For the best experience, open
https://m.hosakannada.com
on your mobile browser.
Advertisement

Prathap simha: ಸಂಸದ ಸ್ಥಾನದಿಂದ ಪ್ರತಾಪ್ ಸಿಂಹ ವಜಾ ?!!

07:03 AM Dec 14, 2023 IST | ಹೊಸ ಕನ್ನಡ
UpdateAt: 07:24 AM Dec 14, 2023 IST
prathap simha  ಸಂಸದ ಸ್ಥಾನದಿಂದ ಪ್ರತಾಪ್ ಸಿಂಹ ವಜಾ
Advertisement

Prathap simha: ಬುಧವಾರ ಲೋಕಸಭೆಯೊಳಗೆ ನುಗ್ಗಿ ಹೊಗೆ ಎಬ್ಬಿಸಿ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿದ ಇಬ್ಬರು ದುಷ್ಕರ್ಮಿಗಳು ಸಂಸತ್ ಪ್ರವೇಶಿಸಲು ಸಂಸದ ಪ್ರತಾಪ್‌ ಸಿಂಹ ಅವರ ಪಾಸ್‌ ಪಡೆದಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಪ್ರತಾಪ್ ಸಿಂಹ(Prathap Simha) ಅವರನ್ನು ಕೂಡಲೇ ಸಂಸದ ಸ್ಥಾನದಿಂದ ವಜಾಖೊಳಿಸಬೇಕು ಎಂದು ಕಾಂಗ್ರೆಸ್ ಆಗ್ರಿಸುತ್ತಿದೆ.

Advertisement

ಹೌದು, ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ಬಿಜೆಪಿ(BJP) ಸಂಸದರನ್ನು ಯಾಕೆ ವಶಕ್ಕೆ ಪಡೆದಿಲ್ಲ? ಒಂದು ವೇಳೆ ಕಾಂಗ್ರೆಸ್(Congress) ಸಂಸದರಿಂದ ಪಾಸ್ ಪಡೆದಿದ್ದರೆ ನೀವು ಸುಮ್ಮನಿರುತ್ತಿದ್ದಿರೆ? ಎಂದು ಪ್ರಶ್ನಿಸಿದೆ. ಈ ಸಂಸತ್‌ ದಾಳಿಯ ಹಿಂದೆ ಪ್ರತಾಪ್‌ ಸಿಂಹ ಅವರ ಪ್ರಮುಖ ಪಾತ್ರವಿದೆ ಹಾಗಾಗಿ ತನಿಖೆ ಮುಗಿಯುವವರೆಗೂ ಪ್ರತಾಪ್‌ ಸಿಂಹ ಅವರನ್ನು ಸಂಸತ್‌ ಸದಸ್ಯ ಸ್ಥಾನದಿಂದ ವಜಾ ಮಾಡಿ ಎಂದು ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

Advertisement

ಅಂದಹಾಗೆ ಈ ಒಂದು ವಿಚಾರವನ್ನೇ ಇಟ್ಟುಕೊಂಡಿರುವ ಕಾಂಗ್ರೆಸ್ ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು, ತನಿಖೆ ಮುಗಿಯುವವರೆಗೆ ಪ್ರತಾಪ್‌ ಸಿಂಹ ಅವರನ್ನು ಸಂಸತ್‌ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿದೆ. ಅಲ್ಲದೆ ಸಂಸತ್ತಿಗೆ ನುಗ್ಗಿದ ಘಾತುಕರು ಪಾಸ್ ಪಡೆದಿದ್ದು ಪ್ರತಾಪ್ ಸಿಂಹ ಅವರಿಂದ. ಈ ದಾಳಿಕೊರರು ಪ್ರತಾಪ್ ಸಿಂಹ ಅವರ ಆಪ್ತ ವಲಯದವರೇ? ಪ್ರತಾಪ್ ಸಿಂಹರಿಂದಲೂ ಈ ದಾಳಿಯ ಷಡ್ಯಂತ್ರ ನಡೆದಿತ್ತೇ? ಈ ಎಲ್ಲಾ ಸಂಗತಿಗಳ ತನಿಖೆ ನಡೆಸಲು ಇದುವರೆಗೂ ಪ್ರತಾಪ್ ಸಿಂಹ ಅವರನ್ನು ವಶಕ್ಕೆ ಪಡೆದಿಲ್ಲವೇಕೆ?" ಎಂದು ಕರ್ನಾಟಕ ಕಾಂಗ್ರೆಸ್‌ ಸಾಮಾಜಿಕ ಜಾಲತಾಣಗಳಲ್ಲಿ ಖಾರವಾಗಿ ಪ್ರಶ್ನಿಸಿದೆ. ಈ ದಾಳಿಯಲ್ಲಿ ಪ್ರತಾಪ್ ಸಿಂಹರ ಹೆಸರು ಮೇಲ್ನೋಟದಲ್ಲೇ ಕಂಡುಬಂದಿದೆ. ಸ್ಪೀಕರ್ ಓಂ ಬಿರ್ಲಾ ಅವರು ಸಂಸದ ಪ್ರತಾಪ್ ಸಿಂಹ ಅವರನ್ನು ಈ ಕೂಡಲೇ ಸಂಸತ್ ಸದಸ್ಯ ಸ್ಥಾನದಿಂದ ವಜಾಗೊಳಿಸಿ, ತನಿಖೆ ನಡೆಸಬೇಕು ಎಂದು ಹೇಳಿದೆ.

ಇನ್ನು ನಿನ್ನೆ ಸಂಜೆ ಪ್ರತಾಪ್ ಸಿಂಹ ಅವರು ಸ್ಪೀಕರ್ ಬಳಿ ತೆರಳಿ ಆರೋಪಿ ಸಾಗರ್ ಶರ್ಮಾ ಅವರ ತಂದೆ ಶಂಕರ್ ಲಾಲ್ ಶರ್ಮಾ ನಮಗೆ ಪರಿಚಿತರು. ಅವರು ನಮ್ಮ ಕ್ಷೇತ್ರ ಮೈಸೂರಿನಲ್ಲಿ ನೆಲೆಸಿದ್ದಾರೆ. ಹೊಸ ಸಂಸತ್ ಭವನವನ್ನು ನೋಡಬೇಕೆಂದು ಅನೇಕ ಬಾರಿ ವಿಸಿಟರ್ ಪಾಸ್ಗಾಗಿ ಮನವಿ ಮಾಡಿದ್ದರು. ಅಲ್ಲದೆ ಸಾಗರ್ ಶರ್ಮಾ, ಸಂಸತ್ತಿಗೆ ಭೇಟಿ ನೀಡಲು ತಮ್ಮ ಆಪ್ತ ಸಹಾಯಕ ಮತ್ತು ತಮ್ಮ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಹೀಗಾಗಿ ಪಾಸ್ ನೀಡಲಾಗಿದೆ. ಇದನ್ನು ಹೊರತುಪಡಿಸಿ ಹೆಚ್ಚುವರಿ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: Loka sabha: ಸಂಸತ್ತಿಗೆ ಆಗಂತುಕರು ನುಗ್ಗಿದ್ದಾಗ ಒಳಗಿದ್ದ ರಾಹುಲ್ ಗಾಂಧಿ ಏನು ಮಾಡಿದ್ರು ಗೊತ್ತಾ?!

Advertisement
Advertisement
Advertisement