ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Coronavirus JN 1 Variant: ಕೇರಳ ಬಳಿಕ ಈ ಎರಡು ರಾಜ್ಯಗಳಲ್ಲಿ ಆರ್ಭಟ ಹೆಚ್ಚಿಸಿದೆ ಕಿಲ್ಲರ್ ಕೊರೊನಾ!! ಜನರೇ ಎಚ್ಚರ.. !!

03:25 PM Dec 20, 2023 IST | ಕಾವ್ಯ ವಾಣಿ
UpdateAt: 01:54 AM Dec 21, 2023 IST
Advertisement

Coronavirus JN 1 Variant: ಕೋವಿಡ್‌ ಹೊಸ ಉಪತಳಿ JN.1 (Coronavirus JN 1 Variant), ಇದೀಗ ಕೇರಳ ಬಳಿಕ ಇನ್ನೂ ಎರಡು ರಾಜ್ಯಗಳಲ್ಲಿ ಪತ್ತೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ. JN.1 ಹೆಸರಿನ ಕೊರೊನಾವೈರಸ್ ರೂಪಾಂತರವು ಲಕ್ಸೆಂಬರ್ಗ್‌ನಲ್ಲಿ ಮೊದಲು ಗುರುತಿಸಲಾದ ಸಬ್ ವೇರಿಯೆಂಟ್ ಪಿರೋಲಾ ರೂಪಾಂತರದ (BA.2.86) ವಂಶಸ್ಥವಾಗಿದೆ. ಇದು ಸ್ವತಃ ಒಮಿಕ್ರಾನ್ ಸಬ್ ವೇರಿಯೆಂಟ್ ಎಂಬುದು ಗಮನಾರ್ಹವಾಗಿದೆ.

Advertisement

ಮಾಹಿತಿಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಒಂದು ಮತ್ತು ಗೋವಾದಲ್ಲಿ 18, JN.1 ಪ್ರಕರಣ ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಕಳವಳ ಹೆಚ್ಚಾಗುವಂತೆ ಮಾಡಿದೆ.
ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಮತ್ತೆ ಆತಂಕ ಸೃಷ್ಟಿಸಿರುವ ಕರೋನಾ ವೈರಸ್‌ನ ಜೆಎನ್.1 ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಚಿಂತೆಯ ವಿಷಯವಾಗಿದೆ. ಮುಖ್ಯವಾಗಿ ಡಿಸೆಂಬರ್ 11 ರಂದು, ದೇಶದಲ್ಲಿ ಒಟ್ಟು 938 ಕರೋನಾ ಸಕ್ರಿಯ ಪ್ರಕರಣಗಳು ದಾಖಲಾಗಿತ್ತು. ನಿನ್ನೆ (ಡಿ.19) ವೇಳೆಗೆ ಈ ಅಂಕಿಅಂಶಗಳು ಎರಡು ಸಾವಿರದತ್ತ ಸಮೀಪಿಸಿದ್ದು ಕೇವಲ 9 ದಿನಗಳಲ್ಲಿ ಕೊರೊನಾ ಪ್ರಕರಣಗಳು ದ್ವಿಗುಣಗೊಂಡಿದೆ. ಪ್ರಸ್ತುತ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಕಾಲೋಚಿತ ಮಾದರಿಯಾಗಿ ನೋಡಬೇಕು ಎಂದು INSACOG (ಸೆಂಟ್ರಲ್ ಗೌರ್ನಮೆಂಟ್ ಫೋರಂ ಲ್ಯಾಬ್ಸ್) ಹೇಳುತ್ತದೆ.

ಇನ್ನು JN.1 ಹೊಸ ಕೋವಿಡ್ ರೂಪಾಂತರದ ಲಕ್ಷಣಗಳೆಂದರೆ, ಜ್ವರ, ಮೂಗು ಸೋರುವುದು, ಗಂಟಲು ನೋವು, ತಲೆನೋವು. ಇದಲ್ಲದೆ, ಹೆಚ್ಚಿನವರಲ್ಲಿ ಇದು ಸೌಮ್ಯ ಮೇಲ್ಭಾಗದ ಉಸಿರಾಟದ ರೋಗಲಕ್ಷಣಗಳನ್ನು ಹೊಂದಿರುತ್ತದೆ.

Advertisement

Advertisement
Advertisement