ಯವು ಸಮಸ್ಯೆಯಾಗುತ್ತಿದೆ ಎಂದು ಈ ಪ್ರತಿಭಟನೆಗೆ ಮುಂದಾಗಿದ್ದಾರೆ.

ರಸ್ತೆಯಲ್ಲಿ ಕುಳಿತು ಬಸ್ಸನ್ನು ತಡೆದು ಪ್ರತಿಭಟಿಸುತ್ತಿರುವ ಗ್ರಾಮಸ್ಥರು ತಳಕ್ಕೆ ಸಾರಿಗೆ ಸಂಸ್ಥೆ ಇಲಾಖೆಯ ಅಧಿಕಾರಿಗಳು, ಸಚಿವರು ಬರಬೇಕು ಅಲ್ಲಿಯವರೆಗೂ ನಾವು ಯಾರು ಈ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ. ಸ್ಥಳವನ್ನು ಬಿಟ್ಟು ಕದಲುವುದಿಲ್ಲ ಎಂದು ಬೇಡಿಕೆ ಇಟ್ಟಿದ್ದಾರೆ.

Advertisement
Advertisement
Advertisement