ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bhavani revanna: ಭವಾನಿ ರೇವಣ್ಣ ಕಾರು ಅಪಘಾತ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಒಂದೂವರೆ ಕೋಟಿ ರೂಪಾಯಿ ಕಾರಿನ ಅಸಲಿ ಸತ್ಯ ಬಯಲು !!

02:47 PM Dec 07, 2023 IST | ಹೊಸ ಕನ್ನಡ
UpdateAt: 05:26 PM Dec 09, 2023 IST
Advertisement

Bhavani revanna: ಕೆಲವು ದಿನಗಳ ಹಿಂದಷ್ಟೇ ಶಾಸಕ ಹಾಗೂ ಮಾಜಿ ಸಚಿವರಾದ ಎಚ್ ಡಿ ರೇವಣ್ಣ ಅವರ ಧರ್ಮಪತ್ನಿ ಭವಾನಿ ರೇವಣ್ಣ(Bhavani revanna) ಅವರ ಒಂದೂವರೆ ಕೋಟಿ ಕಾರು ಹಾಸನದ ಬಳಿ ಅಪಘಾತಕ್ಕೀಡಾಗಿ ಸಾಕಷ್ಟು ವಿವಾದಕ್ಕೀಡಾಗಿತ್ತು. ಈ ಕುರಿತಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿ ಭವಾನಿ ರೇವಣ್ಣನವರ ದರ್ಪದ ಮಾತುಗಳಿಗೆ, ಅಹಂಕಾರಕ್ಕೆ ರಾಜ್ಯದ ಜನ ಛೀಮಾರಿ ಹಾಕಿದ್ದರು. ಇದೀಗ ಈ ಪ್ರಕರಣಕ್ಕೆ ರೋಚಕ ತಿರುವು ಒಂದು ಸಿಕ್ಕಿದೆ.

Advertisement

ಹೌದು, ಅಪಗಾತವಾದಾಗ ಭವಾನಿ ರೇವಣ್ಣನವರಿಗೆ ಜೀವಕ್ಕಿಂತ ತಮ್ಮ ಕಾರು ಹೆಚ್ಚಾಗಿತ್ತು. ವಿಡಿಯೋದಲ್ಲಿ ಬರೀ ಒಂದೂವರೆ ಕೋಟಿ ಕಾರು ಎಂದು ಅರಚುವುದು, ಕೆಟ್ಟ ಶಬ್ದಗಳಿಂದ ಬೈಯುವುದು ಕೇಳುತ್ತಿತ್ತೇ ವಿನಹ ಮಾನವೀಯತೆಯ ಒಂದು ಮಾತೂ ಬರುತ್ತಿರಲಿಲ್ಲ. ತಪ್ಪು ಮಾಡಿದ್ದು ಭವಾನಿಯವರಾದರೆ ಕ್ಷಮೆ ಕೇಳಿದ್ದು ಮಾತ್ರ ಅವರ ಮಕ್ಕು ಹಾಗೂ ಪತಿ ರೇವಣ್ಣ. ಸದ್ಯ ಇದೀಗ ಕಾರಿನ ಮಾಲೀಕತ್ವದ ಕುರಿತು ಪರಿಶೀಲನೆ ಮಾಡಿದಾಗ ಭವಾನಿ ಪ್ರಯಾಣ ಮಾಡುತ್ತಿದ್ದ ಕಾರು ಬಿಬಿಎಂಪಿಯ ಪ್ರಥಮ ದರ್ಜೆ ಗುತ್ತಿಗೆದಾರರಿಗೆ ಸೇರಿದಾಗಿದೆ ಎಂಬ ವಿಚಾರ ಬಯಲಾಗಿದ್ದು ಸದ್ಯ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.

ಇದನ್ನು ಓದಿ: Meftal Tablets: ನೋವು ನಿವಾರಿಸಲು ಈ ಮಾತ್ರೆ ಸೇವಿಸುತ್ತೀರಾ?! ಹಾಗಿದ್ರೆ ಹುಷಾರ್, ಕೇಂದ್ರದಿಂದ ರೋಗಿಗಳನ್ನು ಸೇರಿ ವೈದ್ಯರಿಗೂ ಬಂತು ಖಡಕ್ ಎಚ್ಚರಿಕೆ !!

Advertisement

ಅಂದಹಾಗೆ ಈ ಕಾರು ಆಶ್​ಪ್ರಾ ಇನ್​ಫ್ರಾ ಇಂಜಿನಿಯರ್ಸ್​​ ಪ್ರವೈಟ್​ ಲಿಮಿಟೆಡ್​ ಅನ್ನೋ ಕಂಪನಿ ಹೆಸರಲ್ಲಿ ರಿಜಿಸ್ಟರ್​ ಆಗಿದೆ. ಈ ವಿಚಾರ ತಿಳಿಯುತ್ತಿದಂತೆ ಆ ಕಾರನ್ನು ಭವಾನಿ ರೇವಣ್ಣ ಅವರಿಗೆ ಗುತ್ತಿಗೆದಾರರು ಕೊಟ್ಟಿದ್ಯಾಕೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯ ಕಾರ್ಯದರ್ಶಿ ವಿ.ಆರ್.ಮರಾಠೆ, ಸಾಮಾಜಿಕ ಕಾರ್ಯಕರ್ತ ರೊನಾಲ್ಡ್ ಪ್ರಶ್ನೆ ಮಾಡಿದ್ದಾರೆ. ಇದರೊಂದಿಗೆ ಇವರು ಬಿಬಿಎಂಪಿ ಕಂಟ್ರಾಕ್ಟರ್​ ಆಗಿದ್ದು, ಇವರಿಗೂ ಗೌಡ್ರ ಕುಟುಂಬಕ್ಕೂ ಏನ್​ ಸಂಬಂಧವೇನು? ಅನ್ನೋ ಪ್ರಶ್ನೆಗಳ ಮುನ್ನೆಲೆಗೆ ಬಂದಿವೆ.

ಇದನ್ನು ಓದಿ: Pan Card: ದೇಶಾದ್ಯಂತ ಪಾನ್ ಕಾರ್ಡ್ ಗೆ ಬಂತು ಹೊಸ ರೂಲ್ಸ್ - ಮಿಸ್ ಆದ್ರೆ 10,000 ಕಟ್ಟಬೇಕಾದೀತು ಹುಷಾರ್ !!

Advertisement
Advertisement